ನವದೆಹಲಿ: ಬ್ರಿಟನ್ ಭಾರತವನ್ನು ವಿಶ್ವದ ಬಡ ರಾಷ್ಟ್ರ ಸ್ಥಾನಕ್ಕೆ ಇಳಿಸಿತ್ತು. ಈ ಬಗ್ಗೆ ಇಂದಿನ ಪೀಳಿಗೆಗೆ ತಿಳುವಳಿಕೆ ನೀಡುವ ಅಗತ್ಯವಿದ್ದು, ಈ ಬಗ್ಗೆ ತಿಳಿಸಲು ಮ್ಯುಸಿಯಂ ನ ಸ್ಥಾಪನೆ ಮಾಡಬೇಕೆಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಅಭಿಪ್ರಾಯಾಟ್ಟಿದ್ದಾರೆ.
ಭಾರತವನ್ನು ವಿಶ್ವದ ಅತ್ಯಂತ ಬಡ, ಅನಕ್ಷರಸ್ಥ, ರೋಗಗ್ರಸ್ಥ ರಾಷ್ಟ್ರದ ಸ್ಥಾನಕ್ಕೆ ಇಳಿಸಿದ್ದ ಬ್ರಿಟನ್ ಸಾಮ್ರಾಜ್ಯ ಮಾನವೀಯತೆ ಮೇಲೆ ನಡೆಸಿದ್ದ ಅಪರಾಧಗಳ ಬಗ್ಗೆ ಭಾರತ ಹಾಗೂ ಬ್ರಿಟನ್ ನ ಜನತೆಗೆ ವ್ಯಾಪಕವಾಗಿ ತಿಳಿಸಬೇಕು ಎಂದಿರುವ ಶಶಿ ತರೂರ್, ಭಾರತದಲ್ಲಿ ಇದಕ್ಕಾಗಿಯೇ ಮ್ಯೂಸಿಯಂ ಒಂದನ್ನು ಪ್ರಾರಂಭಿಸಬೇಕೆಂದು ಹೇಳಿದ್ದಾರೆ.
ಲೇಖನವೊಂದರಲ್ಲಿ ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿರುವ ಶಶಿ ತರೂರ್, ಭಾರತದ ಅತ್ಯಂತ ಪ್ರಸಿದ್ಧವಾದ ಪಾರಂಪರಿಕ ಕಟ್ಟಡವಾಗಿರುವ ಕೋಲ್ಕತಾದ ವಿಕ್ಟೋರಿಯಾ ಮೆಮೊರಿಯಲ್ ನ್ನು ಮ್ಯೂಸಿಯಂ ಆಗಿ ಮಾರ್ಪಡಿಸಿ ಬ್ರಿಟೀಷ್ ರಾಜ್ ನ ಸತ್ಯವನ್ನು ಭಾರತದ ಮುಂದಿನ ಪೀಳಿಗೆಗೆ ತಿಳಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿರುವುದಾಗಿ ಶಶಿತರೂರ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics