ದೇಶ

ಬಿಜೆಪಿ ಮಾದರಿಯಲ್ಲಿ ಕಾಂಗ್ರೆಸ್ ನಿಂದಲೂ ಟ್ವಿಟರ್ ಕ್ವಿಜ್: ಟ್ವೀಟಿಗರಿಂದ ಟ್ರೋಲ್

Srinivas Rao BV
ನವದೆಹಲಿ: ಟ್ವಿಟರ್ ನಲ್ಲಿ ಸರ್ಕಾರದ ಯೋಜನೆಗಳು, ಸರ್ಕಾರಿ ಕ್ರಮಗಳ ಬಗ್ಗೆ '#KnowYourGovt' ಕ್ವಿಜ್ ನಡೆಸುತ್ತಿದ್ದ ಬಿಜೆಪಿಯ ಮಾದರಿಯಲ್ಲಿ ಕಾಂಗ್ರೆಸ್ ಸಹ '#KnowYourLegacy' ಹೆಸರಿನ ಕ್ವಿಜ್ ನಡೆಸಲು ಪ್ರಾರಂಭಿಸಿದೆ. ಆದರೆ ಕಾಂಗ್ರೆಸ್ ನ ತಂತ್ರ ತಿರುಗುಬಾಣವಾಗಿದ್ದು, ಟ್ವೀಟಿಗರು ಐತಿಹಾಸಿಕ ಪಕ್ಷವನ್ನು ಟ್ರೋಲ್ ಮಾಡಿದ್ದಾರೆ.
ಬಿಜೆಪಿಗೆ ಪ್ರತಿಯಾಗಿ ಕಾಂಗ್ರೆಸ್ ಟ್ವೀಟರ್ ನಲ್ಲಿ '#KnowYourLegacy ಕ್ವಿಜ್ ಪ್ರಾರಂಭಿಸಿ, ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಸ್ವಾತಂತ್ರ್ಯ ಚಳುವಳಿಯ ಕುರಿತು ಪ್ರಶ್ನೆಗಳನ್ನು ಕೇಳಲು ಪ್ರಾರಂಭಿಸಿತ್ತು.  ಅಷ್ಟೇ ಅಲ್ಲದೇ ಕಾಂಗ್ರೆಸ್ ಗೂ ಸ್ವಾತಂತ್ರ್ಯ ಹೋರಾಟಕ್ಕೂ ಇರುವ ಸಂಬಂಧವನ್ನು ಈ ಮೂಲಕ ತಿಳಿಸಲು ಯತ್ನಿಸಿತ್ತು. ಆದರೆ ಕಾಂಗ್ರೆಸ್ ನ್ನು ಗೇಲಿ ಮಾಡುವ ರೀತಿಯಲ್ಲಿ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. 

blockquote class="twitter-tweet" data-lang="en">

कांग्रेस मुक्त भारत का नारा किसने दिया? Options ⬇
1.narendra Modi
2.narendra Modi
3.narendra Modi
4.narendra Modi

— rajdev (@rajdevjaiswal) August 3, 2017
ಕ್ವಿಟ್ ಇಂಡಿಯಾ ಘೋಷಣೆಯನ್ನು ಮೊದಲು ಪರಿಚಯಿಸಿದವರು ಯಾರು ಎಂಬ ಪ್ರಶ್ನೆ ಕೇಳಿರುವ ಕಾಂಗ್ರೆಸ್ ಪಕ್ಷದ ಟ್ವೀಟ್ ಖಾತೆಯನ್ನು ಟ್ರೋಲ್ ಮಾಡಿರುವ ಕಾಂಗ್ರೆಸ್ ಮುಕ್ತ ಭಾರತ ಘೋಷಣೆ ಮೊದಲು ಯಾರು ಪರಿಚಯಿಸಿದ್ದು ಎಂದು ಪ್ರಶ್ನೆ ಕೇಳಿದ್ದಾರೆ. 
SCROLL FOR NEXT