ಪೊಲೀಸ್ ಠಾಣೆಯಲ್ಲಿ ಶಾಸಕರ ಮುಂದೆ ಮಂತ್ರವಾದಿ ಬಾಬಾ ಡಿಸ್ಕೊ ಡ್ಯಾನ್ಸ್ 
ದೇಶ

ಪೊಲೀಸ್ ಠಾಣೆಯಲ್ಲಿ ಶಾಸಕರ ಮುಂದೆ ಮಂತ್ರವಾದಿ ಬಾಬಾ ಡಿಸ್ಕೊ ಡ್ಯಾನ್ಸ್: ವಿಡಿಯೋ ವೈರಲ್

ಪೊಲೀಸರ ಮುಂದೆ ಆರೋಪಿ ಡಿಸ್ಕೋ ಡ್ಯಾನ್ಸ್ ಮಾಡಲು ಸಾಧ್ಯವೇ? ಆದರೆ ಇಲ್ಲೊಬ್ಬ ಆರೋಪಿ ಶಾಸಕ ಮತ್ತೆ ಪೊಲೀಸರ ಮುಂದೆಯೋ ಡಿಸ್ಕೋ ಡ್ಯಾನ್ಸ್ ..

ಹೈದರಾಬಾದ್: ಪೊಲೀಸರ ಮುಂದೆ ಆರೋಪಿ ಡಿಸ್ಕೋ ಡ್ಯಾನ್ಸ್ ಮಾಡಲು ಸಾಧ್ಯವೇ?  ಆದರೆ ಇಲ್ಲೊಬ್ಬ ಆರೋಪಿ ಶಾಸಕ ಮತ್ತೆ ಪೊಲೀಸರ ಮುಂದೆಯೋ ಡಿಸ್ಕೋ ಡ್ಯಾನ್ಸ್ ಮಾಡಿದ್ದಾನೆ.

ಮಾಟ ಮಂತ್ರ, ವಂಚನೆ ಹಾಗೂ ಮಕ್ಕಳಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಬಂಧನವಾಗಿದ್ದ ಡಿಸ್ಕೋ ಬಾಬಾನನ್ನು ಪೊಲೀಸ್ ಠಾಣೆಯಲ್ಲಿ ಕುಣಿಸಿದ ಘಟನೆ ಹೈದರಾಬಾದ್‍ನಲ್ಲಿ ನಡೆದಿದೆ.

ಡಿಸ್ಕೋ ಬಾಬಾ ಅಲಿಯಾಸ್ ಅನ್ವರ್ ಉಲ್ಲಾ ಖಾನ್ ಎಂಬಾತ ವಂಚನೆ ಮಾಡಿದ ಆಪಾದನೆ ಮೇಲೆ ಬಂಧಿತನಾಗಿದ್ದು, ಬಂಧಿತನಾದ ಈತ ಪೊಲೀಸ್ ಠಾಣೆಯಲ್ಲಿ ಪೊಲೀಸರ ಎದುರಿಗೆ ಕುಣಿದಿದ್ದಾನೆ. ಬಾಲಿವುಡ್ ಡಿಸ್ಕೋ ಡಾನ್ಸರ್ ಹಾಡಿಗೆ ಹೆಜ್ಜೆ ಹಾಕಿದ ಈತ ಅಲ್ಲಿದ್ದವರಿಗೆ ಸಖತ್ ಮನೋರಂಜನೆ ನೀಡಿದ್ದಾನೆ. ಈತ ಕುಣಿಯುವುದನ್ನ ಪೊಲೀಸರು ನೋಡುತ್ತಿದ್ದರೆ, ಇನ್ನೂ ಕೆಲವರು ಇದನ್ನ ವಿಡಿಯೋ ಮಾಡಿಕೊಂಡಿದ್ದಾರೆ.

ಇದಲ್ಲದೇ ಇನ್ನೊಂದು ಪ್ರಕರಣದಲ್ಲಿ ಈ ಬಾಬಾ 12 ವರ್ಷದ ಬಾಲಕನನ್ನ ಅಪಹರಣ ಮಾಡಿ ಕಿರುಕುಳ ನೀಡಿರುವುದಲ್ಲದೇ, ಆತನ ಕೊಲೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ. ಬಾಬಾ ಮೇಲೆ ಹಲವು ಠಾಣೆಗಳಲ್ಲಿ ವಂಚನೆ ಆರೋಪಗಳಿದ್ದು, ಇದೀಗ ಈತನನ್ನು ಬಂಧಿಸಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಬಂಧನದ ವೇಳೆ ಆತ ಡ್ಯಾನ್ಸ್ ಗೆ ಬಳಸುವಂತ ಬಟ್ಟೆ ಧರಿಸಿದ್ದ, ಇದನ್ನು ಪೊಲೀಸರು ಪ್ರಶ್ನಿಸಿದಾಗ ನಾನೊಬ್ಬ ಡಿಸ್ಕೊ ಡ್ಯಾನ್ಸರ್ ಎಂದು ಹೇಳಿದ್ದಾನೆ,ಜೊತೆಗೆ ನಾನು ಹಲವು ಸಮಾರಂಭಗಳಲ್ಲಿ ಹೋಗಿ ಪ್ರದರ್ಶನ ನೀಡುವುದಾಗಿಯೂ ತಿಳಿಸಿದ್ದಾನೆ. ಈ ವೇಳೆ ಶಾಸಕ ಅನ್ವರ್ ಆಗಿದ್ದರೇ ನೀನು ಡ್ಯಾನ್ಸ್ ಮಾಡಿ ತೋರಿಸು ಎಂದು ಕೇಳಿದಾಗ ಆತ, ಠಾಣೆಯಲ್ಲಿ ಡ್ಯಾನ್ಸ್ ಮಾಡಿದ್ದಾನೆ, ಈ ಎಲ್ಲಾ ಘಟನೆ ಪೂರ್ಣವಾಗಿ ಮೊಬೈಲ್ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

'ಆಕೆ ಮಧ್ಯರಾತ್ರಿ 12.30ಕ್ಕೆ ಹೇಗೆ ಹೊರಬಂದಳು?': ಗ್ಯಾಂಗ್ ರೇಪ್ ಕುರಿತು ಮಮತಾ ಬ್ಯಾನರ್ಜಿ ಹೇಳಿಕೆ

ಸರ್ಕಾರಿ ಸಂಸ್ಥೆಗಳು, ಸಾರ್ವಜನಿಕ ಸ್ಥಳಗಳಲ್ಲಿ RSS ಚಟುವಟಿಕೆಗಳನ್ನು ನಿಷೇಧಿಸಿ: ಮುಖ್ಯಮಂತ್ರಿಗೆ ಪ್ರಿಯಾಂಕ್ ಖರ್ಗೆ ಪತ್ರ

RSS ನಿಷೇಧಕ್ಕೆ ಕರೆ: ಸಚಿವ ಪ್ರಿಯಾಂಕ್ ಖರ್ಗೆ ಬೌದ್ಧಿಕ ದಾರಿದ್ರ್ಯತನ ತೋರಿಸುತ್ತದೆ, ಯತ್ನಾಳ್ ಕಿಡಿ!

ಭಾರತ- ಬಾಂಗ್ಲಾದೇಶ ಗಡಿ: ರೂ. 2.82 ಕೋಟಿ ಮೌಲ್ಯದ 'ಚಿನ್ನದ ಬಿಸ್ಕತ್ತು' ಜೊತೆಗೆ ಕಳ್ಳಸಾಗಣೆದಾರನನ್ನು ಬಂಧಿಸಿದ BSF!

SCROLL FOR NEXT