ದೇಶ

ವಿಸಿಟ್ ವೀಸಾ ಪಡೆದು ಯುಎಇ ಗೆ ಬರಬೇಡಿ: ಉದ್ಯೋಗ ಹುಡುಕುತ್ತಿರುವವರಿಗೆ ಭಾರತೀಯ ರಾಯಭಾರಿ ಕಚೇರಿ

Srinivas Rao BV
ಚೆನ್ನೈ: ತಮಿಳುನಾಡು ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಉದ್ಯೋಗಕ್ಕಾಗಿ ಅರಬ್ ಗೆ ತೆರಳುತ್ತಿರುವ ಭಾರತೀಯರಿಗೆ ವಿಸಿಟ್ ವೀಸಾ ನೀಡಿ ವಂಚನೆ ಮಾಡುತ್ತಿರುವ ಪ್ರಕರಣಗಳು ಹೆಚ್ಚುತ್ತಿದ್ದು, ವಿಸಿಟ್ ವೀಸಾ ಪಡೆದು ಯುಎಇ ಗೆ ಬರಬೇಡಿ ಎಂದು  ಭಾರತೀಯ ರಾಯಭಾರಿ ಕಚೇರಿ ಉದ್ಯೋಗಾಕಾಂಕ್ಷಿಗಳಿಗೆ ಸೂಚನೆ ನೀಡಿದೆ. 
ಟೈಮ್ಸ್ ಆಫ್ ಇಂಡಿಯಾದೊಂದಿಗೆ ಮಾತನಾಡಿರುವ ದುಬೈ ನ ಭಾರತೀಯ ರಾಯಭಾರಿ ಕಚೇರಿ ಅಧಿಕಾರಿ ವಿಫುಲ್ ನಕಲಿ ಏಜೆಂಟ್ ಗಳಿಂದ ವಿಸಿಟ್ ವೀಸಾ ಪಡೆದು ಮೋಸ ಹೋಗಿರುವುದರ ಬಗ್ಗೆ ರಾಯಭಾರಿ ಕಚೇರಿಗೆ ಕರೆಗಳು ಬರುತ್ತಿವೆ. ಉದ್ಯೋಗಕ್ಕಾಗಿ ಬರುವವರು ಯುಎಇಗೆ ವಿಸಿಟ್ ವೀಸಾ ಪಡೆದು ಬರಬಾರದು, ಎಂಟ್ರಿ ಪರ್ಮಿಟ್ ಉದ್ಯೋಗ ದೃಢೀಕರಣ ಪತ್ರವನ್ನೂ ಜೊತೆಯಲ್ಲಿಟ್ಟುಕೊಂಡಿರಬೇಕು ಎಂದು ಹೇಳಿದ್ದಾರೆ. 
ವಿಸಿಟ್ ವೀಸಾ ಪಡೆದು ಉತ್ತರ ಪ್ರದೇಶದ 27 ಜನರು ವಿಸಿಟ್ ವೀಸಾ ಪಡೆದು ಅರಬ್ ಗೆ ಆಗಮಿಸಿದ್ದರು, ಈ ಪ್ರಕರಣದಲ್ಲಿ ವಿಸಿಟ್ ವೀಸಾ ಪಡೆದವರು ವಂಚನೆಗೊಳಗಾಗಿದ್ದವರೆಂಬುದು ಸ್ಪಷ್ಟವಾಗಿದೆ ಇಂತಹದ್ದೇ ಅನೇಕ ಪ್ರಕರಣಗಳು ಬಯಲಾಗಿದ್ದು ವಿಸಿಟ್ ವೀಸಾ ಪಡೆದು ಯುಎಇ ಗೆ ಬರಬೇಡಿ ಎಂದು ರಾಯಭಾರಿ ಕಚೇರಿ ಎಚ್ಚರಿಕೆ ನೀಡಿದೆ. 
SCROLL FOR NEXT