ರಾಹುಲ್ ಗಾಂಧಿ 
ದೇಶ

ಬಡವರ ಪರ ಹೋರಾಟ ನಡೆಸುತ್ತಿದ್ದಾಗ ನನ್ನ ವಿರುದ್ಧ ಕೇಸ್ ದಾಖಲಾಯ್ತು: ರಾಹುಲ್ ಗಾಂಧಿ

ನಾನು ಬಡವರ ಪರ ನಾನು ಹೋರಾಟ ನಡೆಸುತ್ತಿದ್ದಾಗ ನನ್ನ ವಿರುದ್ಧ ಕೇಸು ದಾಖಲಿಸಲಾಯಿತು ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ....

ಗುವಾಹಟಿ: ನಾನು ಬಡವರ ಪರ ನಾನು ಹೋರಾಟ ನಡೆಸುತ್ತಿದ್ದಾಗ ನನ್ನ ವಿರುದ್ಧ ಕೇಸು ದಾಖಲಿಸಲಾಯಿತು ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್  ಗಾಂಧಿ ಆರೋಪಿಸಿದ್ದಾರೆ.

ನಾನು ದೇಶದಲ್ಲಿರುವ ರೈತರ ಪರ, ಹಾಗೂ ದೇಶದಲ್ಲಿರುವ ಬಡವರ ಪರ ಅವರ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿದ್ದೆ,  ದೇಶದಲ್ಲಿರುವ ನಿರುದ್ಯೋಗಿ ಯುವಕರ ಪರ ಹೋರಾಟ ನಡೆಸುತ್ತಿದ್ದೆ. ಹೀಗಾಗಿ ನನ್ನ ವಿರುದ್ಧ ಆರ್ ಎಸ್ ಎಸ್ ನವರು ಕೇಸು ದಾಖಲಿಸಿದ್ದಾರೆ ಎಂದು ದೂರಿದ್ದಾರೆ.

ಗುವಾಹಟಿಯಲ್ಲಿ ಮಾತನಾಡಿದ ಅವರು, ಬರ್ಪೆಟಾ ಸತ್ರ ಘಟನೆ ಸಂಬಂಧ ರಾಹುಲ್ ನ್ಯಾಯಾಲಯಕ್ಕೆ ಹಾಜರಾಗಬೇಕೆಂದು ಕೋರ್ಟ್ ನೀಡಿರುವ ಆದೇಶದ ಸಂಬಂಧ ಪ್ರತಿಕ್ರಿಯೆ ನೀಡಿದ ಅವರು, ನನ್ನ ಮೇಲೆ ಮತ್ತಷ್ಟು ಕೇಸುಗಳನ್ನು ದಾಖಲಿಸಲಿ, ನಾನು ಮಾತ್ರ ಬಡವರ ಪರ ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದು ಹೇಳಿದ್ದಾರೆ.

ರಾಹುಲ್ ಗಾಂಧಿ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಬಗ್ಗೆ ಜನರಿಗೆ ಕೆಟ್ಟ ಸಂದೇಶ ನೀಡಿ ಕಳಂಕ ತರುತ್ತಿದ್ದಾರೆ ಎಂದು ಆರೋಪಿಸಿ ಆರ್ ಎಸ್ ಎಸ್ ಕಾರ್ಯಕರ್ತ ಅಂಜನ್ ಬೋರಾ ಎಂಬುವರು ದೂರು ದಾಖಲಿಸಿದ್ದರು.

ನಾನು ಆರ್ ಎಸ್ ಎಸ್ ತತ್ವ ಸಿದ್ಧಾಂತಗಳ ವಿರೋಧಿ. ದೇಶವನ್ನ ಒಡೆಯುವ ಯಾವುದೇ ಸಂಘಟನೆಗಳ ತತ್ವ ಸಿದ್ಧಾಂತಗಳನ್ನು ನಾನು ವಿರೋಧಿಸುತ್ತೇನೆ. ದೇಶದ ಜನರ ಒಗ್ಗಟ್ಟನ್ನು ನಾನು ಬಯಸುತ್ತೇನೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇಂಧನ ಸ್ಥಾವರಗಳ ಮೇಲಿನ ದಾಳಿಯನ್ನು ನಿಲ್ಲಿಸಲು ರಷ್ಯಾ-ಉಕ್ರೇನ್ ಒಪ್ಪಿಕೊಂಡಿವೆ: ಟ್ರಂಪ್ ಘೋಷಣೆ

ಕೊನೆಯ ಓವರ್‌ನಲ್ಲಿ ಭಾರತಕ್ಕೆ ವಿಂಡೀಸ್ ವಿರುದ್ಧ ರೋಚಕ ಜಯ: T20 ಸರಣಿಯಲ್ಲಿ 2-1 ಮುನ್ನಡೆ!

'We're Sorry': ಅಭಿಜಿತ್ ದೀಪ್ಕೆಗೆ ಅಜ್ಜಿಯ ಸಾವಿನ ಬಗ್ಗೆ ತಿಳಿಸಿದ್ದ ಮಹಿಳಾ ಪೊಲೀಸ್; ಹೇಗಿತ್ತು CJP ನಾಯಕನ ಪ್ರತಿಕ್ರಿಯೆ...: ವಿಡಿಯೋ ವೈರಲ್!

'ಮತದಾನದ ಹಕ್ಕನ್ನೇ ಕಸಿದರೆ ಯಾವ ಪಕ್ಷವೂ ಸುರಕ್ಷಿತವಾಗಿರಲ್ಲ': SIR ವಿರುದ್ಧ ದೇಶಾದ್ಯಂತ ಹೋರಾಟಕ್ಕೆ CJP ಕರೆ

ಸ್ಟಿಂಗ್‌ ಆಪರೇಷನ್ ಆರೋಪ: ಶಾಂಗ್ರೀಲಾ ಹೋಟೆಲ್‌ನಲ್ಲಿ ಯಾರ ಜೊತೆ ಕುಳಿತಿದ್ರಿ; ಸಿಎಂ ಶಿವಕುಮಾರ್ ವಿರುದ್ಧ HDK ಹೊಸ ಬಾಂಬ್