ದೇಶ

ಆಗಸ್ಟ್ 7 ಕ್ಕೆ ಚಂದ್ರಗ್ರಹಣ: ಭಾರತದಲ್ಲಿ ಗೋಚರ

Shilpa D
ನವದೆಹಲಿ: ಆಗಸ್ಟ್ 7ರ ರಾತ್ರಿ ಚಂದ್ರಗ್ರಹಣ ಸಂಭವಿಸಲಿದ್ದು, ಮುಂಜಾನೆವರೆಗೆ ಮುಂದುವರಿಯಲಿದೆ. 
ಈ ಗ್ರಹಣ ಭಾರತದಲ್ಲಿ ಗೋಚರಿಸಲಿದೆ. ಅಲ್ಲದೆ ಯುರೋಪ್, ಏಷ್ಯಾ, ದಕ್ಷಿಣ ಆಫ್ರಿಕಾಗಳಲ್ಲಿ ಕಾಣಿಸಲಿದೆ ಎಂದು  ನೆಹರೂ ತಾರಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಇದೇ 7ರ ರಾತ್ರಿ 9.20ಕ್ಕೆ  ಚಂದ್ರಗ್ರಹಣ ಆರಂಭವಾಗಲಿದೆ. ಆದರೆ ಆಗ ಅದು ಕಣ್ಣಿಗೆ ಕಾಣಿಸದು. ರಾತ್ರಿ 10.52ರ ನಂತರ ಗ್ರಹಣ ನೋಡುವುದಕ್ಕೆ ಸಾಧ್ಯ. ಮಧ್ಯರಾತ್ರಿ 12.48ರವರೆಗೂ ನೋಡುವುದಕ್ಕೆ ಸಾಧ್ಯವಿದೆ.
ಆಗಸ್ಟ್‌ 21ರಂದು ಸಂಭವಿಸಲಿರುವ ಪೂರ್ಣ ಸೂರ್ಯಗ್ರಹಣ ಸಂಭವಿಸಲಿದೆ. ಏಷ್ಯಾ (ಭಾರತ ಸೇರಿದಂತೆ) ಮತ್ತು ಆಫ್ರಿಕಾದ ಕೆಲ ಭಾಗಗಳಲ್ಲಿ ಗೋಚರಿಸುವುದಿಲ್ಲ. ಇದರಿಂದಾಗಿ ಗ್ರಹಣ ವೀಕ್ಷಣೆ ಪ್ರಿಯರಿಗೆ ತೀವ್ರ ನಿರಾಸೆಯಾಗಿದೆ.
SCROLL FOR NEXT