ಜಲ್ಲಿಕಟ್ಟು ಕಾರ್ಯಕರ್ತರು ಸೌಂದರ್ಯಾ ರಜನಿಕಾಂತ್ ಪ್ರಾಣಿದಯಾ ಮಂಡಳಿ ಸದಸ್ಯೆಯಾಗಿದ್ದಕ್ಕೆ ಪ್ರತಿಭಟನೆ ನಡೆಸುತ್ತಿರುವುದು
ತಿರುಚಿ: ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅವರ ಕಿರಿಯ ಪುತ್ರಿ ಸೌಂದರ್ಯ ರಜನಿಕಾಂತ್ ಪ್ರಾಣಿ ದಯಾ ಮಂಡಳಿಯ ಸಹ ಆಯ್ಕೆ ಸದಸ್ಯೆಯಾಗಿ ಸೇರ್ಪಡೆಗೊಂಡ ನಂತರ ವೀರವಿಲಯಾತು ಮೀಟ್ಪು ಕಝ್ಹಗಮ್ ಎಂಬ ಜಲ್ಲಿಕಟ್ಟು ಆಟದ ಪರವಾಗಿರುವ ಕಾರ್ಯಕರ್ತರು ಸೌಂದರ್ಯಾ ರಜನಿಕಾಂತ್ ಪ್ರತಿಕೃತಿಗೆ ಚಪ್ಪಲಿಯಿಂದ ಹೊಡೆದು ವಿರೋಧ, ಆಕ್ರೋಶ ವ್ಯಕ್ತಪಡಿಸಿದರು.
ತಿರುಚಿ ರೈಲು ನಿಲ್ದಾಣ ಸಮೀಪ ಪ್ರತಿಭಟನೆ ನಡೆಸಿದ ಜಲ್ಲಿಕಟ್ಟು ಪರ ಕಾರ್ಯಕರ್ತರು ಸೌಂದರ್ಯಾ ಆ ಹುದ್ದೆಯಿಂದ ಕೆಳಗಿಳಿಯಬೇಕು ಎಂದು ಒತ್ತಾಯಿಸಿದರು. ಸ್ವತಃ ರಜನಿಕಾಂತ್ ಅವರೇ ತಮಿಳು ಚಿತ್ರ ಮುರುತ್ತು ಕಾಲೈಯಲ್ಲಿ ಎತ್ತು ತರಬೇತುದಾರನಾಗಿ ಅಭಿನಯಿಸಿದ್ದು, ಅದರಿಂದ ತಮಿಳು ನಾಡಿನ ಗ್ರಾಮೀಣ ಭಾಗದ ಯುವಕರ ಮನ ಗೆಲ್ಲುವಲ್ಲಿ ಸಫಲರಾದರು. ತಮಿಳರ ಸಹಾಯದಿಂದ ಚಿತ್ರರಂಗದಲ್ಲಿ ಬಹಳ ಎತ್ತರಕ್ಕೆ ಬೆಳೆದ ರಜನಿಕಾಂತ್ ಅವರ ಮಗಳಾಗಿ ಅವರು ಪ್ರಾಣಿದಯಾ ಮಂಡಳಿಗೆ ಸೇರ್ಪಡೆಗೊಂಡದ್ದು ದುರದೃಷ್ಟಕರ ಮತ್ತು ಅಸ್ವೀಕೃತ ಅವರು ತಮ್ಮ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಇಲ್ಲದಿದ್ದರೆ ಪ್ರತಿಭಟನೆ ಮುಂದುವರಿಸುವುದಾಗಿ ಆ ಬಣದ ಮುಖ್ಯ ಸಂಚಾಲಕ ಟಿ.ರಾಜೇಶ್ ತಿಳಿಸಿದ್ದಾರೆ.
ಪ್ರಾಣಿದಯಾ ಮಂಡಳಿ ಆರಂಭದಿಂದಲೂ ತಮಿಳು ನಾಡಿನ ಗ್ರಾಮೀಣ ಭಾಗದ ಜನರ ಸಂಪ್ರದಾಯವಾದ ಜಲ್ಲಿಕಟ್ಟನ್ನು ವಿರೋಧಿಸುತ್ತಾ ಬಂದಿದ್ದು ಸುಪ್ರೀಂ ಕೋರ್ಟಿಗೆ ಕೂಡ ಹೋಗಿತ್ತು.