ಮುಂಬಯಿ: 16 ವರ್ಷದ ಬಾಲಕನ ಮೇಲೆ ಕಳೆದೊಂದು ವರ್ಷದಲ್ಲಿ ಮೇಲೆ 15 ಬಾಲಕರು ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದು ಈ ಸಂಬಂಧ 15 ಮಂದಿಯಲ್ಲಿ ಪೊಲೀಸರು ಏಳು ಬಾಲಕರನ್ನು ಬಂಧಿಸಿದ್ದಾರೆ.
16 ವರ್ಷದ ಬಾಲಕ ನೀಡಿರುವ ದೂರಿನ ಮೇರೆಗೆ ಡಿ ಎನ್ ನಗರ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 1 ವರ್ಷದ ಹಿಂದೆ ಸಂತ್ರಸ್ತನ ನೆರೆಮನೆಯ ಬಾಲಕ ತನ್ನ ಮೇಲೆ ಅತ್ಯಾಚಾರ ನಡೆಸಿ ಅದನ್ನು ವಿಡಿಯೋ ಮಾಡಿಕೊಂಡಿದ್ದ, ನಂತರ ಆ ವಿಡಿಯೋವನ್ನು ತನ್ನ ಸ್ನೇಹಿಕರಿಗೆ ಶೇರ್ ಮಾಡಿ ಬ್ಲ್ಯಾಕ್ ಮೇಲ್ ಮಾಡಲು ಆರಂಭಿಸಿದ ಎಂದು ಸಂತ್ರಸ್ತ ಬಾಲಕ ದೂರಿನಲ್ಲಿ ವಿವರಿಸಿದ್ದಾನೆ.
ವಿಡಿಯೋ ತೋರಿಸಿ ಹೆದರಿಸುತ್ತಿದ್ದ 15 ಮಂದಿ ಬಾಲಕರು ತನ್ನ ಮೇಲೆ ಪದೇ ಪದೇ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾನೆ.
16 ವರ್ಷದ ಬಾಲಕನ ಮೇಲೆ ಅತ್ಯಾಚಾರ ಎಸಗಿದ ಎಲ್ಲ 15 ಮಂದಿ 15 ರಿಂದ 17 ವರ್ಷದೊಳಗಿನವರು ಎನ್ನಲಾಗಿದ್ದು, ಅವರಲ್ಲಿ 7 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.
ಬಾಲಕನ ಮೇಲೆ ಅತ್ಯಾಚಾರಿಗಳು ಬ್ಲ್ಯಾಕ್ ಮೇಲ್ ಮಾಡಿ ಹಲ್ಲೆಯನ್ನೂ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸಂತ್ರಸ್ತ ಬಾಲಕನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಪೊಕ್ಸೋ ಕಾಯಿದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳು ಇದೇ ರೀತಿ ಬೇರೆ ಹಲವು ಅಪ್ರಾಪ್ತರಿಗೆ ತೊಂದರೆ ನೀಡಿದ್ದಾರೆ ಎಂದು ಹೇಳಿದ್ದಾರೆ.