ದೇಶ

ಉತ್ತರ ಪ್ರದೇಶ: ಲಖನೌ ನಲ್ಲಿ 6,005 ಬಾಲ ಕಾರ್ಮಿಕರಿಗೆ ತರಬೇತಿ

Srinivas Rao BV
ಲಖನೌ: ಉತ್ತಮ ಉದ್ಯೋಗಗಳಿಗೆ ತಯಾರಾಗಲು ಉತ್ತರ ಪ್ರದೇಶ ಬಾಲ ಕಾರ್ಮಿಕರಿಗೆ ತರಬೇತಿ ನೀಡುವ ಮಹತ್ವಾಕಾಂಕ್ಷಿ ಯೋಜನೆಯನ್ನು ರೂಪಿಸಿದೆ. 
ಸರ್ಕಾರದ ಯೋಜನೆಯ ಅಡಿಯಲ್ಲಿ 6,005 ಬಾಲ ಕಾರ್ಮಿಕರಿಗೆ ತರಬೇತಿ ನೀಡಲು ಉದ್ದೇಶಿಸಲಾಗಿದೆ ಎಂದು ಉತ್ತರ ಪ್ರದೇಶ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಭಾರತ ಸರ್ಕಾರದ ಕಾರ್ಮಿಕ ಹಾಗೂ ಉದ್ಯೋಗ ಇಲಾಖೆಯ ನಿರ್ದೇಶನದ ಪ್ರಕಾರ ವಿಶೇಷ ತರಬೇತಿ ನೀಡುವ ಯೋಜನೆಯನ್ನು ಶೀಘ್ರವೇ ಜಾರಿಗೆ ತರಲಾಗುತ್ತದೆ ಎಂದು ಉತ್ತರ ಪ್ರದೇಶದ ಅಧಿಕಾರಿಗಳು ಹೇಳಿದ್ದಾರೆ. 
ಬಾಲಕಾರ್ಮಿಕರನ್ನು ಗುರುತಿಸಲು ಲಖನೌ ದಲ್ಲಿರುವ ಸಮಾಜ ಕಲ್ಯಾಣ ಇಲಾಖೆ ಪುರಸಭೆಯ 110 ವಾರ್ಡ್ ಗಳಲ್ಲಿ, ನಗರ ಪಂಚಾಯಿತಿ, ಗ್ರಾಮೀಣ ಪ್ರದೇಶದ 20 ವಾರ್ಡ್ ಗಳಲ್ಲಿ ಸಮೀಕ್ಷೆ ನಡೆಸಲಾಗಿದ್ದು, 6-14 ವರ್ಷದ ವರೆಗಿನ 6,005 ಬಾಲಕಾರ್ಮಿಕರನ್ನು ಗುರುತಿಸಲಾಗಿದೆ. ಈ ಪೈಕಿ 5,180 ಬಾಲಕಾರ್ಮಿಕರು 9-14 ವರ್ಷದವರಾಗಿದ್ದು, 825 6-8 ವರ್ಷದವರಾಗಿದ್ದಾರೆ. 
ಸಮೀಕ್ಷೆಯಲ್ಲಿ ದಾಖಲಾಗಿರುವ ಬಾಲಕಾರ್ಮಿಕರು ಕಸೂತಿ ಕೆಲಸ, ಮನೆ ಕೆಲಸಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಈ ಬಾಲಕಾರ್ಮಿಕರಿಗೆ ಉತ್ತಮ ಉದ್ಯೋಗಗಳಿಗೆ ತಯಾರಾಗಲು ತರಬೇತಿ ನೀಡುವುದು ಉತ್ತರ ಪ್ರದೇಶ ಸರ್ಕಾರದ ಉದ್ದೇಶವಾಗಿದೆ. 
SCROLL FOR NEXT