ಆಂಧ್ರದ ಚಿತ್ತೂರಿನಲ್ಲಿ ರಸ್ತೆ ಬದಿ ಅಂಗಡಿಗಳಿಗೆ ನುಗ್ಗಿದ ಲಾರಿ: 20 ಸಾವು
ರಸ್ತೆ ಬದಿ ಅಂಗಡಿಗಳಿಗೆ ಲಾರಿಯೊಂದು ನುಗ್ಗಿದ ಪರಿಣಾಮ 20 ಮಂದಿ ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಆಂಧ್ರದ ಚಿತ್ತೂರಿನ ಏರ್ಪೇಡು ಗ್ರಾಮದ ಬಳಿ ನಡೆದಿದೆ...
ಚಿತ್ತೂರು: ರಸ್ತೆ ಬದಿ ಅಂಗಡಿಗಳಿಗೆ ಲಾರಿಯೊಂದು ನುಗ್ಗಿದ ಪರಿಣಾಮ 20 ಮಂದಿ ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಆಂಧ್ರದ ಚಿತ್ತೂರಿನ ಏರ್ಪೇಡು ಗ್ರಾಮದ ಬಳಿ ನಡೆದಿದೆ.
ಚಾಲಕನ ನಿಯಂತ್ರಣ ತಪ್ಪಿ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿದ್ದ ಅಂಗಡಿಗಳ ಮೇಲೆ ಲಾರಿ ನುಗ್ಗಿದೆ ಪರಿಣಾಮ ಇಪ್ಪತ್ತು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು ಹಲವರಿಗೆ ಗಾಯಗಳಾಗಿವೆ. ಇದರಲ್ಲಿ ಹಲವರ ಪರಿಸ್ಥಿತಿ ಗಂಭೀರವಾಗಿದ್ದು ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಇನ್ನು ಗಾಯಾಳುಗಳನ್ನು ತಿರುಪತಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಚಿತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.