ಬಾಬಾ ರಾಮ್ ದೇವ್ (ಸಂಗ್ರಹ ಚಿತ್ರ) 
ದೇಶ

ಬಾಬಾ ರಾಮ್ ದೇವ್ ರ ಪತಂಜಲಿ ಆಮ್ಲಾ ಜ್ಯೂಸ್ ಅಸುರಕ್ಷಿತ: ಕೋಲ್ಕತ್ತಾದ ಪ್ರಯೋಗಾಲಯ ವರದಿ

ಯೋಗಗುರು ಬಾಬಾ ರಾಮ್ ದೇವ್ ಅವರ ಪತಂಜಲಿ ಆಯುರ್ವೇದ ನೆಲ್ಲಿಕಾಯಿ ಜ್ಯೂಸ್(ಆಮ್ಲಾ ಜ್ಯೂಸ್) ಪ್ರಯೋಗಾಲಯ...

ನವದೆಹಲಿ:ಯೋಗಗುರು ಬಾಬಾ ರಾಮ್ ದೇವ್ ಅವರ ಪತಂಜಲಿ ಆಯುರ್ವೇದ ನೆಲ್ಲಿಕಾಯಿ ಜ್ಯೂಸ್(ಆಮ್ಲಾ ಜ್ಯೂಸ್) ಪ್ರಯೋಗಾಲಯ ಪರೀಕ್ಷೆಯಲ್ಲಿ ವಿಫಲವಾಗಿದ್ದು, ಈ ಹಿನ್ನೆಲೆಯಲ್ಲಿ ಭಾರತೀಯ ಸೇನೆಯ ಕ್ಯಾಂಟೀನ್ ಸ್ಟೋರ್ ಡಿಪಾರ್ಟ್ ಮೆಂಟ್(ಸಿಎಸ್ ಡಿ), ಗ್ರಾಹಕ ವಸ್ತುಗಳ ಮಾರಾಟದ ಚಿಲ್ಲರೆ ಘಟಕಗಳಲ್ಲಿ ಜ್ಯೂಸ್ ನ ಮಾರಾಟವನ್ನು ನಿಷೇಧಿಸಲಾಗಿದೆ ಎಂದು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಈ ಸುದ್ದಿಗೆ ಪ್ರತಿಕ್ರಿಯಿಸಿರುವ ಪತಂಜಲಿ ಕಂಪೆನಿ, ನೆಲ್ಲಿಕಾಯಿ ಜ್ಯೂಸ್ ಔಷಧೀಯ ವಸ್ತುವಾಗಿದ್ದು ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಇತರ ಜ್ಯೂಸ್ ಗಳಂತೆ ಅಲ್ಲ. ಇದು ಮಾನವನ ಸೇವನೆಗೆ ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂದು ಹೇಳಿದೆ.
ಕೋಲ್ಕತ್ತಾದ ಪಶ್ಚಿಮ ಬಂಗಾಳ  ಸಾರ್ವಜನಿಕ ಆರೋಗ್ಯ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಲಾಗಿದ್ದು ಜ್ಯೂಸ್ ಮಾನವನ ಸೇವನೆಗೆ ಸುರಕ್ಷಿತವಲ್ಲದ ಕಾರಣ ಪತಂಜಲಿ ಕಂಪೆನಿಗೆ ಶೋಕಾಸ್ ನೊಟೀಸ್ ಕಳುಹಿಸಲಾಗಿದೆ ಮತ್ತು ಜ್ಯೂಸ್ ಮಾರಾಟವನ್ನು ತಕ್ಷಣದಿಂದಲೇ ನಿಷೇಧಿಸಲಾಗಿದೆ ಎಂದು ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿವೆ.
ಕಂಪೆನಿಯ ಉತ್ತರ ಬಂದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಕ್ಯಾಂಟೀನ್ ಸ್ಟೋರ್ ಡಿಪಾರ್ಟ್ ಮೆಂಟ್ ಅಮ್ಲಾ ಜ್ಯೂಸ್ ನ ಅನುಕ್ರಮ ಸಂಖ್ಯೆ 85417 ಮತ್ತು ವಿಭಾಗ ಸಂಖ್ಯೆ ಜಿಎಚ್ 1502ನ್ನು ಕೋಲ್ಕತ್ತಾದ ಪ್ರಯೋಗಾಲಯಕ್ಕೆ ಕಳುಹಿಸಿತ್ತು. 
ನೆಲ್ಲಿಕಾಯಿ ಜ್ಯೂಸ್ ಒಂದು ಆಯುರ್ವೇದ ಔಷಧಿಯಾಗಿದ್ದು ಅದನ್ನು ಕೇಂದ್ರ ಆಯುಷ್ ಸಚಿವಾಲಯದ ನಿಯಮ ಪ್ರಕಾರ ಪರೀಕ್ಷೆ ನಡೆಸಲಾಗಿದೆ. ಭಾರತ ಆಹಾರ ಪ್ರಾಧಿಕಾರ-ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ವಿವರಿಸಿದ ನಿಯಮಗಳು ಜ್ಯೂಸ್ ಗೆ ಅನ್ವಯವಾಗುವುದಿಲ್ಲ ಎಂದು ಪತಂಜಲಿ ಹೇಳಿದೆ.
ಕ್ಯಾಂಟೀನ್ ಸ್ಟೋರ್ ಡಿಪಾರ್ಟ್ ಮೆಂಟ್ ದೇಶಾದ್ಯಂತ ಇರುವ ಅನೇಕ ಸರ್ಕಾರಿ ಪ್ರಯೋಗಾಲಯಗಳಿಗೆ ನಿಯಮಿತವಾಗಿ ಆಹಾರ ಪದಾರ್ಥಗಳನ್ನು ಪ್ರಯೋಗಕ್ಕೆ ಕಳುಹಿಸುತ್ತಿರುತ್ತದೆ. 
ಈ ಹಿಂದೆ  ಹರ್ಯಾಣದಲ್ಲಿ ಪತಂಜಲಿ ಅಟ್ಟಾ ನೂಡಲ್ಸ್ ನಲ್ಲಿ ಕೀಟಗಳು ಮತ್ತು ಹರಿದ್ವಾರದಲ್ಲಿ ಪತಂಜಲಿ ತುಪ್ಪದ ಪ್ಯಾಕೆಟ್ ನಲ್ಲಿ ಫಂಗಸ್ ಕಾಣಿಸಿಕೊಂಡಿತ್ತು ಎಂಬ ವರದಿಗಳು ಬಂದಿದ್ದವು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!