ನವದೆಹಲಿ: ನಾಳೆಯಿಂದ ವಾತಾವರಣದ ತಾಪಮಾನ 2ರಿಂದ 4 ಡಿಗ್ರಿ ಸೆಲ್ಸಿಯಸ್ ನಷ್ಟು ಕಡಿಮೆಯಾಗುವ ಸಾಧ್ಯತೆಯಿದೆ. ಈ ಮೂಲಕ ದೇಶಾದ್ಯಂತ ತಾಪಮಾನದ ತೀವ್ರತೆ ಕಡಿಮೆಯಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಭಾರತೀಯ ಹವಾಮಾನ ಇಲಾಖೆಯ ವಿಜ್ಞಾನಿ ಚರಣ್ ಸಿಂಗ್ ಮಾತನಾಡಿ, ಪಶ್ಚಿಮದಿಂದ ಗಾಳಿ ಬೀಸುವುದರಿಂದ ದೇಶಾದ್ಯಂತ ತಾಪಮಾನದಲ್ಲಿ ಇಳಿಕೆಯಾಗಲಿದೆ. ಭಾಗಶಃ ಮೋಡ ಕವಿದ ವಾತಾವರವಿರಲಿದ್ದು, ದೆಹಲಿ-ಎನ್ ಸಿಆರ್ ಗಳಾದ್ಯಂತ ಸಾಯಂಕಾಲ ಹೊತ್ತು ಆಗ್ನೇಯ ಗಾಳಿ ಬೀಸಲಿದೆ ಎಂದು ಸಿಂಗ್ ಹೇಳಿದರು.
ಮುಂಗಾರು ಮಳೆ ಬೀಸುವ ಮುನ್ನ ಏಪ್ರಿಲ್ ನಿಂದ ಜೂನ್ ವರೆಗೆ ಭಾರತದಾದ್ಯಂತ ಬಿಸಿ ತಾಪ ಗಾಳಿ ಬೀಸುತ್ತಿರುತ್ತದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.