ದೇಶ

ಶ್ರೀನಗರ ಲೋಕಸಭಾ ಕ್ಷೇತ್ರ ಉಪ ಚುನಾವಣೆ: ಮತ ಎಣಿಕೆ ಪ್ರಕ್ರಿಯೆ ಆರಂಭ

Manjula VN
ಕಾಶ್ಮೀರದ: ಜಮ್ಮು ಮತ್ತು ಕಾಶ್ಮೀರ ರಾಜಧಾನಿ ಶ್ರೀನಗರ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯ ಮತಎಣಿಕೆ ಪ್ರಕ್ರಿಯೆ ಶನಿವಾರ ಆರಂಭವಾಗಿದೆ. 
ಏಪ್ರಿಲ್ 9 ರಂದು ಶ್ರೀನಗರ ಸಂಸತ್ ಕ್ಷೇತ್ರದಲ್ಲಿ 38 ಮತಗಟ್ಟೆಗಳನ್ನು ತೆರೆದು ಉಪ ಚುನಾವಣಾ ಪ್ರಕ್ರಿಯೆನ್ನು ಆರಂಭಿಸಲಾಗಿದತ್ತು. ಆದರೆ, ವೇಳೆ ಬುದ್ಗಾಮ್ ಸೇರಿದಂತೆ ಮತ್ತಿತರ ಪ್ರದೇಶಗಳಲ್ಲಿನ ಮತಗಟ್ಟೆಗಳ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದರು. 
ಈ ವೇಳೆ ನಡೆದ ಹಿಂಸಾಚಾರಕ್ಕೆ 8 ಮಂದಿ ಸಾವನ್ನಪ್ಪಿದ್ದರು. ಹಿಂಸಾಚಾರಕ್ಕೆ ಹೆದರಿದ್ದ ಜನತೆ ಮತ ಹಾಕಲು ಧೈರ್ಯ ಮಾಡಿರಲಿಲ್ಲ. ಇದರ ಪರಿಣಾಮ ಅಂದಿನ ಚುನಾವಣೆ ಶೇ.2 ರಷ್ಟು ಮತದಾರರು ಮಾತ್ರ ಮತ ಚಲಾಯಿಸಿದ್ದರು. ಇದು ಆ ರಾಜ್ಯದ ಇತಿಹಾಸದಲ್ಲಿಯೇ ತೀರಾ ಕಳಪೆ ಸಾಧ್ಯನೆಯಾಗಿತ್ತು ಎಂದು ಕೇಂದ್ರ ಚುನಾವಣಾ ಆಯೋಗ ಹೇಳಿತ್ತು. 
ಇದಾದ ಬಳಿಕ ಮರುದಾನ ನಡೆಸುವಾಗಿ ಘೋಷಣೆ ಮಾಡಿದ್ದ ಚುನಾವಣಾ ಆಯೋಗ, ಏಪ್ರಿಲ್ 13 ರಂದು ಮರುದಾನ ಪ್ರಕ್ರಿಯೆಯನ್ನು ಆರಂಭಿಸಿತ್ತು. ಅಂದು ಕೂಡ ಶೇ.7.13ರಷ್ಟು ಮತದಾರರು ಮಾತ್ರ ಮತ ಹಾಕಿದ್ದರು. 
ಲೋಕಸಭಾ ಕ್ಷೇತ್ರ ಉಪ ಚುನಾವಣೆಯ ಕಣದಲ್ಲಿ ಫರೂಕ್ ಅಬ್ದುಲ್ಲಾ ಮತ್ತು ಆಡಳಿತಾರೂಢ ಪಕ್ಷದ ನಜೀರ್ ಅಹ್ಮದ್ ಖಾನ್ ಸೇರಿದಂತೆ ಒಟ್ಟು 9 ಅಭ್ಯರ್ಥಿಗಳು ನಿಂತಿದ್ದು, 9 ಅಭ್ಯರ್ಥಿಗಳ ಭವಿಷ್ಯ ಇಂದು ಬಹಿರಂಗಗೊಳ್ಳಲಿದೆ. 
SCROLL FOR NEXT