ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ 
ದೇಶ

ಉಪ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲವು: ಕೇಜ್ರಿವಾಲ್'ಗೆ ಟಾಂಗ್ ನೀಡಿದ ಸುಬ್ರಮಣಿಯನ್ ಸ್ವಾಮಿ

ದೆಹಲಿಯ ರಜೌರಿ ಗಾರ್ಡೆನ್ ವಿಧಾನಸಭಾ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷ ಸೋಲವು ಕಂಡಿರುವ ಹಿನ್ನಲೆಯಲ್ಲಿ ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿಯವರು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಶುಕ್ರವಾರ...

ನವದೆಹಲಿ: ದೆಹಲಿಯ ರಜೌರಿ ಗಾರ್ಡೆನ್ ವಿಧಾನಸಭಾ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷ ಸೋಲವು ಕಂಡಿರುವ ಹಿನ್ನಲೆಯಲ್ಲಿ ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿಯವರು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಶುಕ್ರವಾರ ಟಾಂಗ್ ನೀಡಿದ್ದಾರೆ. 
ರಜೌರಿ ಗಾರ್ಡೆನ್ ವಿಧಾನಸಭಾ ಕ್ಷೇತ್ರ ಉಪ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲವು ಸಾಧಿಸಿರುವ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಪ್ರತೀ ಚುನಾವಣೆಯಲ್ಲಿ ಜನರು ಆಮ್ ಆದ್ಮಿ ಪಕ್ಷವನ್ನು ತಿರಸ್ಕರಿಸುತ್ತಿದ್ದು, ಕೇಜ್ರಿವಾಲ್'ರನ್ನು ದ್ರೋಹಿ ಎಂದು ಭಾವಿಸುತ್ತಿದ್ದಾರೆ. ರಜೌರಿ ಗಾರ್ಡೆನ್ ಸೋಲಿನ ಮೂಲಕ ಕೇಜ್ರಿವಾಲ್ ಒಬ್ಬ ಸಾರ್ವತ್ರಿಕ ವಂಚಕ ಎಂಬುದು ಬಹಿರಂಗವಾಗಿದೆ ಎಂದು ಹೇಳಿದ್ದಾರೆ. 
ಜನತೆ ಬಹಳ ಉತ್ಸಾಹಭರಿತವಾಗಿ ಕೇಜ್ರಿವಾಲ್ ಅವರ ಬೆಂಬಲಕ್ಕೆ ನಿಂತಿದ್ದರು. ಇದೀಗ ಅದೇ ಜನತೆ ಕೇಜ್ರಿವಾಲ್ ಅವರನ್ನು ದ್ರೋಹಿ ಎಂದು ಭಾವಿಸುತ್ತಿದ್ದಾರೆ. ಕೇಜ್ರಿವಾಲ್ ರಿಂದ ಬಹಳ ಅಸಮಾಧಾನಗೊಂಡಿದ್ದಾರೆ. ಹೀಗಾಗಿಯೇ ಪ್ರತೀ ಚುನಾವಣೆಯಲ್ಲಿಯೂ ಕೇಜ್ರಿವಾಲ್ ಅವರನ್ನು ದೂರ ತಳ್ಳುತ್ತಿದ್ದಾರೆ. ಪಂಜಾಬ್ ನ ಜನತೆ ಕೂಡ ಕೇಜ್ರಿವಾಲ್ ಅವರನ್ನು ತಿರಸ್ಕರಿಸಿತ್ತು, ಗೋವಾ ಜನತೆ ಕೂಡ ತಿರಸ್ಕರಿಸಿತ್ತು. ಇದೀಗ ದೆಹಲಿ ಕೂಡ ಪಟ್ಟಿಗೆ ಸೇರಿದೆ ಎಂದು ತಿಳಿಸಿದ್ದಾರೆ. 
ಇದೇ ವೇಳೆ ಇವಿಎಂ ವಿವಾದ ಸಂಬಂಧ ವಿರೋಧ ಪಕ್ಷಗಳು ಪ್ರಣಬ್ ಮುಖರ್ಜಿಯವರ ಮೊರೆ ಹೋಗಿರುವ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಯಾರೊಬ್ಬರೂ ಅಧ್ಯಯನ ಮಾಡಲು ಹೋಗಿಲ್ಲ. ಇದೀಗ ಜನರೇ ಈ ಬಗ್ಗೆ ನಗಲು ಆರಂಭಿಸಿದ್ದಾರೆ. ಇವಿಎಂಗೆ ಕಾಂಗ್ರೆಸ್ ವಿರೋಧಿಸುತ್ತದೆ ಎಂಬುದನ್ನು ಹೇಳಲು ಕಾಂಗ್ರೆಸ್ ನಲ್ಲಿರುವ ಜನರೇ ನಾಚಿಕೆ ಪಡುತ್ತಿದ್ದಾರೆ. ಅಮರೇಂದರ್ ಸಿಂಗ್ ಅವರು ಯಾವಾಗಲೂ ತಮ್ಮ ವರ್ಚಸ್ಸಿನ ಬಗ್ಗೆ ಚಿಂತಿಸುತ್ತಿರುತ್ತಾರೆ. ಹೀಗಾಗಿ ಅವರು ಅವರ ನಿಲುವನ್ನು ತೆಗೆದುಕೊಂಡಿದ್ದಾರೆ. 
ಉತ್ತರಪ್ರದೇಶ ರಾಜ್ಯ ಒಟ್ಟು 20 ವಿವಿಪಿಎಟಿಯಲ್ಲಿ ಬಿಜೆಪಿ 17ರಲ್ಲಿ ಗೆಲವು ಸಾಧಿಸಿದೆ. ವಿವಿಪಿಎಟಿಯಿದ್ದಿದ್ದರೆ, ಬಿಜೆಪಿ ಸೋಲು ಕಾಣುತ್ತಿತ್ತು ಎಂದು ಹೇಳಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Jantar Mantar ಬಳಿ ಭಾರೀ ಹೈಡ್ರಾಮಾ: ಬ್ಯಾರಿಕೇಡ್ ದಾಟಿದ CJP ನಾಯಕರು ಪೊಲೀಸ್ ವಶಕ್ಕೆ; ಪ್ರತಿರೋಧ ನಿಷೇಧ ಸಾಧ್ಯವಿಲ್ಲ-ಕೇಂದ್ರದ ವಿರುದ್ಧ ದೀಪ್ಕೆ ಆಕ್ರೋಶ

‘ಪ್ರತಿಭಟನೆ ನಮ್ಮ ಹಕ್ಕು, ಬಂಧನಗಳಿಂದ ಹೋರಾಟ ಹತ್ತಿಕ್ಕಲು ಸಾಧ್ಯವಿಲ್ಲ’: ದೇಶಾದ್ಯಂತ ಚಳವಳಿ ವಿಸ್ತರಿಸಲು Cockroach Janta Party ಪಣ (INTERVIEW)

ನೀವೂ ಪ್ರಧಾನಿ ಮೋದಿಯಂತೆಯೇ ದಬ್ಬಾಳಿಕೆದಾರರು, ಧೈರ್ಯವಿದ್ದರೆ 'ನಿಮ್ಮ ಆ ಚಿಕ್ಕ ಶಾಲು' ಧರಿಸಿ ಹೊರ ಬಂದು ನೋಡಿ: BJP-RSSಗೆ ರಾಹುಲ್ ಗಾಂಧಿ ಸವಾಲು

SC/ST ಮೀಸಲಾತಿ ಹೆಚ್ಚಳ ರದ್ದು: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಬಿಗ್ ಶಾಕ್, ಭಾರೀ ಹಿನ್ನಡೆ..!

ಕಾವೇರಿ ಕಗ್ಗಂಟು: "ಕುಡಿಯಲು ನಮಗೇ ನೀರಿಲ್ಲ, ತಮಿಳುನಾಡಿಗೆ ಕೊಡೋದು ಹೇಗೆ..?" ಸುಪ್ರೀಂ ಕೋರ್ಟ್‌ನಲ್ಲಿ ಕರ್ನಾಟಕ ವಾದ..!