ಸಂಗ್ರಹ ಚಿತ್ರ 
ದೇಶ

ಹಿಂಸಾಚಾರದ ವೇಳೆ ಪ್ಲಾಸ್ಟಿಕ್ ಬುಲ್ಲೆಟ್ ಬಳಕೆ; ಅನಿವಾರ್ಯವಾದರೆ ಮಾತ್ರ ಪೆಲ್ಲೆಟ್ ಗನ್!

ಜಮ್ಮು ಮತ್ತು ಕಾಶ್ಮೀರದಲ್ಲಿ ಉಂಟಾಗುವ ಹಿಂಸಾಚಾರದ ವೇಳೆ ಪ್ಲಾಸ್ಟಿಕ್ ಬುಲ್ಲೆಟ್ ಗಳನ್ನು ಬಳಕೆ ಮಾಡುವಂತೆ ಕೇಂದ್ರ ಗೃಹ ಇಲಾಖೆ ಭದ್ರತಾ ಪಡೆಗಳಿಗೆ ಸಲಹೆ ನೀಡಿದೆ. ಅಂತೆಯೇ ತೀರಾ ಅನಿವಾರ್ಯವಾದರೆ ಮಾತ್ರ ಪೆಲ್ಲೆಟ್ ಗನ್ ಗಳನ್ನು ಬಳಕೆ ಮಾಡುವಂತೆ ಸೂಚನೆ ನೀಡಿದೆ.

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಉಂಟಾಗುವ ಹಿಂಸಾಚಾರದ ವೇಳೆ ಪ್ಲಾಸ್ಟಿಕ್ ಬುಲ್ಲೆಟ್ ಗಳನ್ನು ಬಳಕೆ ಮಾಡುವಂತೆ ಕೇಂದ್ರ ಗೃಹ ಇಲಾಖೆ ಭದ್ರತಾ ಪಡೆಗಳಿಗೆ ಸಲಹೆ ನೀಡಿದೆ. ಅಂತೆಯೇ ತೀರಾ ಅನಿವಾರ್ಯವಾದರೆ  ಮಾತ್ರ ಪೆಲ್ಲೆಟ್ ಗನ್ ಗಳನ್ನು ಬಳಕೆ ಮಾಡುವಂತೆ ಸೂಚನೆ ನೀಡಿದೆ.

ಕಣಿವೆ ರಾಜ್ಯದಲ್ಲಿ ಪೆಲ್ಲೆಟ್ ಗನ್ ಗಳ ಬಳಕೆಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದು, ಹಿಂಸಾಚಾರ ನಿಯಂತ್ರಣ ಮಾಡಲು ಭದ್ರತಾ ಸಿಬ್ಬಂದಿಗಳು ಬಳಕೆ ಮಾಡುವ ಪೆಲ್ಲೆಟ್ ಗನ್ ಗಳಿಂದಾಗಿ ಸ್ಥಳೀಯ ನಾಗರಿಕರಿಗೆ ಮಾರಣಾಂತಿಕ  ಪೆಟ್ಟುಗಳಾಗುತ್ತಿವೆ. ಹಲವರು ಪೆಲ್ಲೆಟ್ ಗನ್ ಏಟಿಂನಿದಾಗಿ ಅಂಧರಾಗಿದ್ದು, ದಶಕಗಳ ಹಿಂದೆ ಬಿದ್ದ ಪೆಲ್ಲೆಟ್ ಗನ್ ಬುಲ್ಲೆಟ್ ಗಳಿಂದಾಗಿ ಇಂದಿಗೂ ಜನ ನೋವು ಅನುಭವಿಸುತ್ತಿದ್ದಾರೆ ಎಂದು ಆರೋಪಿಸಲಾಗಿತ್ತು. ಅಲ್ಲದೆ ಭದ್ರತಾ  ಸಿಬ್ಬಂದಿಗಳು ಪೆಲ್ಲೆಟ್ ಗನ್ ಬಳಕೆ ಮಾಡದಂತೆ ನಿಷೇಧ ಹೇರಬೇಕು ಎಂದು ಕಣಿವೆ ರಾಜ್ಯದಾದ್ಯಂತ ಹಲವು ಪ್ರತಿಭಟನೆಗಳು ನಡೆದಿದ್ದವು.

ಇದೀಗ ಪ್ರತಿಭಟನಾಕಾರರ ಒತ್ತಾಯಕ್ಕೆ ಕೇಂದ್ರ ಸರ್ಕಾರ ಮಣಿದಿಲ್ಲವಾದರೂ ಪ್ಲಾಸ್ಟಿಕ್ ಬುಲ್ಲೆಟ್ ಗಳಿಗೆ ಮೊದಲ ಆಧ್ಯತೆ ನೀಡುವಂತೆಯೂ ತೀರಾ ಅನಿವಾರ್ಯವಾದರೆ ಮಾತ್ರ ಪೆಲ್ಲೆಟ್ ಗನ್ ಬಳಕೆ ಮಾಡುವಂತೆ ನಿರ್ದೇಶನ  ನೀಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

17 ಭಾಷೆಗಳಲ್ಲಿ ಹಾಡಿದರೂ ಕನ್ನಡದ ನೆಲದಲ್ಲೇ ಮಣ್ಣಾದ ಗಾನಕೋಗಿಲೆ: ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ಎಸ್.ಜಾನಕಿ ಅಂತ್ಯಕ್ರಿಯೆ!

'Health camp' ಚಿಕಿತ್ಸೆಯಿಂದ ಕಾಲು ಕಳೆದುಕೊಂಡ ಮಹಿಳೆ! ಪೊಲೀಸರಿಗೆ ದೂರು, ಅಭಿಷೇಕ್ ಬ್ಯಾನರ್ಜಿ ವಿರುದ್ಧ ಕೇಸ್ ದಾಖಲು

ಮಾರುವೇಷ ಯಾಕೆ ಸ್ವಾಮಿ... ಇದು ಚಿಲ್ಲರೆ ಕಾಲವಲ್ಲ, ಕ್ಯೂಆರ್ ಕೋಡ್ ಕಾಲ: ಸಚಿವ ಸುರೇಶ್‌ಗೆ ಶಾಸಕ ಸುರೇಶ್ ಕುಮಾರ್ ಪಾಠ

ನನ್ನ ಜೊತೆ ಮರ್ಯಾದೆಯಿಂದ ಮಾತಾಡು: ಸ್ವಿಟ್ಜರ್ಲೆಂಡ್ ವಿರುದ್ಧದ ಪಂದ್ಯದ ನಡುವೆ ರೆಫರಿ ವಿರುದ್ಧ ಮೆಸ್ಸಿ ವಾಗ್ವಾದ, Video

ಅಸ್ಸಾಂ: ರೋಡ್ ರೋಲರ್ ಬಳಸಿ ಸೀಜ್ ಮಾಡಿದ್ದ 472 ಕೋಟಿ ರೂ. ಮೌಲ್ಯದ ಡ್ರಗ್ಸ್ ನಾಶಪಡಿಸಿದ ಸಿಎಂ ಹಿಮಂತ ಬಿಸ್ವಾ ಶರ್ಮಾ! Video