ರಕ್ಷಣಾ ತಜ್ಞ ಪಿ.ಕೆ. ಸೆಹ್ಗಲ್
ನವದೆಹಲಿ: ಕುಲ್'ಭೂಷಣ್ ಯಾಧವ್ ಕುರಿತ ಮಾಹಿತಿಯನ್ನು ಪಾಕಿಸ್ತಾನ ಅಷ್ಟು ಸುಲಭವಾಗಿ ಭಾರತಕ್ಕೆ ನೀಡುವುದಿಲ್ಲ ಎಂದು ರಕ್ಷಣಾ ತಜ್ಞ ಪಿ.ಕೆ. ಸೆಹ್ಗಲ್ ಅವರು ಶನಿವಾರ ಹೇಳಿದ್ದಾರೆ.
ಕುಲ್ ಭುಷಮ್ ಜಾಧವ್ ಅವರಿಗೆ ಪಾಕಿಸ್ತಾನ ಸೇನಾ ನ್ಯಾಯಾಲಯ ಗಲ್ಲುಶಿಕ್ಷೆ ನೀಡಿರುವ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಪಾಕಿಸ್ತಾನಕ್ಕೆ ತಾನು ಮಾಡುತ್ತಿರುವುದು ತಪ್ಪು ಎಂದು ತಿಳಿದಿದೆ. ಜಾಧವ್ ಕುರಿತಂತೆ ಮಾಹಿತಿಗಳನ್ನು ಭಾರತಕ್ಕೆ ನೀಡಿದರೆ, ತಾನು ದುರ್ಬಲನಾಗುತ್ತೇನೆಂದು ಪಾಕಿಸ್ತಾನಕ್ಕೆ ತಿಳಿದಿದೆ. ಹೀಗಾಗಿ ಜಾಧವ್ ಕುರಿತಂತೆ ಮಾಹಿತಿಗಳನ್ನು ಪಾಕಿಸ್ತಾನ ಅಷ್ಟು ಸುಲಭವಾಗಿ ಭಾರತಕ್ಕೆ ನೀಡುವುದಿಲ್ಲ ಎಂದು ಹೇಳಿದ್ದಾರೆ.
ಜಾಧವ್ ಕುರಿತಂತೆ ಪಾಕಿಸ್ತಾನ ನಡೆಸಿರುವ ವಿಚಾರಣೆ ಸಂಪೂರ್ಣವಾಗಿ ನಕಲಿಯಾಗಿದೆ. ವಿದೇಶದ ಪ್ರಜೆಗಳನ್ನು ವಿಚಾರಣೆಗೊಳಪಡಿಸಿದಾಗ ಆತನ ಕುರಿತ ಮಾಹಿತಿಗಳನ್ನು ಆತನಿಗೆ ಸಂಬಂಧ ಪಟ್ಟಂತಹ ದೇಶಕ್ಕೆ ನೀಡಬೇಕು. ಆದರೆ, ಜಾಧವ್ ಬಗ್ಗೆ ನಮ್ಮಲ್ಲಿಯೇ ಯಾವುದೇ ಮಾಹಿತಿ ಇಲ್ಲ. ಪಾಕಿಸ್ತಾನ ಅಷ್ಟು ಸುಲಭವಾಗಿ ನಮ್ಮೊಂದಿಗೆ ಮಾಹಿತಿಗಳನ್ನು ಹಂಚಿಕೊಳ್ಳುತ್ತದೆ ಎಂದು ನನಗೆ ನಂಬಿಕೆ ಇಲ್ಲ. ಏಕೆಂದರೆ, ಜಾಧವ್ ಕುರಿತಂತೆ ಭಾರತಕ್ಕೆ ಹೆಚ್ಚು ಮಾಹಿತಿಯನ್ನು ನೀಡಿದಷ್ಟು ಪಾಕಿಸ್ತಾನವೇ ಸಮಸ್ಯೆಯ ಸುಳಿಯಲ್ಲಿ ಸಿಕ್ಕಿಹಾಕಿಕೊಳ್ಳುತ್ತದೆ ಎಂಬುದು ಅದಕ್ಕೆ ಗೊತ್ತಿದೆ. ತಾನು ಮಾಡುತ್ತಿರುವುದು ತಪ್ಪೆಂದು ಪಾಕಿಸ್ತಾನಕ್ಕೇ ಗೊತ್ತಿದೆ. ಗೊತ್ತಿದ್ದರೂ ತಪ್ಪನ್ನು ಮಾಡುತ್ತಿದೆ ಎಂದು ತಿಳಿಸಿದ್ದಾರೆ.