ಆ್ಯಸಿಡ್ ದಾಳಿ 
ದೇಶ

ಫೋನ್‌ನಲ್ಲಿ ತಲಾಕ್‌ಗೆ ವಿರೋಧಿಸಿದ ಮಹಿಳೆ ಮೇಲೆ ಆ್ಯಸಿಡ್ ದಾಳಿ

ಉತ್ತರಪ್ರದೇಶದ ಪಿಲಿಬಿತ್ ನಲ್ಲಿ 40 ವರ್ಷದ ಮಹಿಳೆಯೊಬ್ಬರು ಫೋನ್‌ನಲ್ಲಿ ತ್ರಿವಳಿ ತಲಾಕ್ ಗೆ ವಿರೋಧಿಸಿದ್ದರಿಂದ ಆಕೆಯ ಮೇಲೆ ಆ್ಯಸಿಡ್ ದಾಳಿ...

ಪಿಲಿಬಿತ್(ಉತ್ತರಪ್ರದೇಶ): ಉತ್ತರಪ್ರದೇಶದ ಪಿಲಿಬಿತ್ ನಲ್ಲಿ 40 ವರ್ಷದ ಮಹಿಳೆಯೊಬ್ಬರು ಫೋನ್‌ನಲ್ಲಿ ತ್ರಿವಳಿ ತಲಾಕ್ ಗೆ ವಿರೋಧಿಸಿದ್ದರಿಂದ ಆಕೆಯ ಮೇಲೆ ಆ್ಯಸಿಡ್ ದಾಳಿ ನಡೆದಿದೆ. 
ಸಂತ್ರಸ್ತ ಮಹಿಳೆ ರೆಹಾನಾ ಕಳೆದ 18 ವರ್ಷಗಳ ಹಿಂದೆ ಮಾತ್ಲುಬ್ ಎಂಬುವರನ್ನು ವಿವಾಹವಾಗಿದ್ದರು. ನಂತರ ಪತಿ ಜೊತೆ ಅಮೆರಿಕಕ್ಕೆ ತೆರಳಿದ್ದರು. ಆದರೆ 2011ರಲ್ಲಿ ಅವರಿಬ್ಬರ ಸಂಬಂಧ ಹಳಸಿದ್ದರಿಂದ ಇಬ್ಬರು ಭಾರತಕ್ಕೆ ಬಂದರು. 
ಭಾರತದಲ್ಲಿ ಕೆಲ ದಿನ ಇದ್ದ ಮಾತ್ಲುಬ್ ಮತ್ತೆ ಅಮೆರಿಕಕ್ಕೆ ತೆರಳಿದ್ದು ಕೆಲ ದಿನಗಳ ಬಳಿಕ ರೆಹಾನಾರನ್ನು ಅಮೆರಿಕಕ್ಕೆ ಕರೆಸಿಕೊಳ್ಳುವುದಾಗಿ ಹೇಳಿ ಹೋಗಿದ್ದ. ಅಮೆರಿಕಕ್ಕೆ ತೆರಳಿದ ಮಾತ್ಲುಬ್ ಕೆಲ ವರ್ಷಗಳ ನಂತರ ರೆಹಾನಾಗೆ ದೂರವಾಣಿ ಕರೆ ಮಾಡಿ ತಲಾಕ್ ನೀಡಲು ಮುಂದಾಗಿದ್ದ ಆದರೆ ಇದನ್ನು ರೆಹಾನಾ ವಿರೋಧಿಸಿದ್ದರು. 
ಇದೀಗ ರೆಹಾನಾ ಮನೆಯಲ್ಲಿ ಒಬ್ಬರೇ ಇದ್ದಾಗ ಪತಿಯ ಸಂಬಂಧಿಕರೊಬ್ಬರು ಬಂದು ಆಕೆಯ ಮೇಲೆ ಆ್ಯಸಿಡ್ ಎರಚಿ ಪರಾರಿಯಾಗಿದ್ದಾರೆ. ಆ್ಯಸಿಡ್ ದಾಳಿಯಿಂದ ಆಕೆಗೆ ಸುಟ್ಟ ಗಾಯಗಳಾಗಿವೆ. ಈ ಸಂಬಂಧ ರೆಹಾನಾ ಪೊಲೀಸರಿಗೆ ದೂರು ನೀಡಿದ್ದು ಪೊಲೀಸರು ಐವರು ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಹಾರದ ವೈಶಾಲಿಯಲ್ಲಿ ದೋಣಿ ಮುಳುಗಿ ಕನಿಷ್ಠ 13 ಮಂದಿ ಸಾವು; ಪ್ರಧಾನಿ ಮೋದಿ ಸಂತಾಪ, ಪರಿಹಾರ ಘೋಷಣೆ; Video

'ಜಂತರ್ ಮಂತರ್‌'ಗೆ ಅಕ್ರಮ ಪ್ರವೇಶ ಆರೋಪ: ಮುನ್ನೆಚ್ಚರಿಕೆ ಕ್ರಮವಾಗಿ CJPಯ ರಂಕಾ, ದಾಸ್, ಶಿಂಧೆ ಬಂಧನ

‘ರಾಹುಲ್ ಗಾಂಧಿ ನನ್ನನ್ನು ಪಕ್ಕಕ್ಕೆ ತಳ್ಳಿಲ್ಲ,ಕಾಳಜಿ ವಹಿಸಿದರು, ಬಿಜೆಪಿಯವರಿಗೆ ನನ್ಮೇಲೆ ತುಂಬಾ ಪ್ರೀತಿ’: CM ಡಿ.ಕೆ. ಶಿವಕುಮಾರ್; Video

ಒಂದು ಕಾಣದ ಕಣದ ಹುಡುಕಾಟ (ವಿಜ್ಞಾನ ವಿಶೇಷ)

'ಜನರು ಬಿಜೆಪಿ, ಮೋದಿ ಅವರೊಂದಿಗಿದ್ದಾರೆ': 2029ರ ಚುನಾವಣೆಯಲ್ಲಿ ಮತ್ತೊಂದು 'ಭಾರಿ ಸೋಲಿಗೆ' ಸಿದ್ಧರಾಗಿ: ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ