ದೇಶ

ತ್ರಿವಳಿ ತಲಾಖ್ ನಿಷೇಧಿಸುವುದಾದರೆ, ಸತಿಸಹಗಮನ ಪದ್ಧತಿ ಆಚರಣೆ ಪ್ರಾರಂಭಿಸಿ: ಅಜಂ ಖಾನ್

Manjula VN
ರಾಮ್ಪುರ: ತ್ರಿವಳಿ ತಲಾಖ್, ನಿಖಾ ಹಲಾಲ್ ಮತ್ತು ಬಹುಪತ್ನಿತ್ವ ಸಂಪ್ರದಾಯದಾಯವನ್ನು ನಿಷೇಧಿಸುವುದಾದರೆ, ಸತಿಸಹಗಮನ ಪದ್ಧತಿಯನ್ನು ಪುನಃ ಸೇರ್ಪಡೆಗೊಳಿಸಿ ಎಂದು ಸಮಾಜವಾದಿ ಪಕ್ಷದ ನಾಯಕ ಅಜಂಖಾನ್ ಅವರು ಬುಧವಾರ ಹೇಳಿದ್ದಾರೆ. 
ತ್ರಿವಳಿ ತಲಾಖ್ ಸಂಬಂಧ ದೇಶದಾದ್ಯಂತ ಎದ್ದಿರುವ ವಿವಾದ ಸಂಬಂಧ ಪ್ರತಿಕ್ರಿಯೆ ನೀಡಿರುವ ಅವರು, ಸತಿಸಹಗಮನ ಪದ್ಧತಿ ಹಿಂದುಗಳ ಸಂಪ್ರದಾಯವಾಗಿದೆ. ಪತಿ ಮೃತಪಟ್ಟ ನಂತರ ಪತ್ನಿ ಕೂಡ ಚಿತೆಗೆ ಹಾರುವುದು ಹಿಂದೂಗಳ ಸಂಪ್ರದಾಯವಾಗಿತ್ತು. ತ್ರಿವಳಿ ತಲಾಖಅ ನ್ನು ನಿಷೇಧಿಸಲು ಮುಂದಾಗುತ್ತಿರುವ ಸರ್ಕಾರ ಮೊದಲು ಸತಿಸಹಗಮನ ಪದ್ಧತಿಯನ್ನು ಮರುಸೇರ್ಪಡೆಗೊಳಿಸಲಿ ಎಂದು ಹೇಳಿದ್ದಾರೆ. 
ತ್ರಿವಳಿ ತಲಾಖ್ ಕುರಿತಂತೆ ಕಾನೂನು ರಚಿನೆ ಮಾಡುದಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಯಾರು ತಡೆಯುತ್ತಿದ್ದಾರೆ?...ಕಾನೂನು ರಚನೆ ಮಾಡುವುದಕ್ಕೂ ಮುನ್ನ ಸತಿಸಹಗಮನ ಪದ್ಧತಿಯನ್ನು ಯಾವ ಮುಸ್ಲಿಮರು ವಿರೋಧಿಸಿದ್ದರು ಎಂಬ ಪ್ರಶ್ನೆಗೆ ಮೊದಲು ಉತ್ತರ ಹೇಳಿ...ಸತಿಸಹಗಮನ ಪದ್ಧತಿ ಹಿಂದೂ ಸಂಪ್ರದಾಯದ ಭಾಗವಾಗಿತ್ತು. ಮೊದಲು ಆ ಸಂಪ್ರದಾಯವನ್ನು ಮರುಸೇರ್ಪಡೆಗೊಳಿಸಿ ಎಂದು ತಿಳಿಸಿದ್ದಾರೆ. 
ತ್ರಿವಳಿ ತಲಾಖ್ ಕುರಿತಂತೆ ಕೆಲ ದಿನಗಳ ಹಿಂದಷ್ಟೇ ಪ್ರತಿಕ್ರಿಯೆ ನೀಡಿದ್ದ ಯೋಗಿ ಆದಿತ್ಯನಾಥ್ ಅವರು, ತ್ರಿವಳಿ ತಲಾಖ್  ಅನ್ನು ಹಿಂದೂಗಳ ಪುರಾಣ ಗ್ರಂಥ ಮಹಾಭಾರತದಲ್ಲಿ ದ್ರೌಪದಿಯ ವಸ್ತ್ರಾಪಹರಣಕ್ಕೆ ಹೋಲಿಕೆ ಮಾಡಿದ್ದರು. ಜ್ವಲಂತ ಸಮಸ್ಯೆಯಾಗಿರುವ ತ್ರಿವಳಿ ತಲಾಖ್ ಬಗ್ಗೆ ಮೌನ ವಹಿಸುವುದು ದ್ರೌಪದಿಯ ವಸ್ತ್ರಾಪಹರಣದಷ್ಟೇ ಸಮಾನ ತಪ್ಪು. ಚಂದ್ರಶೇಖರ್ ಕೂಡ ಸಮಾನ ನಾಗರಿಕ ಸಂಹಿತೆಯ ಪರವಾಗಿದ್ದರು. ಎಲ್ಲಾ ಮುಸ್ಲಿಂ ಸಹೋದರಿಯರಿಗೆ ನ್ಯಾಯ ಸಿಗಬೇಕು ಎಂದು ಹೇಳಿದ್ದರು. 
SCROLL FOR NEXT