ದೇಶ

ಹಬ್ಬಗಳ ಆಚರಣೆಯಲ್ಲಿ ತೊಡಗಿರುವ ದೇಶದ ಜನತೆಗೆ ಶುಭ ಕೋರಿದ ಪ್ರಧಾನಿ ಮೋದಿ

Sumana Upadhyaya
ನವದೆಹಲಿ: ವಿಷು ಹಬ್ಬ, ಗುಡ್ ಫ್ರೈಡೆ, ಡಾ. ಬಿ.ಆರ್.ಅಂಬೇಡ್ಕರ್ ಅವರ 126ನೇ ಜಯಂತಿ ಹೀಗೆ ಹಲವು ಆಚರಣೆಗಳನ್ನು ಆಚರಿಸುತ್ತಿರುವ ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಶುಭಾಶಯ ತಿಳಿಸಿದ್ದಾರೆ.
 ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಗೌರವ ನಮನ ಸಲ್ಲಿಸಿದ ಪ್ರಧಾನಿ ಬೆಂಗಾಳಿಯನ್ನರಿಗೆ ಇಂದು ಹೊಸ ವರ್ಷದ ಅಂಗವಾಗಿ ಸುಖ, ಶಾಂತಿ, ನೆಮ್ಮದಿ ತರಲೆಂದು ಆಶಿಸಿದರು.
ಅಸ್ಸಾಂ ಜನತೆಗೆ ಬೊಹಗ್ ಬಿಹು ಅಂಗವಾಗಿ ಹೊಸ ವರ್ಷದ ಶುಭ ಕೋರಿದರು. 
ದಕ್ಷಿಣ ಭಾರತದಲ್ಲಿ ಇಂದು ತಮಿಳಿಯನ್ನರು ಪುಥಾಂದು ಎಂದು ಹೊಸ ವರ್ಷದ ದಿನವನ್ನು ಕರೆಯುತ್ತಿದ್ದು ಕೇರಳಿಗರು ಮತ್ತು ಕರಾವಳಿ ಜನತೆ ವಿಷು ಸಂಕ್ರಮಣವನ್ನು ಇಂದು ಆಚರಿಸುತ್ತಾರೆ. 
ಒಡಿಶಾದಲ್ಲಿ ಕೂಡ ಇಂದು ಮಹಾ ವಿಷುಬ ಸಂಕ್ರಾಂತಿ ಆಚರಿಸಲಾಗುತ್ತದೆ. ಇನ್ನೊಂದೆಡೆ ಕ್ರೈಸ್ತ ಬಾಂಧವರು ಗುಡ್ ಫ್ರೈಡೆ ಆಚರಿಸುತ್ತಾರೆ. ಇವರೆಲ್ಲರಿಗೂ ಪ್ರಧಾನಿ ಶುಭಾಶಯ ತಿಳಿಸಿದ್ದಾರೆ.
SCROLL FOR NEXT