ತ್ರಿವಳಿ ತಲಾಖ್ ವಿರುದ್ಧ ದನಿ: ಮೋದಿ, ಯೋಗಿಯನ್ನು ಕೊಂಡಾಡಿ ವಿಶೇಷ ರಾಖಿ ಕಳುಹಿಸಿದ ಮುಸ್ಲಿಂ ಮಹಿಳೆಯರು! 
ದೇಶ

ತ್ರಿವಳಿ ತಲಾಖ್ ವಿರುದ್ಧ ದನಿ: ಮೋದಿ, ಯೋಗಿಯನ್ನು ಕೊಂಡಾಡಿ ವಿಶೇಷ ರಾಖಿ ಕಳುಹಿಸಿದ ಮುಸ್ಲಿಂ ಮಹಿಳೆಯರು!

ಮುಸ್ಲಿಂ ಮಹಿಳೆಯರ ಪರವಾಗಿ ನಿಂತು ತ್ರಿವಳಿ ತಲಾಖ್ ವಿರುದ್ಧ ದನಿ ಎತ್ತಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಕೊಂಡಾಡಿರುವ ಮುಸ್ಲಿಂ ಸಮುದಾಯದ ಮಹಿಳೆಯರು ರಕ್ಷಾ ಬಂಧನ...

ಲಖನೌ: ಮುಸ್ಲಿಂ ಮಹಿಳೆಯರ ಪರವಾಗಿ ನಿಂತು ತ್ರಿವಳಿ ತಲಾಖ್ ವಿರುದ್ಧ ದನಿ ಎತ್ತಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಕೊಂಡಾಡಿರುವ ಮುಸ್ಲಿಂ ಸಮುದಾಯದ ಮಹಿಳೆಯರು ರಕ್ಷಾ ಬಂಧನ ಹಿನ್ನಲೆಯಲ್ಲಿ ಇಬ್ಬರು ಬಿಜೆಪಿ ನಾಯಕರಿಗೆ ವಿಶೇಷ ರಾಖಿಗಳನ್ನು ರವಾನಿಸಿದ್ದಾರೆ. 

ಸಹೋದರ-ಸಹೋದರಿಯರ ಹಬ್ಬವಾಗಿರುವ ರಕ್ಷಾ ಬಂಧನ ಹತ್ತಿರ ಬರುತ್ತಿರುವ ಹಿನ್ನಲೆಯಲ್ಲಿ, ಉತ್ತರಪ್ರದೇಶ ವಾರಣಾಸಿಯ ಮುಸ್ಲಿಂ ಮಹಿಳೆಯರು ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗಾಗಿ ವಿಶೇಷ ರಾಖಿಗಳನ್ನು ತಯಾರಿಸಿದ್ದಾರೆ. 

ದಾರ ಹಾಗೂ ಮುತ್ತುಗಳಿಂದ ರಾಖಿಗಳನ್ನು ಸಿದ್ಧಪಡಿಸಿರುವ ಮುಸ್ಲಿಂ ಮಹಿಳೆಯರು ಅವುಗಳ ಮೇಲೆ ಪ್ರಧಾನಿ ಮೋದಿ ಹಾಗೂ ಯೋಗಿ ಆದಿತ್ಯನಾಥ್ ಅವರು ಭಾವಚಿತ್ರಗಳನ್ನು ಅಂಟಿಸಿದ್ದಾರೆ. ಈ ವಿಶೇಷ ರಾಖಿಗಳನ್ನು ರಕ್ಷಾ ಬಂಧನದ ದಿನದಂದು ಯೋಗಿ ಆದಿತ್ಯನಾಥಅ ಹಾಗೂ ಮೋದಿಯವರಿಗೆ ಕಳುಹಿಸಲು ಮಹಿಳೆಯರು ನಿರ್ಧರಿಸಿದ್ದಾರೆ. 

ಪ್ರಧಾನಮಂತ್ರಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ಯೋಗಿ ನೇತೃತ್ವದ ಉತ್ತರಪ್ರದೇಶ ಸರ್ಕಾರ ಮುಸ್ಲಿ ಮಹಿಳೆಯರ ದನಿಯಾಗಿ ನಿಂತು ತ್ರಿವಳಿ ತಲಾಖ್ ವಿರುದ್ಧ ದನಿ ಎತ್ತಿರುವುದಕ್ಕೆ ಮುಸ್ಲಿಂ ಮಹಿಳೆಯಲು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. 

ಒಂದೆಡೆ ಪ್ರಧಆನಿ ಮೋದಿಯವರು ಮುಸ್ಲಿಂ ಮಹಿಳೆಯರ ಸುರಕ್ಷತೆಗಾಗಿ ಶ್ರಮ ಪಡುತ್ತಿದ್ದಾರೆ, ಮತ್ತೊಂದೆಡೆ ಯೋಗಿ ಆದಿತ್ಯನಾಥ್ ಅವರು ಮುಸ್ಲಿಂ ಮಹಿಱೆಯರ ಮದುವೆಯ ನೋಂದಾವಣಿ ಕಾಯ್ದೆಯನ್ನು ಜಾರಿಗೆ ತಂದಿರುವುದನ್ನು ಮಹಿಳೆಯರು ಕೊಂಡಾಡಿದ್ದಾರೆ. 

ತ್ರಿವಳಿ ತಲಾಖ್ ವಿರುದ್ಧದ ನಮ್ಮ ಹೋರಾಟಕ್ಕೆ ಪ್ರಧಾನಿ ಮೋದಿ ಹಾಗೂ ಯೋಗಿ ಆದಿತ್ಯನಾಥ್ ಅವರು ನಮಗೆ ಬೆಂಬಲ ನೀಡಿದ್ದಾರೆ. ಸಹೋದರರಂತೆ ನಿಂದೂ ಉತ್ತಮ ಪಾತ್ರ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಅವರ ಸಹೋದರಿಯರಾಗಿ ನಾವು ನಮ್ಮ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದೇವೆ. ಸಹೋದರರಾಗಿರುವ ಮೋದಿ ಹಾಗೂ ಯೋಗಿ ಆದಿತ್ಯನಾಥ್ ಅವರಿಗೆ ರಾಖಿಗಳನ್ನು ರವಾನಿಸುತ್ತಿದ್ದೇವೆಂದು ಮಹಿಳೆಯರು ಹೇಳಿದ್ದಾರೆ. 

ನಮ್ಮ ಸಹೋದರರರು ಮುಂದೆ ಕೂಡ ಭವಿಷ್ಯದಲ್ಲಿ ನಮ್ಮೊಂದಿಗೆ ನಿಲ್ಲುತ್ತಾರೆಂದು ವಿಶ್ವಾಸವಿದೆ. ಮೋದಿ ಹಾಗೂ ಯೋಗಿ ಇಬ್ಬರೂ ಇದೇ ರೀತಿ ಮಹಿಳೆಯರ ಏಳಿಗೆಗಾಗಿ ಶ್ರಮಿಸಲಿ ಎಂದು ಅಲ್ಲಾಹ್ ಬಳಿ ಪ್ರಾರ್ಥನೆ ಸಲ್ಲಿಸುತ್ತೇವೆಂದು ತಿಳಿಸಿದ್ದಾರೆ. 

ಸಹೋದರ-ಸಹೋದರಿಯರ ಬಂಧವನ್ನು ಪ್ರತಿನಿಧಿಸುವ ರಾಖಿ ಹಬ್ಬಕ್ಕೆ ಇನ್ನು ಕೆಲವೇ ದಿನಗಳು ಬಾಕಿಯಿದೆ. ರಕ್ಷಾ ಬಂಧನದ ಹಬ್ಬವನ್ನು ಹೆಚ್ಚಾಗಿ ಹಿಂದೂಗಳೇ ಆಚರಿಸುತ್ತಾರೆ. ಹಬ್ಬದ ಹಿನ್ನಲೆಯಲ್ಲಿ ಮಹಿಳೆಯರು ಈಗಾಗಲೇ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ಸಿದ್ದರಾಮಯ್ಯ ಬ್ರೇಕ್ ಫಾಸ್ಟ್ ಮೀಟಿಂಗ್; ಸಿಎಂ ಸ್ಥಾನಕ್ಕೆ ರಾಜೀನಾಮೆ?, ದಿಢೀರ್ ಮುಂಬೈಗೆ ತೆರಳಿದ ರಾಜ್ಯಪಾಲ ಗೆಹ್ಲೋಟ್..!

ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ: 4 ಇರಾನ್ ಡ್ರೋನ್‌ಗಳನ್ನು ಹೊಡೆದುರುಳಿಸಿದ ಅಮೆರಿಕಾ, ಹೋರ್ಮುಜ್‌ನಲ್ಲಿ ಉದ್ವಿಗ್ನತೆ ತೀವ್ರ..!

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

SCROLL FOR NEXT