ದೇಶ

ನನ್ನ ಹೆಸರು 'ಖಾನ್' ಆದರೆ, ನಾನು 'ಉಗ್ರರನ್ನಲ್ಲ': ಘೋಷಣಾ ವಾಕ್ಯ ಪ್ರದರ್ಶಿಸಿದ ವ್ಯಕ್ತಿ

Manjula VN

ಮುಂಬೈ: ನನ್ನ ಹೆಸರು ಖಾನ್ ಆದರೆ, ನಾನು ಭಯೋತ್ಪಾದಕನಲ್ಲ ಎಂಬ ಘೋಷಣಾ ವಾಕ್ಯವೊಂದನ್ನು ಪ್ರದರ್ಶಿಸಿ ಮುಂಬೈನ ಪೊಲೀಸ್ ಠಾಣೆ ಎದುರು ವ್ಯಕ್ತಿಯೊಬ್ಬ ಪ್ರತಿಭಟನೆ ನಡೆಸಿದ್ದಾನೆ.

ಸಾಮಾಜಿಕ ಜಾಲತಾಣ ಹಾಗೂ ವಾಟ್ಸ್ ಅಪ್ ನಲ್ಲಿ ತನ್ನ ಫೋಟೋವನ್ನು ಹಾಕಲಾಗಿದ್ದು, ಈತನೊಬ್ಬ ಭಯೋತ್ಪಾದಕನಾಗಿದ್ದು, ಈತನನ್ನು ಕಂಡ ಕೂಡಲೇ ಪೊಲೀಸರಿಗೆ ಹಿಡಿದುಕೊಂಡಿ ಎಂದು ಹೇಳಲಾಗಿದೆ. ನನ್ನ ಹೆಸರು ಸಯೀದ್ ಅಲಿ ಖಾನ್. ಆದರೆ, ನಾನು ಭಯೋತ್ಪಾದಕನ್ನಲ್ಲ. ಹೀಗಾಗಿ ತಪ್ಪು ಸಂದೇಶ ಮಾಡಿದ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಹೇಳಿ ವ್ಯಕ್ತಿಯೊಬ್ಬ ಮುಂಬೈ ಪೊಲೀಸ್ ಠಾಣೆ ಬಳಿ ಬಂದಿದ್ದಾನೆ.

ಈ ವೇಳೆ ಆತನ ಮಾತನ್ನು ಕೇಳದ ಪೊಲೀಸರು ಆತನನ್ನು ಹೊರಗಟ್ಟಿದ್ದಾರೆ. ಅಲ್ಲದೆ, ದೂರು ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರೆ. ಹೀಗಾಗಿ ನಾನು ಮತ್ತು ನನ್ನ ಕುಟುಂಬಸ್ಥರು ಘೋಷಣಾ ವಾಕ್ಯ ಹಿಡಿದು ಠಾಣೆ ಎದುರು ಪ್ರತಿಭಟನೆ ನಡೆಸಿದೆವು ಎಂದು ಖಾನ್ ಹೇಳಿದ್ದಾರೆ.

ಗೋಪ್ಚಾದ್ ಪಾದ ಎಂಬ ಭೂಮಾಲೀಕ ಕಟ್ಟಡದ ನಿರ್ವಹಣೆಗಾಗಿ ರು. 2 ಸಾವಿರ ಹಣವನ್ನು ಹೆಚ್ಚುವರಿಯಾಗಿ ನೀಡುವಂತೆ ಕೇಳಿದ್ದ. ಇದಕ್ಕೆ ನಾನು ನಿರಾಕರಿಸಿದ್ದೆ. ಈ ವೇಳೆ ಬೆದರಿಕೆ ಹಾಕಿದ್ದ. ಅಲ್ಲದೆ, ಟೆಂಪೊವೊಂದಕ್ಕೆ ಬೆಂಕಿಯನ್ನು ಹೆಚ್ಚಿದ್ದ. ಈ ದ್ವೇಷ ಹಿನ್ನೆಲೆಯಲ್ಲಿ ನನ್ನ ಫೊಟೋವನ್ನು ವಾಟ್ಸ್ ಅಪ್ ನಲ್ಲಿ ಹಾಕಿ, ಈತನೊಬ್ಬ ಭಯೋತ್ಪಾದಕನಾಗಿದ್ದು, ಈ ವ್ಯಕ್ತಿಯನ್ನು ಎಲ್ಲಿಯಾದರೂ ನೋಡಿದರೆ ಹಿಡಿದು ಪೊಲೀಸರಿಗೆ ಒಪ್ಪಿಸುವಂತೆ ತಪ್ಪು ಸಂದೇಶವನ್ನು ರವಾನಿಸಿದ್ದಾನೆ. ಇದೀಗ ನಾನು ಎಲ್ಲಿಯೇ ಹೋದರೂ ಸಮಸ್ಯೆ ಎದುರಿಸುತ್ತಿದ್ದೇನೆ. ಜನರು ನನ್ನನ್ನು ಸಂಶಯದಿಂದಲೇ ನೋಡುತ್ತಿದ್ದಾರೆಂದು ಹೇಳಿಕೊಂಡಿದ್ದಾರೆ. ಇದೀಗ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

SCROLL FOR NEXT