ದೇಶ

ಗೋ ಮೂತ್ರ ಕುರಿತು ಅಧ್ಯಯನಕ್ಕೆ ದೆಹಲಿಯ ಐಐಟಿಗೆ 50 ಪ್ರಸ್ತಾಪಗಳನ್ನು ಬಂದಿವೆ: ವೈಎಸ್ ಚೌಧರಿ

Vishwanath S
ನವದೆಹಲಿ: ಗೋ ಮೂತ್ರದ ವಿಶೇಷತೆ ಕುರಿತಂತೆ ಅಧ್ಯಯನ ನಡೆಸಲು ವಿವಿಧ ಅಕಾಡೆಮಿ ಮತ್ತು ಸಂಶೋಧನ ಸಂಸ್ಥೆಗಳಿಂದ ದೆಹಲಿಯ ಭಾರತೀಯ ತಂತ್ರಜ್ಞಾನ ಸಂಸ್ಥೆ(ಐಐಟಿ)ಗೆ ಸುಮಾರು 50 ಪ್ರಸ್ತಾವನೆಗಳು ಬಂದಿವೆ. 
ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ರಾಜ್ಯ ಸಚಿವ ವೈ.ಎಸ್ ಚೌಧರಿ ಅವರು ಇಂದು ಲೋಕಸಭೆಯಲ್ಲಿ ಐಐಟಿಯಲ್ಲಿ ನಡೆದ ಸಮಾಲೋಚನೆ ಕಾರ್ಯಾಗಾರದ ಸ್ವರೂಪ್ ಕಾರ್ಯಕ್ರಮದಲ್ಲಿ ಗೋವು ಉತ್ಪನ್ನಗಳ ಕುರಿತಾದ ಸಂಶೋಧನೆ ಮತ್ತು ಅಭಿವೃದ್ಧಿ(ಆರ್ ಅಂಡ್ ಡಿ) ಒಳಗೊಂಡಂತೆ ಇತರ ವಿಷಯಗಳು ಚರ್ಚಿಸಲಾಗಿದೆ ಎಂದು ಲಿಖಿತ ಉತ್ತರ ನೀಡಿದ್ದಾರೆ. 
ಸ್ವರೂಪ್ ನ ಸಂಕ್ಷಿಪ್ತ ರೂಪ('ಪಂಚಗವ್ಯ'ವನ್ನು ವೈಜ್ಞಾನಿಕ ಕ್ರಮಬದ್ಧಗೊಳಿಸುವಿಕೆ ಮತ್ತು ಸಂಶೋಧನೆ) ಈ ಕಾರ್ಯಕ್ರಮದಲ್ಲಿ 'ಪಂಚಗವ್ಯ'( ಆಕಳ ಸಗಣಿ, ಗಂಜಳ, ಹಾಲು,ಮೊಸರು ಮತ್ತು ತುಪ್ಪ) ಕುರಿತಂತೆ ಸಂಶೋಧನೆಗೆ ವಿವಿಧ ಅಕಾಡೆಮಿ ಮತ್ತು ಸಂಶೋಧನಾ ಸಂಸ್ಥೆಗಳಿಂದ 50 ಸಂಶೋಧನೆ ಮತ್ತು ಅಭಿವೃದ್ಧಿ ಪ್ರಸ್ತಾಪಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಸ್ವರೂಪ್ ಕಾರ್ಯಕ್ರಮವನ್ನು ಪ್ರಾರಂಭಿಸಲು ಸರ್ಕಾರವು ರಾಷ್ಟ್ರೀಯ ಸ್ಟೀರಿಂಗ್ ಸಮಿತಿಯನ್ನು(NSC) ಸ್ಥಾಪಿಸಿದೆ ಎಂದು ವೈಎಸ್ ಚೌಧರಿ ತಿಳಿಸಿದ್ದಾರೆ. 
ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಹರ್ಷವರ್ಧನ್ ಎನ್ಎಸ್ಸಿ ಸಮಿತಿಯ ಅಧ್ಯಕ್ಷರಾಗಿದ್ದು ವಿಜಯ್ ಭತ್ಕರ್ ಅವರು ಸಹ ಅಧ್ಯಕ್ಷರಾಗಿರಲಿದ್ದಾರೆ. ವೈಜ್ಞಾನಿಕ ಇಲಾಖೆಗಳ ಕಾರ್ಯದರ್ಶಿಗಳು. ಹಿರಿಯ ವಿಜ್ಞಾನಿಗಳು ಮತ್ತು ಮೂವರು ಆರ್ಎಸ್ಎಸ್ ಮತ್ತು ವಿಎಚ್ಪಿಯ ಸದಸ್ಯರು ಸಮಿತಿಯಲ್ಲಿರಲಿದ್ದಾರೆ ಎಂದು ವೈಎಸ್ ಚೌಧರಿ ಅವರು ತಿಳಿಸಿದ್ದಾರೆ. 
SCROLL FOR NEXT