ನವದೆಹಲಿ: ಅಮೆರಿಕ ಭೇಟಿ ವೇಳೆ ಅಲ್ಲಿನ ಅಧಿಕಾರಿಗಳೊಂದಿಗೆ ಎಚ್-1 ಬಿ ವೀಸಾ ಬಗ್ಗೆ ಚರ್ಚಿಸುವ ಕುರಿತು ಹಣಕಾಸು ಸಚಿವ ಅರಣ್ ಜೇಟ್ಲಿ ಅವರು ಬುಧವಾರ ಸುಳಿವು ನೀಡಿದ್ದಾರೆ.
ಅಮೆರಿಕ ಪ್ರವಾಸದ ವೇಳೆ ಭಾರತೀಯ ಐಟಿ ವಲಯದ ಕುರಿತು ಪ್ರಸ್ತಾಪ ಮಾಡುತ್ತೀರಾ? ಎಂಬ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಜೇಟ್ಲಿ, ಈ ವಿಷಯದ ಕುರಿತು ಅಮೆರಿಕದ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸುವ ಅಗತ್ಯ ಇದ್ದು, ಅವಕಾಶ ಸಿಕ್ಕರೆ ಅವರೊಂದಿಗೆ ಚರ್ಚಿಸಿ ಬಳಿಕ ನಿಮಗೆ ತಿಳಿಸುತ್ತೇನೆ ಎಂದರು.
ಅಮೆರಿಕ ಎಚ್-1ಬಿ ವೀಸಾಗೆ ಕಡಿವಾಣ ಹಾಕುವ ಪ್ರಕ್ರಿಯೆ ಆರಂಭಿಸಿದ್ದು, ಇದರಿಂದ ಭಾರತದ ಹೊರಗುತ್ತಿಗೆ ಸಂಸ್ಥೆಗಳಾದ ಟಿಸಿಎಸ್, ವಿಪ್ರೋ, ಇನ್ಫೋಸಿಸ್ ಹಾಗೂ ಅಮೆರಿಕದಲ್ಲಿರುವ ಐಬಿಎಂ, ಕಾಗ್ನೆ„ಜೆಂಟ್ ಕಂಪನಿಗಳ ಮೇಲೆ ಪರಿಣಾಮ ಬೀರಲಿದೆ.
ಭಾರತದಲ್ಲಿರುವ ಬಹುತೇಕ ಹೊರಗುತ್ತಿಗೆ ಕಂಪನಿಗಳು ಅಮೆರಿಕದ ಎಚ್-1 ಬಿ ವೀಸಾ ಪ್ರೋಗ್ರಾಂ ಅನ್ನೇ ಅವಲಂಬಿಸಿವೆ.