'ನರೇಂದ್ರ ಮೋದಿ ಪ್ರಧಾನಿಯಾಗುತ್ತಾರೆಂದು ಧೀರೂಭಾಯ್ ಅಂಬಾನಿ 1990 ರಲ್ಲೇ ಭವಿಷ್ಯ ನುಡಿದಿದ್ದರು'! 
ದೇಶ

'ನರೇಂದ್ರ ಮೋದಿ ಪ್ರಧಾನಿಯಾಗುತ್ತಾರೆಂದು ಧೀರೂಭಾಯ್ ಅಂಬಾನಿ 1990 ರಲ್ಲೇ ಭವಿಷ್ಯ ನುಡಿದಿದ್ದರು'!

'ನರೇಂದ್ರ ಮೋದಿ ಭಾರತದ ಪ್ರಧಾನಿಯಾಗುತ್ತಾರೆ ಎಂದು 500 ವರ್ಷಗಳ ಹಿಂದೆಯೇ ನಾಸ್ಟ್ರಾಡಾಮಸ್ ಎಂಬ ಫ್ರೆಂಚ್‌ ಜ್ಯೋತಿಷಿ ಹೇಳಿದ್ದ ವಿಷಯ ಹಳೆಯದು. ಹೊಸ ವಿಷಯ ಏನಪ್ಪಾ ಅಂದರೆ...

ನವದೆಹಲಿ: 'ನರೇಂದ್ರ ಮೋದಿ ಭಾರತದ ಪ್ರಧಾನಿಯಾಗುತ್ತಾರೆ ಎಂದು 500 ವರ್ಷಗಳ ಹಿಂದೆಯೇ ನಾಸ್ಟ್ರಾಡಾಮಸ್ ಎಂಬ ಫ್ರೆಂಚ್‌ ಜ್ಯೋತಿಷಿ ಹೇಳಿದ್ದ ವಿಷಯ ಹಳೆಯದು. ಹೊಸ ವಿಷಯ ಏನಪ್ಪಾ ಅಂದರೆ, ನರೇಂದ್ರ ಮೋದಿ ಪ್ರಧಾನಿಯಾಗುತ್ತಾರೆ ಎಂದು 1990 ರಲ್ಲಿ ಉದ್ಯಮಿ ಧೀರೂಭಾಯ್ ಅಂಬಾನಿ ಹೇಳಿದ್ದರಂತೆ.

ರಿಲಾಯನ್ಸ್ ಸಮೂಹದ ಅಧ್ಯಕ್ಷ ಅನಿಲ್ ಅಂಬಾನಿ ಈ ವಿಷಯವನ್ನು ಬಹಿರಂಗಗೊಳಿಸಿದ್ದು, ಹಿಂದೊಮ್ಮೆ ನರೇಂದ್ರ ಮೋದಿ ಅವರ ಬಗ್ಗೆ ಮಾತನಾಡುತ್ತಾ, "ದೀರ್ಘಾವಧಿಯಲ್ಲಿ ನರೇಂದ್ರ ಮೋದಿ ಒಳ್ಳೆಯ ನಾಯಕರಾಗಲಿದ್ದಾರೆ ಎಂದು ಹೇಳಿದ್ದರು" ಎಂದಿದ್ದಾರೆ.

ನರೇಂದ್ರ ಮೋದಿ 2001 ರಲ್ಲಿ ಗುಜರಾತ್ ನ ಮುಖ್ಯಮಂತ್ರಿಯಾಗುವುದಕ್ಕೂ ಮುನ್ನ ಅಂದರೆ 1990 ರಲ್ಲಿ ನರೇಂದ್ರ ಮೋದಿ ಅವರನ್ನು ಧೀರೂಭಾಯ್ ಅಂಬಾನಿ ತಮ್ಮ ನಿವಾಸಕ್ಕೆ ಆಹ್ವಾನಿಸಿದ್ದರು. "ಸುದೀರ್ಘ ಮಾತುಕತೆ ನಡೆಸಿ ಮೋದಿ ತಮ್ಮ ಮನೆಯಿಂದ ಹೋರಾಟ ನಂತರ, ಮೋದಿ ಮುಂದೊಂದು ದಿನ ದೇಶದ ಪ್ರಧಾನಿಯಾಗುತ್ತಾರೆ ಎಂದು ನನ್ನ ತಂದೆ ಅಭಿಪ್ರಾಯಪಟ್ಟಿದ್ದರು ಎಂದು ಅನಿಲ್ ಅಂಬಾನಿ ತಿಳಿಸಿದ್ದಾರೆ. 
ತಮ್ಮ ಭವಿಷ್ಯವಾಣಿ ನಿಜವಾಗಿರುವುದನ್ನು ಕಂಡು ನನ್ನ ತಂದೆ ಸ್ವರ್ಗದಲ್ಲಿ ಸಂತಸಗೊಂಡಿರುತ್ತಾರೆ ಎಂದು ಅನಿಲ್ ಅಂಬಾನಿ ಹೇಳಿದ್ದಾರೆ. ನರೇಂದ್ರ ಮೋದಿ ಓರ್ವ ಅದ್ಭುತ ಕನಸುಗಾರ ಹಾಗು ಅರ್ಜುನನಂತೆ ಸ್ಪಷ್ಟತೆ ಹಾಗು ಉದ್ದೇಶ ಹೊಂದಿರುವ ವ್ಯಕ್ತಿ ಎಂದು ಧೀರುಭಾಯ್ ಅಂಬಾನಿ ಹೇಳಿದ್ದರು ಎಂದಿದ್ದಾರೆ ಅನಿಲ್ ಅಂಬಾನಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ವಲಸೆ ವೀಸಾ ಅರ್ಜಿದಾರರಿಗೆ ಟ್ರಂಪ್‌ ಸರ್ಕಾರ ಶಾಕ್‌: ವಲಸೆ ನೀತಿ ಮತ್ತಷ್ಟು ಕಠಿಣ, ವಿಶ್ವದಾದ್ಯಂತ VISA ಸಂದರ್ಶನಗಳಿಗೆ ಬ್ರೇಕ್‌..!

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಡವರ ಬದುಕಿಗೆ ಬೆಲೆ ಏರಿಕೆ ಬರೆ: ‘ಅಚ್ಛೇ ದಿನ್ ಆಯ್ತು ದುಬಾರಿ ದಿನ್: ಅಗತ್ಯ ವಸ್ತುಗಳ ಬೆಲೆ ಏರಿಕೆ ಬೆನ್ನಲ್ಲೇ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!