ಭೋಪಾಲ್: 8 ವರ್ಷದ ಬಾಲಕಿಯೊಬ್ಬಳು ತನ್ನ ಅಕ್ಕನ ಗಂಡನಿಂದಲೇ ಅತ್ಯಾಚಾರಕ್ಕೆ ಒಳಗಾಗಿದ್ದು, ಇದಕ್ಕೆ ಅಕ್ಕ ಸಹ ಸಹಕರಿಸಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ ಜಿಲ್ಲೆಯಲ್ಲಿ ನಡೆದಿದೆ.
ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಪತಿ, ಆತನಿಗೆ ಸಹಕರಿಸಿದ ಪತ್ನಿಯನ್ನು ಹಾಗೂ ಮತ್ತೊಬ್ಬ ಆರೋಪಿಯನ್ನು ಮಹಾರಾಜಪುರ ಪೊಲೀಸರು ಬಂಧಿಸಿದ್ದು, ಇತರೆ ಇಬ್ಬರು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.
ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ನಡೆಯುತ್ತಿರುವ ಬಗ್ಗೆ ನೆರೆಹೊರೆಯವರಿಂದ ಮಾಹಿತಿ ಪಡೆದ ಎನ್ ಜಿಒ ಸಂಸ್ಥೆಯೊಂದು ಬಾಲಕಿಯನ್ನು ರಕ್ಷಿಸಿದೆ.
ಕೆಲವು ವರ್ಷಗಳ ಹಿಂದೆ ಬಾಲಕ ಪೋಷಕರು ಮೃತಪಟ್ಟಿದ್ದು, ಬಳಿಕ ದಿನಗೂಲಿ ಕಾರ್ಮಿಕರಾಗಿದ್ದ ತನ್ನ ಅಕ್ಕ-ಭಾವನ ಮನೆಯಲ್ಲಿ ವಾಸವಾಗಿದ್ದಳು ಎಂದು ಗ್ವಾಲಿಯರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಆಶೀಶ್ ಅವರು ತಿಳಿಸಿದ್ದಾರೆ.
ಅಕ್ಕನ ಸಹಕಾರದಿಂದ ತನ್ನ 35 ವರ್ಷದ ಭಾವ ಹಾಗೂ ಇತರೆ ಮೂವರು ವ್ಯಕ್ತಿಗಳು ಕಳೆದ ಕೆಲವು ವಾರಗಳಿಂದ ತನ್ನ ಮೇಲೆ ಅತ್ಯಾಚಾರ ಎಸಗಿರುವುದಾಗಿ ಬಾಲಕಿ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹೇಳಿಕೆ ನೀಡಿರುವುದಾಗಿ ಅವರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics