ಸಂಚಾರ ದಟ್ಟನೆಯನ್ನು ಸುಗಮಗೊಳಿಸಲು ರಸ್ತೆ ಮಧ್ಯೆ ಇದ್ದ ಲಾರಿಯನ್ನು ಮಹಾರಾಷ್ಟ್ರ ಸಚಿವ ಗಿರೀಶ್ ಮಹಾಜನ್ ಅವರು ಚಲಾಯಿಸಿಕೊಂಡು ಹೋಗಿ ರಸ್ತೆ ಪಕ್ಕದಲ್ಲಿ ಪಾರ್ಕ್ ಮಾಡಿದರು.
ಸಂಚಾರಿ ನಿಯಮ ಉಲ್ಲಂಘನೆ ಸಂಬಂಧ ಕುಡಿದು ಲಾರಿ ಚಲಾಯಿಸುತ್ತಿದ್ದ ಚಾಲಕನನ್ನು ಬಂಧಿಸಲಾಯಿತು. ಈ ವೇಳೆ ಚಾಲಕ ಲಾರಿಯನ್ನು ರಸ್ತೆ ಮಧ್ಯೆ ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್ ಆಗಿತ್ತು. ಸಂಚಾರ ದಟ್ಟನೆಯನ್ನು ಸುಗಮಗೊಳಿಸುವ ಸಲುವಾಗಿ ಸಚಿವರು ಲಾರಿಯನ್ನು ಚಲಾಯಿಸಿಕೊಂಡು ಹೋಗಿ ರಸ್ತೆ ಪಕ್ಕದಲ್ಲಿ ನಿಲ್ಲಿಸಿದರು.
ಜಲ್ಗೊನ್ ನ ಅಕ್ಷಶಕ್ತಿ ಚೌಕದಲ್ಲಿ ಸಂಚಾರಿ ಪೊಲೀಸರು ಕುಡಿದು 14 ಚಕ್ರದ ಲಾರಿ ಚಲಾಯಿಸುತ್ತಿದ್ದ ಚಾಲಕನನ್ನು ತಡೆದು ಬಂಧಿಸಿದರು. ಈ ವೇಳೆ ಲಾರಿ ರಸ್ತೆ ಮಧ್ಯೆ ಇದ್ದಿದ್ದರಿಂದ ಟ್ರಾಫಿಕ್ ಜಾಮ್ ಶುರುವಾಗಿತ್ತು. ಟ್ರಾಫಿಕ್ ಮಧ್ಯೆ ಸಿಲುಕಿಕೊಂಡಿದ್ದ ಗಿರೀಶ್ ಮಹಾಜನ್ ಅವರು ಲಾರಿಯನ್ನು ರಸ್ತೆ ಪಕ್ಕದಲ್ಲಿ ನಿಲ್ಲಿಸುವ ಮೂಲಕ ಸಂಚಾರವನ್ನು ಸುಗಮಗೊಳಿಸಿದರು.