ಆರ್ ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗ್ವತ್
ಪಶ್ಚಿಮ ಬಂಗಾಳದಲ್ಲಿ ಹಿಂದೂಗಳನ್ನು ಒಗ್ಗೂಡಿಸುವ ಉದ್ದೇಶದಿಂದ ಹಾಗೂ ಸಂಘಟನೆಯನ್ನು ಮತ್ತಷ್ಟು ಸದೃಢಗೊಳಿಸುವ ದೃಷ್ಟಿಯಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆ (ಆರ್ ಎಸ್ಎಸ್) ಏ.5 ರಂದು ನಡೆಯಲಿರುವ ರಾಮನವಮಿ ಆಚರಣೆಯನ್ನು ಅದ್ಧೂರಿಯಾಗಿ, ಬೃಹತ್ ಪ್ರಮಾಣದಲ್ಲಿ ನಡೆಸಲು ತೀರ್ಮಾನಿಸಿದೆ.
ರಾಮನವಮಿ ಧಾರ್ಮಿಕ ಹಬ್ಬವಾಗಿದೆ. ಆದರೆ ರಾಮನವಮಿಯ ನಿಮಿತ್ತ ಮೂಲಭೂತವಾದಿಗಳ ಉಪಟಳದ ವಿರುದ್ಧ ಹಿಂದೂಗಳನ್ನು ಒಗ್ಗೂಡಿಸಲು ಸಂಘಟನೆ ಚಿಂತನೆ ನಡೆಸಿದೆ ಎಂದು ಆರ್ ಎಸ್ಎಸ್ ನ ಕಾರ್ಯಕರ್ತರೊಬ್ಬರು ಹೇಳಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಮೂಲಭೂತವಾದಿಗಳ ಉಪಟಳ ಹೆಚ್ಚಾಗುತ್ತಿದೆ. ಪಶ್ಚಿಮ ಬಂಗಾಳದ ಹಲವು ಜಿಲ್ಲೆಗಳಲ್ಲಿ ಬೇರೆ ದೇಶಗಳಿಂದ ನುಸುಳುತ್ತಿರುವವರು ಹೆಚ್ಚಾಗುತ್ತಿದ್ದು, ಮೂಲಭೂತವಾದಿಗಳ ಉಪಟಳವೂ ಹೆಚ್ಚುತ್ತಿದೆ ಎಂದು ಆರ್ ಎಸ್ಎಸ್ ಆತಂಕ ವ್ಯಕ್ತಪಡಿಸಿದೆ.
ಇದಕ್ಕೂ ಮುನ್ನ ಪಶ್ಚಿಮ ಬಂಗಾಳದಲ್ಲಿ ಜಿಹಾದಿಗಳ ಚಟುವಟಿಕೆಯನ್ನು ತಡೆಗಟ್ಟಲು ಕ್ರಮ ಕೈಗೊಳ್ಳಬೇಕೆಂದು ಆರ್ ಎಸ್ಎಸ್ ನಿರ್ಣಯ ಕೈಗೊಂಡಿತ್ತು. ಆರ್ ಎಸ್ಎಸ್ ನ ಕಾರ್ಯಕ್ರಮಗಳಿಗೆ ಬಿಜೆಪಿ ಸಹ ಬೆಂಬಲ ಸೂಚಿಸಿದ್ದು, ರಾಷ್ಟ್ರವಿರೋಧಿಗಳನ್ನು ಎದುರಿಸುವುದಕ್ಕೆ ಜನರನ್ನು ಒಗ್ಗೂಡಿಸಲು ಆರ್ ಎಸ್ಎಸ್ ನ ಕಾರ್ಯಕ್ರಮ ಸಹಕಾರಿಯಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics