ಸಂಗ್ರಹ ಚಿತ್ರ 
ದೇಶ

ಎನ್ಆರ್'ಐಗಳಿಗೂ ಪ್ರಾತಿನಿಧಿಕ ಮತ ಹಕ್ಕು: ಕೇಂದ್ರ ಸಚಿವ ಸಂಪುಟ ನಿರ್ಧಾರ

ಇದೂವರೆಗೂ ಸೇನಾ ಸಿಬ್ಬಂದಿಗಳಿಗೆ ಮಾತ್ರ ನೀಡಲಾಗಿದ್ದ ಪ್ರಾಕ್ಸಿ ವೋಟಿಂಗ್ (ಪ್ರಾತಿನಿಧಿಕ ಮತದಾನ) ಅವಕಾಶವನ್ನು ಅನಿವಾಸಿ ಭಾರತೀಯರಿಗೂ ಕಲ್ಪಿಸಲು ಕೇಂದ್ರ ಸಚಿವ ಸಂಪುಟ ಬುಧವಾರ ನಿರ್ಧರಿಸಿದೆ...

ನವದೆಹಲಿ: ಇದೂವರೆಗೂ ಸೇನಾ ಸಿಬ್ಬಂದಿಗಳಿಗೆ ಮಾತ್ರ ನೀಡಲಾಗಿದ್ದ ಪ್ರಾಕ್ಸಿ ವೋಟಿಂಗ್ (ಪ್ರಾತಿನಿಧಿಕ ಮತದಾನ) ಅವಕಾಶವನ್ನು ಅನಿವಾಸಿ ಭಾರತೀಯರಿಗೂ ಕಲ್ಪಿಸಲು ಕೇಂದ್ರ ಸಚಿವ ಸಂಪುಟ ಬುಧವಾರ ನಿರ್ಧರಿಸಿದೆ. 
ಈ ಕುರಿತು ಜನಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ತರಲು ಸಚಿವ ಸಂಪುಟ ಸಮ್ಮತಿ ನೀಡಿದೆ. ಇದರಿಂದಾಗಿ ಭಾರತದಲ್ಲಿ ನೊಂದಾಯಿತ ಮತದಾರರಾಗಿದ್ದರೂ, ಮತ ಚಲಾಯಿಸಲೆಂದೇ ಭಾರತಕ್ಕೆ ಬರಲಾಗದೆ, ಹಕ್ಕು ಕಳೆದುಕೊಳ್ಳುತ್ತಿದ್ದ ಕೋಟ್ಯಾಂತರ ಅನಿವಾಸಿ ಭಾರತೀಯರಿಗೆ ಇದು ಲಾಭವಾಗಲಿದೆ. 
ಇದೂವರೆಗೆ ನಿಯಮಗಳ ಅನ್ವಯ, ಭಾರತದ ಯಾವುದೇ ಕ್ಷೇತ್ರದಲ್ಲಿ ನೋಂದಾಯಿತರಾಗಿದ್ದ ಅನಿವಾಸಿ ಭಾರತೀಯರು (ಎನ್ಆರ್'ಐ)ಗಳು, ಚುನಾವಣೆ ವೇಳೆ ಕ್ಷೇತ್ರಕ್ಕೆ ಬಂದು ಮತಚಲಾಯಿಸಬಹುದಾಗಿತ್ತು. ಆದರೆ, ಇದಕ್ಕಾಗಿ ಅವರು ಲಕ್ಷಾಂತರ ಹಣವನ್ನು ವೆಚ್ಚ ಮಾಡಿ ಭಾರತಕ್ಕೆ ಬರಬೇಕಿತ್ತು. ಆದರೆ, ಪ್ರಾತಿನಿಧಿಕ ಮತದಾನದ ಅವಕಾಶ ಸಿಕ್ಕರೆ ವಿದೇಶದಲ್ಲಿರುವ ಅನಿವಾಸಿ ಭಾರತೀಯರ ಪರವಾಗಿ ಅವರಿಂದ ಆರಿಸಲ್ಪಟ್ಟ ಯಾವುದೇ ವ್ಯಕ್ತಿ, ಅವರ ನೋಂದಾಯಿತರಾಗಿರುವ ಕ್ಷೇತ್ರದಲ್ಲಿ ಹೋಗಿ ಮತ ಚಲಾಯಿಸಬಹುದಾಗಿದೆ. 
ಅಂದಾಜಿ ಪ್ರಕಾರ 1 ಕೋಟಿಗೂ ಹೆಚ್ಚು ಭಾರತೀಯರು ವಿದೇಶಗಳಲ್ಲಿ ನೆಲೆಸಿದ್ದಾರೆ. ಈ ಪೈಕಿ ಇತ್ತೀಚಿನ ವರ್ಷಗಳಲ್ಲಿ ಮತದಾನ ಮಾಡುತ್ತಿದ್ದವರ ಪ್ರಮಾಣ ಕೇವಲ 10 ರಿಂದ 12000 ಜನರು ಮಾತ್ರ. ಆದರೆ, ಹೊಸ ಅವಕಾಶದ ಅನ್ವಯ 1 ಕೋಟಿಗೂ ಹೆಚ್ಚು ಜನರಿಗೆ ಸುಲಭವಾಗಿ ಮತದ ಹಕ್ಕು ಪಡೆಯಬಹುದು. ಅಂದರೆ ಲೋಕಸಭಾ ಚುನಾವಣೆಯನ್ನು ಲೆಕ್ಕ ಹಾಕಿದರೆ 543 ಕ್ಷೇತ್ರಗಳಲ್ಲಿ ಎಲ್ಲಾ 1.6 ಕೋಟಿ ಎನ್ಆರ್'ಐಗಳು ಮತ ಹಾಕಿದರೆ, ಪ್ರತಿ ಕ್ಷೇತ್ರದಲ್ಲೂ ತಲಾ 29000 ಮತ ಚಲಾವಣೆಯಾಗಲಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

ಪಂದ್ಯ ಮುಗಿಸಿ ಮನೆಗೆ ಮರಳುವಾಗ ಭೀಕರ ಅಪಘಾತ, 4 ಕ್ರಿಕೆಟಿಗರ ದಾರುಣ ಸಾವು!

ಮಗು ಆಡಿಸುತ್ತಿದ್ದ ವ್ಯಕ್ತಿ ಮೇಲೆ ಗೂಳಿ ದಾಳಿ; ರಕ್ಷಣೆಗೆ ಧಾವಿಸಿದ ಮಹಿಳೆ, Video ವೈರಲ್

'ಭಾರತೀಯನ ಮದುವೆಯಾದಾಕ್ಷಣ Indian ಆಗಲ್ಲ, ಬಾಂಗ್ಲಾದೇಶಿ ಪತ್ನಿಗೆ ಭಾರತ ಪ್ರವೇಶ ನಿರಾಕರಣೆ ಸರಿ ಇದೆ': ಹೈಕೋರ್ಟ್