ಸಿಬಿಎಸ್ಇ ಪಠ್ಯಪುಸ್ತಕದಲ್ಲಿರುವ ಪಾಠ 
ದೇಶ

36-24-36 ಆಕಾರ ಮಹಿಳೆಯರಿಗೆ ಉತ್ತಮ: ವಿವಾದ ಎಬ್ಬಿಸಿರುವ 12ನೇ ತರಗತಿಯ ಪಾಠ

ಸಿಬಿಎಸ್ ಇ ಪಠ್ಯಕ್ರಮದ 12ನೇ ತರಗತಿಯ ಡಾ.ವಿ.ಕೆ.ಶರ್ಮ ಅವರು ಬರೆದ ಶಾರೀರಿಕ ಶಿಕ್ಷಣ ಪಠ್ಯ...

ನವದೆಹಲಿ: ಸಿಬಿಎಸ್ ಇ ಪಠ್ಯಕ್ರಮದ 12ನೇ ತರಗತಿಯ ಡಾ.ವಿ.ಕೆ.ಶರ್ಮ ಅವರು ಬರೆದ ಶಾರೀರಿಕ ಶಿಕ್ಷಣ ಪಠ್ಯ ಪುಸ್ತಕದ 'ಹೆಲ್ತ್ ಅಂಡ್ ಫಿಸಿಕಲ್ ಎಜುಕೇಶನ್' ಪಾಠದಲ್ಲಿ ಮಹಿಳೆಯರಿಗೆ 36-24-36 ಉತ್ತಮ ಶರೀರ ರಚನೆಯಾಗಿದೆ ಎಂದು ಹೇಳಿರುವುದು ಇದೀಗ ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ವಿರೋಧಕ್ಕೆ ಕಾರಣವಾಗಿದೆ.
ಪುಸ್ತಕವನ್ನು ದೆಹಲಿ ಮೂಲದ ನ್ಯೂ ಸರಸ್ವತಿ ಹೌಸ್ ಪ್ರಕಟಿಸಿದ್ದು ಸಿಬಿಎಸ್ ಇಯ ಅನೇಕ ಶಾಲೆಗಳಲ್ಲಿ ಈ ಪಠ್ಯವನ್ನು ಬೋಧಿಸಲಾಗುತ್ತಿದೆ.
ಆದರೆ ಇದಕ್ಕೆ ಸ್ಪಷ್ಟಣೆ ನೀಡಿರುವ ಸಿಬಿಎಸ್ಇ, ಖಾಸಗಿ ಪ್ರಕಾಶ ಕರು ಶಿಫಾರಸ್ಸು ಮಾಡುವ ಯಾವುದೇ ಪುಸ್ತಕಗಳನ್ನು ಶಾಲೆಗಳಲ್ಲಿ ಬೋಧಿಸಲು ಶಿಫಾರಸ್ಸು ಮಾಡುವುದಿಲ್ಲ ಎಂದು ಹೇಳಿದೆ.
''ಮಹಿಳೆಯರಿಗೆ 36-24-36 ಶರೀರದ ಆಕಾರವಿದ್ದರೆ ಉತ್ತಮ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಮಿಸ್ ವರ್ಲ್ಡ್ ಅಥವಾ ಮಿಸ್ ಯೂನಿವರ್ಸ್ ಸ್ಪರ್ಧೆಗಳಲ್ಲಿ ಶರೀರದ ಆಕಾರವನ್ನು ಕೂಡ ಪರಿಗಣಿಸಲಾಗುತ್ತದೆ ಎಂದು ಫಿಸಿಯೋಲಜಿ ಅಂಡ್ ಸ್ಪೋರ್ಟ್ಸ್ ಎಂಬ ಪಠ್ಯದಲ್ಲಿ ವಿವರಿಸಲಾಗಿದ್ದು ಅದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಿಬಿಎಸ್ಇ ತನ್ನ ಹೇಳಿಕೆಯಲ್ಲಿ, ಖಾಸಗಿ ಪ್ರಕಾಶಕರ ಪುಸ್ತಕಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಶಾಲೆಗಳು ತುಂಬಾ ಜಾಗರೂಕರಾಗಬೇಕಾಗಿದ್ದು ಪುಸ್ತಕದಲ್ಲಿ ಯಾವುದಾದರೂ ಆಕ್ಷೇಪಾರ್ಹ ವಿಷಯಗಳಿದ್ದರೆ ಅವುಗಳನ್ನು ತೆಗೆದುಹಾಕಬೇಕು. ಯಾವುದೇ ವರ್ಗ, ಸಮುದಾಯ, ಲಿಂಗ, ಧಾರ್ಮಿಕ ಗುಂಪುಗಳ ಜನರ ಭಾವನೆಗಳಿಗೆ ಧಕ್ಕೆ ತರುವಂತಿರಬಾರದು. ತಮ್ಮ ಶಾಲೆಯ ಮಕ್ಕಳ ಅಧ್ಯಯನಕ್ಕೆ ಪಠ್ಯಪುಸ್ತಕಗಳನ್ನು ಶಿಫಾರಸು ಮಾಡುವ  ಶಾಲೆಗಳೇ ಇದಕ್ಕೆ ಹೊಣೆಯಾಗಿರುತ್ತವೆ ಎಂದು ಹೇಳಿದೆ.
ಟ್ವಿಟ್ಟರ್ ಬಳಕೆದಾರರಲ್ಲಿ ಅನೇಕರು ಈ ಪಠ್ಯದ ಫೋಟೋವನ್ನು ತಮ್ಮ ಪುಟದಲ್ಲಿ ಹಂಚಿಕೊಂಡಿದ್ದಾರೆ. ಪ್ರಕಾಶಕರು ತಕ್ಷಣವೇ ಈ ಪಠ್ಯವನ್ನು ತೆಗೆದುಹಾಕಬೇಕು ಮತ್ತು ಶಾಲೆ ಈ ಪುಸ್ತಕವನ್ನು ಬದಲಾಯಿಸಬೇಕು ಎಂದು ಅನೇಕ ಮಂದಿ ಒತ್ತಾಯಿಸಿದ್ದಾರೆ.
ಖಾಸಗಿ ಪ್ರಕಾಶಕರ ಪಠ್ಯಪುಸ್ತಕಗಳ ಗುಣಮಟ್ಟದ ಮೌಲ್ಯಮಾಪನ ವ್ಯವಸ್ಥೆ ಇಲ್ಲ. ತನ್ನ ಶಾಲೆಗಳಿಗೆ ಇದೇ ಪುಸ್ತಕ ಬೇಕು ಎಂದು ಸಿಬಿಎಸ್ಇ ಶಿಫಾರಸ್ಸು ಮಾಡುವುದಿಲ್ಲ. ಶಾಲೆಗಳೇ ಆಯ್ಕೆ ಮಾಡಿಕೊಳ್ಳುತ್ತವೆ ಎಂದು ಮಾನವ ಸಂಪನ್ಮೂಲ ಸಚಿವಾಲಯಯ ರಾಜ್ಯ ಸಚಿವ ಉಪೇಂದ್ರ ಕುಶ್ವಾಹ ಕಳೆದ ತಿಂಗಳು ಲೋಕಸಭೆಯಲ್ಲಿ ಲಿಖಿತ ಉತ್ತರ ನೀಡಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ದಿನದ ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥರು ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟದ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

SCROLL FOR NEXT