ತತ್ಕಾಲ್ ಟಿಕೆಟ್ ಕಾಯ್ದಿರಿಸಿ ಆ ನಂತರ ಐಆರ್ ಸಿಟಿಸಿಗೆ ಪಾವತಿಸಿ!
ತತ್ಕಾಲ್ ಟಿಕೆಟ್ ನ್ನು ಮೊದಲು ಕಾಯ್ದಿರಿಸಿ ಆ ನಂತರ ಹಣ ಪಾವತಿ ಮಾಡುವ ಸೌಲಭ್ಯವನ್ನು ರೈಲ್ವೆ ಇಲಾಖೆ ಜಾರಿಗೊಳಿಸಿದೆ.
ನವದೆಹಲಿ: ತತ್ಕಾಲ್ ಟಿಕೆಟ್ ನ್ನು ಮೊದಲು ಕಾಯ್ದಿರಿಸಿ ಆ ನಂತರ ಹಣ ಪಾವತಿ ಮಾಡುವ ಸೌಲಭ್ಯವನ್ನು ರೈಲ್ವೆ ಇಲಾಖೆ ಜಾರಿಗೊಳಿಸಿದೆ.
ಐಆರ್ ಸಿಟಿಸಿಯ ಮೂಲಕ ಪ್ರಯಾಣಿಕರು ಮೊದಲು ಟೀಕೆಟ್ ಕಾಯ್ದಿರಿಸಿ ಆ ನಂತರ ಹಣ ಪಾವತಿ ಮಾಡಬಹುದಾಗಿದೆ. ಇದಕ್ಕೂ ಮುನ್ನ ಸಾಮಾನ್ಯ ಟಿಕೆಟ್ ಗಳನ್ನು ಕಾಯ್ದಿರಿಸಲು ಮಾತ್ರ ಈ ಸೌಲಭ್ಯ ಲಭ್ಯವಿತ್ತು. ಈಗ ತತ್ಕಾಲ್ ಟಿಕೆಟ್ ರಿಸರ್ವೇಷನ್ ಗೂ ಸಹ ಈ ಸೌಲಭ್ಯವನ್ನು ವಿಸ್ತರಿಸಲಾಗಿದೆ.
ಮನೆ ಬಾಗಿಲಿಗೆ ಬರುವ ಟಿಕೆಟ್ ಪಡೆದು ಆ ನಂತರ ಡೆಬಿಟ್, ಕ್ರೆಡಿಟ್, ಕ್ಯಾಶ್ ಮೂಲಕ ಟಿಕೆಟ್ ಮೊತ್ತವನ್ನು ಪಾವತಿ ಮಾಡಬಹುದಾಗಿದೆ ಎಂದು ಐಆರ್ ಸಿಟಿಸಿ ಪೇಮೆಂಟ್ ಪ್ರೊವೈಡರ್ ಹೇಳಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.