ನವದೆಹಲಿ: ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್, ವಾಟ್ಸ್ಆಪ್ ಮತ್ತು ಸ್ಕೈಪ್ ಸೇವೆಗಳನ್ನು ನಿಯಂತ್ರಿಸಲು ಅಗತ್ಯವಾದ ನಿಯಮಾವಳಿಗಳನ್ನು ಶೀಘ್ರ ರೂಪಿಸಲಾಗುವುದು ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ ಗೆ ತಿಳಿಸಿದೆ.
ಕರ್ಮಣ್ಯ ಸಿಂಗ್ ಸರೀನ್ ಎಂಬುವರು ಸುಪ್ರೀಂಕೋರ್ಟ್ ನಲ್ಲಿ ವಾಟ್ಸ್ಆಪ್ ನ ಗೋಪ್ಯತಾ ನೀತಿಯನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದು ಈ ಪ್ರಕರಣದ ವಿಚಾರಣೆ ನಡೆಸುತ್ತಿರುವ ಸುಪ್ರೀಂ ದೂರಸಂಪರ್ಕ ಸಚಿವಾಲಯಕ್ಕೆ ಪ್ರತಿಕ್ರಿಯೆ ನೀಡಲು ಸೂಚಿಸಿತ್ತು. ಅಂತೆ ದೂರ ಸಂಪರ್ಕ ಸಚಿವಾಲಯ ಒಟಿಟಿ ಸೇವೆಗಳ ನಿಯಂತ್ರಣಕ್ಕೆ ನಿಯಮಾವಳಿ ರೂಪಿಸಲಾಗುವುದು ಎಂದು ಸುಪ್ರೀಂಕೋರ್ಟ್ ಗೆ ತಿಳಿಸಿದೆ.
ಓವರ್ ದಿ ಟಾಪ್(ಒಟಿಟಿ) ಸೇವೆ ಬದಗಿಸುವವರು ಮೊಬೈಲ್ ನೆಟ್ ವರ್ಕ್ ಬಳಸಿಕೊಳ್ಳುತ್ತಾರೆ. ಈ ನಂತರ ಆಪ್ ಗಳ ಮೂಲಕ ಮೆಸೇಜ್, ಫೋನ್ ಮಾಡುವ ಸೌಲಭ್ಯ ಒದಗಿಸುತ್ತಾರೆ. ಪ್ರಸ್ತುತ ಈ ಸೇವೆಗಳನ್ನು ನಿಯಂತ್ರಿಸಲು ಯಾವುದೇ ನಿಯಮಾವಳಿ ಇಲ್ಲ ಎಂದು ದೂರ ಸಂಪರ್ಕ ಸಚಿವಾಲಯ ತನ್ನ ಪ್ರತಿಕ್ರಿಯೆಯಲ್ಲಿ ತಿಳಿಸಿದೆ.