ಮುಸ್ಲಿಂ ಯುವಕನ ಮನೆಯಿಂದ ಯುವತಿಯನ್ನು ಕರೆತರುತ್ತಿರುವುದು 
ದೇಶ

ಪ್ರಿಯತಮೆ ಜೊತೆಗಿದ್ದ ಮುಸ್ಲಿಂ ಯುವಕನ ಮೇಲೆ ಹಿಂದೂ ಯುವವಾಹಿನಿ ಕಾರ್ಯಕರ್ತರಿಂದ ಹಲ್ಲೆ

ಮೀರತ್ ನಲ್ಲಿ ಮತ್ತೊಂದು ನೈತಿಕ ಪೊಲೀಸ್ ಗಿರಿ ವರದಿಯಾಗಿದೆ. ಹಿಂದೂ ಯುವ ವಾಹಿನಿ ಸಂಘಟನೆಯ ಕಾರ್ಯಕರ್ತರು ಮುಸ್ಲಿಂ ಯುವಕನೊಬ್ಬನ ಮನೆಗೆ ನುಗ್ಗಿ ...

ಮೀರತ್ : ಮೀರತ್ ನಲ್ಲಿ ಮತ್ತೊಂದು ನೈತಿಕ ಪೊಲೀಸ್ ಗಿರಿ ವರದಿಯಾಗಿದೆ. ಹಿಂದೂ ಯುವ ವಾಹಿನಿ ಸಂಘಟನೆಯ ಕಾರ್ಯಕರ್ತರು ಮುಸ್ಲಿಂ ಯುವಕನೊಬ್ಬನ ಮನೆಗೆ ನುಗ್ಗಿ ಹಲ್ಲೆ ನಡೆಸಿದ್ದಾರೆ.
ಮೀರತ್‍ನ ಶಾಸ್ತ್ರಿ ನಗರದ ಮುಸ್ಲಿಂ ಯುವಕ ತನ್ನ ಪ್ರೇಯಸಿಯೊಂದಿಗೆ ಇದ್ದಾಗ ಹಿಂದೂ ಯುವ ವಾಹಿನಿ ಕಾರ್ಯಕರ್ತರು ಮನೆಗೆ ನುಗ್ಗಿ ಹಲ್ಲೆ ನಡೆಸಿದ್ದಾರೆ. ಆ ನಂತರ ಈ ಜೋಡಿಯನ್ನು ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ.
ಹಿಂದೂ ಯುವತಿಯನ್ನು ತನ್ನ ಮನೆಗೆ ಕರೆದುಕೊಂಡು ಬಂದಿದ್ದ ಮುಸ್ಲಿಂ ಯುವಕ, ಆಕೆಯನ್ನು ಬಲವಂತವಾಗಿ ಮತಾಂತರ ಗೊಳಿಸಲು ಯತ್ನಿಸುತ್ತಿದ್ದ  ಎಂದು ಹಿಂದೂ ಯುವವಾಹಿನಿಯ ನರೇಂದ್ರ ಸಿಂಗ್ ತೋಮಾರ್ ಆರೋಪಿಸಿದ್ದಾರೆ.
ಮುಸ್ಲಿಂ ಯುವಕ ಹಿಂದೂ ಯುವತಿ ಜೊತೆ ಸಲ್ಲಾಪದಲ್ಲಿ ತೊಡಗಿದ್ದ, ಜೊತೆಗೆ ಆಕೆಯನ್ನು ಮತಾಂತರಗೊಳಿಸಲು ಯತ್ನಿಸಿದ್ದ, ಆದರೆ ಪೊಲೀಸರು ಇದರ ವಿರುದ್ಧ ಕ್ರಮ ಕೈಗೊಂಡಿಲ್ಲ, ಆತನ ಪೂರ್ವಾಪರ ವಿಚಾರಿಸಿದೇ ಮನೆ ಬಾಡಿಗೆಗೆ ನೀಡಿದ ಮಾಲೀಕನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಮೆರಿಕ ಲೆಕ್ಕಾಚಾರವೇ ತಲೆಕೆಳಗೆ: Iran ನಿಂದ ವೇಗವಾಗಿ ಶಸ್ತ್ರಾಸ್ತ್ರ ನೆಲೆಗಳ ಪುನರ್‌ನಿರ್ಮಾಣ, ಈಗಾಗಲೇ ಡ್ರೋನ್ ಉತ್ಪಾದನೆ ಆರಂಭ: ವರದಿ

No police, No court: ಅಕ್ರಮ ಬಾಂಗ್ಲಾ ವಲಸಿಗರು ಇನ್ನು ಮುಂದೆ ನೇರ BSF ವಶಕ್ಕೆ: CM ಸುವೇಂದು ಅಧಿಕಾರಿ ಸೂಚನೆ

'ಗೃಹಲಕ್ಷ್ಮಿ ಹಣ ಕೊಡಿಸಿ'; ಹೈಕೋರ್ಟ್ ಮೆಟ್ಟಿಲೇರಿದ ಮಹಿಳೆಯರು, ಸರ್ಕಾರಕ್ಕೆ ನೋಟಿಸ್ ಜಾರಿ

IPL 2026: ಕೊನೆಗೂ 13 ವರ್ಷಗಳ ಹಳೆಯ Chris Gayle ದಾಖಲೆ ಮುರಿದ Sai Sudharsan

IPL 2026: CSK ಫ್ಲೇಆಫ್ ಕನಸು ಛಿದ್ರ, GT ವಿರುದ್ಧ 89 ರನ್ ಗಳ ಹೀನಾಯ ಸೋಲು, Dhoni ಇಲ್ಲದೇ ಅಭಿಯಾನ ಮುಕ್ತಾಯ!

SCROLL FOR NEXT