ನರೇಂದ್ರ ಮೋದಿ, ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ
ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ತಮ್ಮ ಅಧಿಕಾರಾವಧಿಯ ಕೊನೆಯ ದಿನ ಪ್ರಧಾನಿ ನರೇಂದ್ರ ಮೋದಿ ಬರೆದ ಪತ್ರವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ ಬರೆದ ಪತ್ರ ಹೃದಯವನ್ನು ಮುಟ್ಟಿತು ಎಂದಿದ್ದಾರೆ.
"ತಂದೆಯ ಸ್ಥಾನದಲ್ಲಿ ನಿಂತು, ಮಾರ್ಗದರ್ಶಕರಾಗಿ ಸಹಕಾರ ನೀಡಿದ್ದೀರಿ ಎಂದು ಪತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ರಾಷ್ಟ್ರಪತಿಯಾಗಿದ್ದಾಗ ನಿಮ್ಮ ಅಧಿಕಾರಾವಧಿಯಲ್ಲಿ ರಾಷ್ಟ್ರಹಿತವನ್ನು ಉಳಿದ ಎಲ್ಲಾ ವಿಷಯಗಳಿಗಿಂತ ಮಿಗಿಲಾಗಿ ಪರಿಗಣಿಸಿದ್ದಿರಿ ಎಂದು ಎರಡು ಪುಟಗಳ ಪತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಬರೆದಿದ್ದಾರೆ.
ಪ್ರಣಬ್ ಮುಖರ್ಜಿ ಅವರ ಬೌದ್ಧಿಕ ಪರಾಕ್ರಮ ಕೇಂದ್ರ ಸರ್ಕಾರಕ್ಕೆ ನೆರವಾಗಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಪತ್ರದಲ್ಲಿ ಬರೆದಿದ್ದಾರೆ. " ಮೂರು ವರ್ಷದ ಹಿಂದೆ ನಾನು ದೆಹಲಿಗೆ ಹೊರಗಿನ ವ್ಯಕ್ತಿಯಾಗಿದ್ದೆ. ನನ್ನೆದುರು ಹಲವಾರು ಸವಾಲಿನ ವಿಷಯಗಳಿದ್ದವು. ಅಂತಹ ಸಂದರ್ಭದಲ್ಲಿ ನೀವು "ತಂದೆಯ ಸ್ಥಾನದಲ್ಲಿ ನಿಂತು, ಮಾರ್ಗದರ್ಶಕರಾಗಿ ಸಹಕಾರ ನೀಡಿ ನನ್ನಲ್ಲಿ ವಿಶ್ವಾಸವನ್ನು ತುಂಬಿದ್ದೀರಿ ಎಂದು ಮೋದಿ ಪ್ರಣಬ್ ಮುಖರ್ಜಿ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.