ದೇಶ

ವಿಕಲಾಂಗರಿಗಾಗೊಂದು ಆಧುನಿಕ ಸ್ವಯಂವರ

Shilpa D

ಚೆನ್ನೈ: ಜೀವನ ಸಂಗಾತಿ, ಮದುವೆ , ದಾಂಪತ್ಯ, ಸಹಜ ಜೀವನ ಇದು ಪ್ರತಿಯೊಬ್ಬ ಮನುಷ್ಯನ ಜೀವನದ ಒಂದು ಘಟ್ಟ, ವಿಕಲಾಂಗ ಚೇತನರಿಗೂ ಇದನ್ನು ನೆರೆವೇರಿಸಲು  ಶ್ರೀಗೀತಾ ಭವನ ಟ್ರಸ್ಟ್ ಮತ್ತು ತಮಿಳುನಾಡಿನ ಢಿಫರೆಂಟ್ಲಿ ಎಬಲ್ ಡ್ ಚಾರಿಟೇಬಲ್ ಟ್ರಸ್ಟ್ ವಿಕಲಾಂಗ ಚೇತನರಿಗಾಗಿಯೇ ಆಧುನಿಕ  ಸ್ವಯಂವರ ಏರ್ಪಡಿಸಿತು.

ಈ ಟ್ರಸ್ಟ್ ಈ ವರ್ಷ ವಿಕಲಾಂಗರಿಗಾಗಿ 7ನೇ ಆವೃತಿಯ ಸ್ವಯಂವರ ಏರ್ಪಡಿಸಿತ್ತು, ಇದರಲ್ಲಿ ವಿಕಲಾಂಗರು ಮತ್ತು ಆರ್ಥಿಕವಾಗಿ ಬಲಹೀನರಾಗಿರುವ ಕುಟುಂಬಗಳ ಮಕ್ಕಳು ಸತಿಪತಿಗಳಾದರು.

ನಾವು ವಿಕಲಾಂಗರು ನಮಗೆ ಸಂಗಾತಿಗಳು ಸಿಗುವುದಿಲ್ಲ ಎಂದು ಭವಿಷ್ಯದ ಬಗ್ಗೆ ಚಿಂತಿಸುವವರಿಗೆ ಸಮಾಧಾನ ಹೇಳಿ ಅವರಲ್ಲಿ ಆತ್ಮ ವಿಶ್ವಾಸ ತುಂಬಲು ಈ ವೇದಿಕೆ ಸಹಾಯ ಮಾಡುತ್ತದೆ ಎಂದು ಮ್ಯಾನೇಜಿಂಗ್ ಟ್ರಸ್ಚ್ರಿ ಅಶೋಕ್ ಕುಮಾರ್ ಗೋಯೆಲ್ ಹೇಳಿದ್ದಾರೆ,

ತಮಿಳುನಾಡಿನ 9 ಜಿಲ್ಲೆಗಳನ್ನು ಮುಂಬರುವ ದಿನಗಳಲ್ಲಿ ಆರಿಸಿಕೊಳ್ಳಲಾಗುವುದು, ತಿರುವಲ್ಲೂರ್, ಪೆರಂಬದೂರ್, ವಿಲ್ಲುಪುರಂ ಈರೋಡ್ ನ 30 ಜೋಡಿಗಳನ್ನು ಮುಂದಿನ ದಿನಗಳಲ್ಲಿ ಆಯ್ಕೆ ಮಾಡಿಕೊಳ್ಳಲಾಗುವುದು ಎಂದು ಎಂದು ಹೇಳಿದ್ದಾರೆ. ಇದುವರೆಗೊ ನಡೆದ ಸ್ವಯಂವರ ಗಳಿಂದು ಸುಮಾರು 300 ಜೋಡಿಗಳು ದಂಪತಿಗಳಾಗಿದ್ದಾರೆ.

ಪ್ರತಿ ವರ್ಷ ಸ್ವಯಂವರದಲ್ಲಿ ಪಾಲ್ಗೊಳ್ಳಲು ಬರುವ ವಿಕಲಾಂಗರಿಗೆ ಉಚಿತ ಆಹಾರ, ವಸತಿ, ಪ್ರಯಾಣ ಭತ್ಯೆಗಳನ್ನು ನೀಡುತ್ತೇವೆ ಎಂದು ಅವರು ಹೇಳಿದ್ದಾರೆ. ಜೊತೆಗೆ ಹಿಂದೂ ಸಂಪ್ರದಾಯದಂತೆ ವಿವಾಹದ ವಿಧಿ ವಿಧಾನಗಳನ್ನು ನಡೆಸಲಾಗುವುದು, ವಿವಾಹಕ್ಕೆ ಬೇಕಾದ ತಾಳಿ, ಕಾಲುಂಗರ ಸೇರಿದಂತೆ ಅವಶ್ಯಕ ವಸ್ತುಗಳನ್ನು ಟ್ರಸ್ಟ್ ವತಿಯಿಂದ ನೀಡಲಾಗುವುದು  ಎಂದು ಹೇಳಿದ್ದಾರೆ.

SCROLL FOR NEXT