ರಕ್ಷಣಾ ತಜ್ಞ ಕ್ವಾಮರ್ ಅಘಾ ಅ
ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ನೇತೃತ್ವ ಸರ್ಕಾರ ಅಡಳಿತ ನಡೆಸುವುದರಲ್ಲಿ ವಿಫಲವಾಗಿದ್ದು, ರಾಜ್ಯದಲ್ಲಿ ರಾಜ್ಯಪಾಲರ ಆಡಳಿತವನ್ನು ಹೇರಿದರೆ ಕಾಶ್ಮೀರದಲ್ಲಿನ ಪರಿಸ್ಥಿತಿ ನಿಯಂತ್ರಣಕ್ಕೆ ಬರಲಿದೆ ಎಂದು ರಕ್ಷಣಾ ತಜ್ಞ ಮಂಗಳವಾರ ಅಭಿಪ್ರಾಯಪಟ್ಟಿದ್ದಾರೆ.
ನಿನ್ನೆಯಷ್ಟೇ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿಯಾದ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯವರು ಕಾಶ್ಮೀರ ಪರಿಸ್ಥಿತಿ, ಭದ್ರತೆ ಕುರಿತಂತೆ ಮಾತುಕತೆ ನಡೆಸಿದ್ದರು.
ಈ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ರಕ್ಷಣಾ ತಜ್ಞ ಕ್ವಾಮರ್ ಅಘಾ ಅವರು, . ಮುಖ್ಯಮಂತ್ರಿಗಳ ನಿಯಂತ್ರಣಕ್ಕೂ ಮೀರಿ ಕಾಶ್ಮೀರದಲ್ಲಿ ದಿನಕಳೆಯುತ್ತಿದ್ದಂತೆ ಪರಿಸ್ಥಿತಿ ತೀವ್ರವಾಗಿ ಹದಗೆಡುತ್ತಿದೆ. ರಾಜ್ಯದಲ್ಲಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ರಾಜ್ಯಪಾಲರ ಆಡಳಿತವನ್ನು ಹೇರುವ ಪರಿಸ್ಥಿತಿ ಎದುರಾಗಿದೆ. ರಾಜ್ಯಪಾಲಕ ಆಡಳಿತ ಹೇರಿದ ಬಳಿಕ ಮತ್ತೆ ಮರು ಚುನಾವಣೆ ನಡೆಸಿ ಸರ್ಕಾರವನ್ನು ರಚನೆ ಮಾಡಬೇಕಿದೆ ಎಂದು ಹೇಳಿದ್ದಾರೆ.
ಉಗ್ರರ ಜೊತೆಗೆ ಮಾತುಕತೆ ನಡೆಸಿದ ಮಾತ್ರಕ್ಕೆ ಕಾಶ್ಮೀರ ಸಮಸ್ಯೆ ಬಗೆಹರಿಯುವುದಿಲ್ಲ. ಮಾತುಕತೆ ನಡೆಸಿದಾಗ ಮಾತ್ರ ಕೆಲ ಸಮಯವಷ್ಟೇ ಹೋರಾಟಗಳು ನಿಲ್ಲುತ್ತವೆ. ನಂತರ ಮತ್ತೆ ಪರಿಸ್ಥಿತಿ ಹದಗೆಡುತ್ತದೆ ಎಂದು ತಿಳಿಸಿದ್ದಾರೆ.