ತಾಯಿ ಶವ ಹೊತ್ತ ಹೆಣ್ಣುಮಕ್ಕಳು 
ದೇಶ

ದುಡ್ಡಿಲ್ಲದೆ ತಾಯಿಯ ಅಂತ್ಯಸಂಸ್ಕಾರಕ್ಕೆ ಮನೆಯ ಚಾವಣಿಯ ಕಟ್ಟಿಗೆಗಳನ್ನೇ ಬಳಸಿದ ಹೆಣ್ಣುಮಕ್ಕಳು

ತಾಯಿ ಅಂತ್ಯಸಂಸ್ಕಾರಕ್ಕೆ ಗ್ರಾಮಸ್ಥರು ನೆರವಾಗದ ಕಾರಣ ನಾಲ್ವರು ಹೆಣ್ಣುಮಕ್ಕಳು ಜನ್ಮದಾತೆ ಅಸುನೀಗಿದ್ದ ಮಂಚ ಸಮೇತ ರುದ್ರಭೂಮಿಗೆ ಹೊತ್ಯೊಯ್ದು...

ಭುವನೇಶ್ವರ್: ತಾಯಿ ಅಂತ್ಯಸಂಸ್ಕಾರಕ್ಕೆ ಗ್ರಾಮಸ್ಥರು ನೆರವಾಗದ ಕಾರಣ ನಾಲ್ವರು ಹೆಣ್ಣುಮಕ್ಕಳು ಜನ್ಮದಾತೆ ಅಸುನೀಗಿದ್ದ ಮಂಚ ಸಮೇತ ರುದ್ರಭೂಮಿಗೆ ಹೊತ್ಯೊಯ್ದು ಅಂತ್ಯಸಂಸ್ಕಾರ ಮಾಡಿರುವ ಕರುಣಾಜನಕ ಘಟನೆ ಒಡಿಶಾದ ಕಾಳಹಂಡಿಯಲ್ಲಿ ನಡೆದಿದೆ. 
ತಾಯಿ ಶವವನ್ನು ಸ್ಮಶಾನಕ್ಕೆ ತೆಗೆದುಕೊಂಡು ಹೋಗಲು ನೆರವು ನೀಡುವಂತೆ ಹೆಣ್ಣುಮಕ್ಕಳು ಗ್ರಾಮಸ್ಥರಲ್ಲಿ ಮನವಿ ಮಾಡಿಕೊಂಡಿದ್ದಾರೆ. ತಮ್ಮ ಸಹಾಯಕ್ಕೆ ಗ್ರಾಮಸ್ಥರು ಮುಂದಾಗದಿದ್ದಾಗ ನಾಲ್ವರು ಹೆಣ್ಣುಮಕ್ಕಳೇ ತಾಯಿ ಮಲಗಿದ್ದ ಕಟ್ಟಿಗೆ ಮಂಚವನ್ನೇ ತಿರುಗಿಸಿ ಅದರ ಮೇಲೆ ಶವ ಇಟ್ಟು ತಮ್ಮ ಭುಜದ ಮೇಲೆ ಹೊತ್ತು ಸ್ಮಶಾನಕ್ಕೆ ಹೊತ್ತೊಯ್ದಿದ್ದಾರೆ. ಆದರೆ ತಾಯಿ ಮೃತದೇಹವನ್ನು ಸುಡಲು ಹಣವಿಲ್ಲದ ಕಾರಣ ಮನೆಯ ಚಾವಣಿಗೆ ಹಾಕಿದ್ದ ಮರದ ದಿಮ್ಮಿಗಳನ್ನೇ ಬಳಸಿ ಚಿತೆಗೆ ಬೆಂಕಿ ಹೊತ್ತಿಸಿ ಅಂತ್ಯಸಂಸ್ಕಾರ ಮಾಡಿದ್ದಾರೆ. 
ಒಡಿಶಾದ ಡೋಕ್ರಿಪಾಡಾ ಗ್ರಾಮದ ಗೋಲಾಮುಂಡಾ ಬ್ಲಾಕ್ ನ ನಿವಾಸಿಯಾದ 80 ವರ್ಷದ ಕನಕ್ ಸತ್ಪಥಿ ಕಳೆದ ಶುಕ್ರವಾರ ಸಾವನ್ನಪ್ಪಿದ್ದು ಇಕೆಗೆ ನಾಲ್ವರು ಹೆಣ್ಣುಮಕ್ಕಳಿದ್ದರು. ಆ ನಾಲ್ವರು ಹೆಣ್ಣುಮಕ್ಕಳ ಗಂಡಂದಿರು ಮೃತಪಟ್ಟಿದ್ದರಿಂದ ತಾಯಿಯ ಅಂತ್ಯಸಂಸ್ಕಾರಕ್ಕೆ ಈ ನಾಲ್ವರು ಪರದಾಡಬೇಕಾಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!