ದೇಶ

ಬರ ಪೀಡಿತ ಕರ್ನಾಟಕಕ್ಕೆ 2.5 ಟಿಎಂಸಿ ನೀರು ಬಿಡುಗಡೆ ಮಾಡಿದ "ಮಹಾ"!

Srinivasamurthy VN

ಮುಂಬೈ: ತೀವ್ರ ಬರಗಾಲದಿಂದ ನರಳುತ್ತಿರುವ ಉತ್ತರ ಕರ್ನಾಟಕದ ಭಾಗಕ್ಕೆ ನೀರು ಬಿಡುವ ಮೂಲಕ ಮಹಾರಾಷ್ಟ್ರ ಸರ್ಕಾರ ಮಾನವೀಯತೆ ಮೆರೆದಿದೆ.

ಬಿರು ಬೇಸಿಗೆಯ ಬರಗಾಲದಲ್ಲೂ ಮಹಾರಾಷ್ಟ್ರಸರ್ಕಾರ ತನ್ನ ಕೊಯ್ನಾ ಜಲಾಶಯದಿಂದ ಕರ್ನಾಟಕಕ್ಕೆ 2.5 ಟಿಎಂಸಿ ನೀರು ಹರಿಸಿದ್ದು, ಮಂಗಳವಾರ ಮಧ್ಯರಾತ್ರಿ ಜಲಾಶಯದಿಂದ ಕರ್ನಾಟಕಕ್ಕೆ ನೀರು ಹರಿಸಲಾಗಿದೆ. ಭೀಕರ ಬರಗಾಲ ಮತ್ತು ಮಳೆ ಅಭಾವದಿಂದ ಬಳಲುತ್ತಿರುವ ಕರ್ನಾಟಕ ಸರ್ಕಾರ ನೀರು ಬಿಡುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಮನವಿ ಮಾಡಿತ್ತು. ಅಲ್ಲದೆ ರಾಜ್ಯದ ಬಿಜೆಪಿ ಮುಖಂಡರು ಹಾಗೂ ಸಿಎಂ ಸಿದ್ದರಾಮಯ್ಯ ಅವರು ಬರಗಾಲ ಪೀಡಿತ ಪ್ರದೇಶಕ್ಕೆ ನೀರು ಬಿಡುವಂತೆ ಮನವಿ ಮಾಡಿದ್ದರು.

ಅಂತೆಯೇ ರಾಜ್ಯ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಅವರು ಆಲಮಟ್ಟಿ ಜಲಾಶಯದಿಂದ ಸೊಲ್ಲಾಪುರ ಭಾಗಕ್ಕೆ ನೀರು ಕೊಡಲಾಗುವುದು, ಕೋಯ್ನಾದಿಂದ ಉತ್ತರ ಕರ್ನಾಟಕ ಭಾಗಕ್ಕೆ ನೀರು ಕೊಡುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ತಿಳಿಸಿದ್ದರು. ಈ ಹಿನ್ನಲೆಯಲ್ಲಿ ಮಹಾರಾಷ್ಟ್ರ ಸರ್ಕಾರ ಕರ್ನಾಟಕಕ್ಕೆ ಮಂಗಳವಾರ ರಾತ್ರಿ 2.5 ಟಿಎಂಸಿ ನೀರನ್ನು ಹರಿಸಿದೆ.

SCROLL FOR NEXT