ಸಚಿನ್ ತೆಂಡೂಲ್ಕರ್ 
ದೇಶ

ಅಪರೂಪಕ್ಕೆ ರಾಜ್ಯಸಭಾ ಕಲಾಪಕ್ಕೆ ಹಾಜರಾದ ಸಚಿನ್: ಟ್ವೀಟಿಗರಿಂದ ಟ್ರೋಲ್

ರಾಜ್ಯಸಭಾ ಸದಸ್ಯ, ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅಪರೂಪಕ್ಕೆ ರಾಜ್ಯಸಭಾ ಕಲಾಪಕ್ಕೆ ಹಾಜರಾಗಿದ್ದು, ಅಪರೂಪಕ್ಕೆ ಸಂಸತ್ ಕಲಾಪಕ್ಕೆ ಹಾಜರಾದ ಸಚಿನ್ ಅವರನ್ನು ಟ್ವೀಟಿಗರು ಟ್ರೋಲ್..

ನವದೆಹಲಿ: ರಾಜ್ಯಸಭಾ ಸದಸ್ಯ, ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅಪರೂಪಕ್ಕೆ ರಾಜ್ಯಸಭಾ ಕಲಾಪಕ್ಕೆ ಹಾಜರಾಗಿದ್ದು, ಅಪರೂಪಕ್ಕೆ ಸಂಸತ್ ಕಲಾಪಕ್ಕೆ ಹಾಜರಾದ ಸಚಿನ್ ಅವರನ್ನು ಟ್ವೀಟಿಗರು ಟ್ರೋಲ್ ಮಾಡಿದ್ದಾರೆ. ಸಚಿನ್ ತೆಂಡೂಲ್ಕರ್ ರಾಜ್ಯಸಭಾ ಕಲಾಪಕ್ಕೆ ಹಾಜರಾಗಿದ್ದರೂ ಸಹ ಯಾವುದೇ ಪ್ರಶ್ನೆಗಳನ್ನು ಕೇಳಿಲ್ಲ. 
ಕೆಲವು ದಿನಗಳ ಹಿಂದೆ ಸಮಾಜವಾದಿ ಪಕ್ಷದ ನಾಯಕ, ಸಂಸದ ನರೇಶ್ ಅಗರ್ವಾಲ್ ರಾಜ್ಯಸಭೆಗೆ ನಾಮನಿರ್ದೇಶನದ ಮೂಲಕ ಆಯ್ಕೆಗೊಂಡ ಸದಸ್ಯರ ಅನುಪಸ್ಥಿತಿಯನ್ನು ಪ್ರಶ್ನಿಸಿದ್ದರು. ಅಷ್ಟೇ ಅಲ್ಲದೇ ಸರಿಯಾಗಿ ಕಲಾಪಕ್ಕೆ ಹಾಜರಾಗದ ಸಚಿನ್ ತೆಂಡೂಲ್ಕರ್ ಹಾಗೂ ರೇಖಾ ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದ್ದರು. 
ನರೇಶ್ ಅಗರ್ವಾಲ್ ಹೇಳಿಕೆ ನೀಡಿದ ನಂತರ ಸಚಿನ್ ತೆಂಡೂಲ್ಕರ್ ರಾಜ್ಯಸಭೆ ಕಲಾಪಕ್ಕೆ ಹಾಜರಾಗಿದ್ದು, ಟ್ವೀಟಿಗರು ಟ್ರೋಲ್ ಮಾಡಿದ್ದಾರೆ. ಸಚಿನ್ ತೆಂಡೂಲ್ಕರ್ ಅವರು ರಾಜ್ಯಸಭಾ ಕಲಾಪಕ್ಕೆ ಹಾಜರಾಗಿರುವುದನ್ನು ಕೆಲವು ಟ್ವೀಟಿಗರು ಜೀವನದಲ್ಲಿ ಕೇವಲ ಒಮ್ಮೆ ನಡೆಯುವ ಅದ್ಭುತ ಎಂಬಂತೆ ಬಿಂಬಿಸಿದ್ದು, 100 ವರ್ಷಗಳಿಗೆ ಒಮ್ಮೆ ಅರಳುವ ಹೂವು ಹಾಗೂ ಅಪರೂಪಕ್ಕೆ ಕಾಣಿಸಿಕೊಳ್ಳುವ ಧೂಮಕೇತುವಿನ ಫೋಟೋದೊಂದಿಗೆ ಸಚಿನ್ ಕಲಾಪದಲ್ಲಿ ಹಾಜರಾಗಿರುವ ಫೋಟೋವನ್ನು ಹಾಕಿ ಟ್ರೋಲ್ ಮಾಡಿದ್ದಾರೆ. ಭಾರತ ಹಲವು ವರ್ಷಗಳಿಂದ ಕಾಯುತ್ತಿದ್ದದ್ದನ್ನು 2017 ರಲ್ಲಿ ಸಾಧಿಸಿದೆ. ಒಂದು ಜಿಎಸ್ ಟಿ ಜಾರಿ ಹಾಗೂ ಮತ್ತೊಂದು ಸಚಿನ್ ತೆಂಡೂಲ್ಕರ್ ರಾಜ್ಯಸಭೆಗೆ ಆಗಮಿಸಿರುವುದು ಎಂದು ಮತ್ತೆ ಕೆಲವರು ಟ್ರೋಲ್ ಮಾಡಿದ್ದಾರೆ.  

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಗ್ನಿಜಂಟ್, ಇನ್ಫೋಸಿಸ್, ಟಿಸಿಎಸ್, ವಿಪ್ರೋ ಎಚ್‌ಸಿಎಲ್ ಗೆ ಅಮೆರಿಕ ಶಾಕ್: ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು!

ರಿಯಾದ್ ವಿಮಾನ ನಿಲ್ದಾಣದ ಮೇಲೆ ದಾಳಿ: ರಿಯಾದ್ ಗೆ ತೆರಳಬೇಕಿದ್ದ ಭಾರತೀಯ ವಿಮಾನಗಳು ರದ್ದು

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ಅಂಬಾನಿ ಭಾರತದ ನಿಜವಾದ ಬಾಸ್?: ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆ ಆರಂಭ ವಿಳಂಬಕ್ಕೆ ಎಲಾನ್ ಮಸ್ಕ್ ಹತಾಶೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!