ನವದೆಹಲಿ: ಜನತೆಗೆ ದಿನಪೂರ್ತಿ ವಿದ್ಯುತ್ ನೀಡಲು ಪ್ರಯತ್ನಿಸಿ, ಸಾಧ್ಯವಾಗಿಲ್ಲವೇ ನಿಮ್ಮ ಕೆಲಸಕ್ಕೆ ರಾಜೀನಾಮೆ ಕೊಡಿ. ಲಂಚ ಪಡೆಯಬಹುದು ಎಂದು ಮಾತ್ರ ಯೋಚಿಸಲೇ ಬೇಡಿ, ಇದು ಕೇಂದ್ರ ಇಂಧನ ಖಾತೆ ಸಚಿವ ಪಿಯೂಷ್ ಗೋಯಲ್ ಇಂಧನ ಸಚಿವಾಲಯದ ಅಧಿಕಾರಿಗಳಿಗೆ ನೀಡಿದ ಖಡಕ್ ಎಚ್ಚರಿಕೆ.
ದೆಹಲಿಯಲ್ಲಿ ಅವರು ಇಂಧನ ಇಲಾಖೆಯ ಅಧಿಕಾರಿಗಳ ಸಭೆ ಕರೆದಿದ್ದರು. ಅದರಲ್ಲಿ ಜನರಿಗೆ ದಿನಪೂರ್ತಿ ನಿಯಮಿತ ವಿದ್ಯುತ್ ಪೂರೈಕೆಗೆ ಅಧಿಕಾರಿಗಳು ಕೆಲಸ ಮಾಡಬೇಕೆಂದು ತಾಕೀತು ಮಾಡಿದ್ದಾರೆ.
ಯಾರಾದರೂ ಅಧಿಕಾರಿಗಳು ಲಂಚ ತೆಗೆದುಕೊಳ್ಳುವುದು ಗೊತ್ತಾದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ. ಹೊಸ ಕೆಲಸದ ವಿಧಾನಕ್ಕೆ ಹೊಂದಿಕೊಳ್ಳುವುದು ಯಾರಿಗಾದರೂ ಕಷ್ಟ ಅನ್ನಿಸಿದರೆ ಖಂಡಿತಾ ರಾಜೀನಾಮೆ ಕೊಟ್ಟು ಮನೆಗೆ ಹೋಗಬಹುದು ಎಂದು ಖಡಾಖಂಡಿತವಾಗಿ ಹೇಳಿದ್ದಾರೆ. ಅವರು ಸಭೆಯಲ್ಲಿ ಮಾತನಾಡಿದ ವಿವರ ಕೆಳಗಿನ ವಿಡಿಯೋದಲ್ಲಿ ಇದೆ.