ನವದೆಹಲಿ: ಪ್ರತಿ ಸಲ ನಾನು ಭಾರತಕ್ಕೆ ಬಂದಾಗ ನನಗೆ ತವರಿಗೆ ಬಂದ ಅನುಭವವಾಗುತ್ತದೆ ಎಂದು ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಹೇಳಿದ್ದಾರೆ.
ಇಂಡಿಯಾ ಫೌಂಡೇಶನ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 1975 ರಲ್ಲಿ ತಮ್ಮ ಕುಟುಂಬಸ್ಥರನ್ನು ಹತ್ಯೆ ನೆನಪಿಸಿಕೊಂಡ ಅವರು ಘಟನೆ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.
ನಾನು ಮತ್ತು ನನ್ನ ತಂಗಿ ಇರಲು ಮನೆಯಿಲ್ಲದೇ, ದೇಶವಿಲ್ಲದೇ ನಿರಾಶ್ರಿತರಾಗಿದ್ದೆವು. ಈ ವೇಳೆ ಭಾರತದ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ನಮ್ಮ ನೆರವಿಗೆ ಬಂದರು ಎಂದು ಹೇಳಿದ್ದಾರೆ.
ಹಂತಕರು ನಮ್ಮ ಮನೆಯ ಮೇಲೆ ದಾಳಿ ಮಾಡಿ ಒಟ್ಟು 18 ಮಂದಿಯನ್ನು ಕೊಂದಿದ್ದರು, ಅಲ್ಲಿ ಯಾರು ಇರಲಿಲ್ಲ, ಆ ವೇಳೆ ನಾವು ನಿರಾಶ್ರಿತರಾಗಿದ್ದೆವು, ಕೂಡಲೇ ಭಾರತಕ್ಕೆ ಬರುವಂತೆ ಆಹ್ವಾನಿಸಿದವರು ದಿವಂಗತ ಇಂದಿರಾ ಗಾಂಧಿ ಅವರು ಎಂದು ಶೇಖ್ ಹಸೀನಾ ಸ್ಮರಿಸಿದರು.
ಆಗಸ್ಟ್ 15 1975 ರಂದು ಅಂದಿನ ಪ್ರಧಾನಿಯಾಗಿದ್ದ ಶೇಖ್ ಮುಜಿಬುರ್ ರೆಹಮಾನ್, ನನ್ನ ತಾಯಿ, ಮೂವರು ಸಹೋದರರು, ಹೊಸದಾಗಿ ವಿವಾಹವಾಗಿದ್ದ ಇಬ್ಬರು ನಾದಿನಿಯರು. ಮತ್ತು ನನ್ನ ಚಿಕ್ಕಪ್ಪನನ್ನು ಹತ್ಯೆ ಮಾಡಲಾಗಿತ್ತು, ಆ ವೇಳೆ ನಾನು ಮತ್ತು ನನ್ನ ಸಹೋದರಿ ಜರ್ಮನಿಯಲ್ಲಿದ್ದೆವು ಎಂದು ಹೇಳಿ ಶೇಖ್ ಹಸೀನಾ ಭಾವುಕರಾದರು.
ಮನೆಯಿಲ್ಲದೇ ಯಾರ ನೆರವಿಲ್ಲದೇ ಅಂಥಹ ಪರಿಸ್ಥಿತಿಯಲ್ಲಿ ಅಲ್ಲಿ ಹೇಗೆ ಇರುವುದು ಎಂದು ನನಗೆ ತಿಳಿಯಲಿಲ್ಲ. ಪ್ರತಿಯೊಬ್ಬ ಭಾರತೀಯನಿಗೂ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics