ಪಣಜಿ: ದೇಶದಲ್ಲಿ ಮಹಿಳೆಯರ ವಿರುದ್ಧ ಅಪರಾಧಗಳು ಹೆಚ್ಚಾಗಲು ಸಿನಿಮಾಗಳು ಕಾರಣವಾಗಿದ್ದು, ಚಲನಚಿತ್ರಗಳಲ್ಲಿ ಮಹಿಳೆಯರನ್ನು ಸರಿಯಾದ ರೀತಿಯಲ್ಲಿ ತೋರಿಸಿ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಮನೇಕಾ ಗಾಂಧಿ ಒತ್ತಾಯಿಸಿದ್ದಾರೆ.
ತಮಗೆ ಬೇಕಾದಂತೆ ಮಾಡಬಹುದು ಎಂದು ಕೆಲವು ಪುರುಷರು ಮಹಿಳೆಯರ ವಿರುದ್ಧ ಹಿಂಸಾಚಾರ ನಡೆಸಲು ಕಾರಣ ಚಲನಚಿತ್ರಗಳಾಗಿವೆ. ಸಮಾಜಕ್ಕೆ ಸಂದೇಶಗಳನ್ನು ಸಾರುವ ಸಿನಿಮಾಗಳನ್ನು ನೀವು ನೋಡಿದರೆ ಗೊತ್ತಾಗುತ್ತದೆ, ಗಂಡು-ಹೆಣ್ಣಿನಲ್ಲಿ ಪ್ರೀತಿಯೆಂಬುದು ಹುಡುಗಿಯನ್ನು ಹುಡುಗ ಚುಡಾಯಿಸುವ ಮೂಲಕ ಆರಂಭವಾಗುತ್ತದೆ. ಯುವಕ ಮತ್ತು ಆತನ ಸ್ನೇಹಿತರು ಯುವತಿಯ ಸುತ್ತ ಸುತ್ತುವರಿಯುತ್ತಾರೆ, ಆಕೆಗೆ ಮುಜುಗರವಾಗುವ ರೀತಿಯಲ್ಲಿ ನಡೆದುಕೊಳ್ಳುತ್ತಾರೆ.ಚಿತ್ರದ ನಾಯಕ ನಾಯಕಿಯನ್ನು ಸ್ಪರ್ಷಿಸುತ್ತಾನೆ. ನಂತರ ನಿಧಾನವಾಗಿ ನಾಯಕಿ ನಾಯಕನ ಪ್ರೀತಿಯ ಬಲೆಗೆ ಬೀಳುತ್ತಾಳೆ. ಇಂತಹ ದೃಶ್ಯಗಳನ್ನೇ ಬಹುತೇಕ ಚಿತ್ರಗಳಲ್ಲಿ ತೋರಿಸುವುದು ಎಂದು ಸಚಿವೆ ಗೋವಾ ಫೆಸ್ಟ್ ನಲ್ಲಿ ಹೇಳಿದರು.
ಬಾಲಿವುಡ್ ಮತ್ತು ಸ್ಥಳೀಯ ಭಾಷೆಗಳ ಚಿತ್ರಗಳಲ್ಲಿ ಮಹಿಳೆಯರನ್ನು ಅಸಭ್ಯವಾಗಿ ತೋರಿಸುತ್ತಾರೆ. ಇದು ಸಮಾಜದ ಪುರುಷರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಹೇಳಿದರು.
ಪುರುಷರ ಬಲಹೀನತೆ ಕೂಡ ಹಿಂಸಾಚಾರ ಹೆಚ್ಚಾಗಲು ಕಾರಣವಾಗಿದೆ. ತಾನು ಮಾಡುವ ಕೆಲಸದಲ್ಲಿ ವೈಫಲ್ಯ, ಉದ್ಯೋಗ ಸಿಗದಿರುವುದು, ಆರ್ಥಿಕ ಸಮಸ್ಯೆ ಕೂಡ ಮಹಿಳೆಯರ ವಿರುದ್ಧದ ಹಿಂಸಾಚಾರ ಹೆಚ್ಚಾಗಲು ಕಾರಣವಾಗುತ್ತವೆ ಎಂದು ಮನೇಕಾ ಗಾಂಧಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics