ದೇಶ

ಸರ್ಕಾರ ಶಕ್ತಗೊಳಿಸಬೇಕೇ ಹೊರತು ನಿಯಂತ್ರಕನಾಗಬಾರದು: ಮೋದಿ

Srinivas Rao BV
ನವದೆಹಲಿ: ಸ್ಪರ್ಧಾತ್ಮಕ ಸನ್ನಿವೇಶಗಳಿಗೆ ತಕ್ಕಂತೆ ಸರ್ಕಾರ ತನ್ನ ಪಾತ್ರವನ್ನೂ ಬದಲಾವಣೆ ಮಾಡಿಕೊಳ್ಳುವ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದು, ನಿಯಂತ್ರಕನಿಂದ ಶಕ್ತಗೊಳಿಸುವನಾಗಬೇಕು ಎಂದು ಮೋದಿ ಹೇಳಿದ್ದಾರೆ.  
ನಾಗರಿಕ ಸೇವಾ ದಿನಾಚರಣೆಯ ಅಂಗವಾಗಿ ಏ.21 ರಂದು ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಜನರನ್ನು ಶಕ್ತಗೊಳಿಸಬೇಕೇ ಹೊರತು ನಿಯಂತ್ರಕನಾಗಬಾರದು. ಕಳೆದ 15-20 ವರ್ಷಗಳಲ್ಲಿ ಜಗತ್ತು ಅಗಾಧ ಬದಲಾವಣೆ ಕಂಡಿದೆ. ಜನ ಸಾಮಾನ್ಯರು ಅವರ ಅಗತ್ಯತೆಗಳಿಗಾಗಿ ಸರ್ಕಾರದ ಮೇಲೆ ಅವಲಂಬಿತರಾಗಿರುತ್ತಿದ್ದರು. ಆದರೆ ಈಗ ಅವರಿಗೆ ಪರ್ಯಾಯವಾದ ವ್ಯವಸ್ಥೆಗಳಿವೆ ಎಂದಿದ್ದಾರೆ. 
ಖಾಸಗಿ ಆಸ್ಪತ್ರೆ ಹಾಗೂ ವಿಮಾನಗಳ ಉದಾಹರಣೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಸಾರ್ವಜನಿಕ ಸೇವೆಗಳ ಬಗ್ಗೆ ಜನರು ಟೀಕೆ ಮಾಡುತ್ತಾರೆ. ಖಾಸಗಿ ಸೇವೆಗಳಿಂದ ಸಂತುಷ್ಟರಾಗಿದ್ದಾರೆ. ಸರ್ಕಾರವೇ ಸರ್ವಸ್ವವೂ ಆಗಿದ್ದ ಕಾಲವಿತ್ತು. ಆದರೆ ಈಗ ಅದು ಬದಲಾಗಿ ಸ್ಪರ್ಧಾತ್ಮಕ ಸನ್ನಿವೇಶ ಎದುರಾಗಿದೆ. 
ಪರ್ಯಾಯ ವ್ಯವಸ್ಥೆಗಳು ಹೆಚ್ಚುತ್ತಿವೆ. ಸರ್ಕಾರದ ಜವಾಬ್ದಾರಿಗಳು, ಸರ್ಕಾರದ ಮುಂದಿರುವ ಸವಾಲುಗಳು ಹೆಚ್ಚಿದ್ದು, ಕಾರ್ಯನಿರ್ವಹಣೆಯ ಶೈಲಿಯನ್ನು ಬದಲಿಸಿಕೊಳ್ಳಬೇಕಿದೆ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ. 
SCROLL FOR NEXT