ಡಿಜಿಪಿ ಮುನೀರ್‌ ಖಾನ್‌ ಸುದ್ದಿಗೋಷ್ಠಿ 
ದೇಶ

ಅಮರನಾಥ ಯಾತ್ರಿಕರ ಮೇಲೆ ದಾಳಿ ಮಾಡಿದ್ದ ಮೂವರು ಪಾಕ್ ಮೂಲದ ಉಗ್ರರ ಬಂಧನ: ಕಾಶ್ಮೀರ ಡಿಜಿಪಿ

ಜುಲೈ 11ರಂದು ಬಾಲ್ಟಾಲ್ ನಲ್ಲಿ ಅಮರನಾಥ ಯಾತ್ರಾರ್ಥಿಗಳ ಬಸ್ ಮೇಲೆ ದಾಳಿ ಮಾಡಿದ್ದ ಮೂವರು ಉಗ್ರರನ್ನು ಬಂಧಿಸುವಲ್ಲಿ ಕಾಶ್ಮೀರ ಪೊಲೀಸರು ಯಶಸ್ವಿಯಾಗಿದ್ದು, ಬಂಧಿತರ ಪೈಕಿ ಪಾಕ್ ಮೂಲದ ಉಗ್ರರು ಕೂಡ ಇದ್ದಾರೆ ಎಂದು ತಿಳಿದುಬಂದಿದೆ.

ಶ್ರೀನಗರ: ಕಳೆದ ಜುಲೈ 11ರಂದು ಬಾಲ್ಟಾಲ್ ನಲ್ಲಿ ಅಮರನಾಥ ಯಾತ್ರಾರ್ಥಿಗಳ ಬಸ್ ಮೇಲೆ ದಾಳಿ ಮಾಡಿದ್ದ ಮೂವರು ಉಗ್ರರನ್ನು ಬಂಧಿಸುವಲ್ಲಿ ಕಾಶ್ಮೀರ ಪೊಲೀಸರು ಯಶಸ್ವಿಯಾಗಿದ್ದು, ಬಂಧಿತರ ಪೈಕಿ ಪಾಕ್ ಮೂಲದ  ಉಗ್ರರು ಕೂಡ ಇದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಸ್ವತಃ ಜಮ್ಮು ಮತ್ತು ಕಾಶ್ಮೀರದ ಡಿಜಿಪಿ ಮುನೀರ್‌ ಖಾನ್‌ ಅವರು ಅವರು, ಸುದ್ದಿಗೋಷ್ಠಿ ನಡೆಸಿ ಮಾಧ್ಯಮಗಳಿಗೆ ಮಾಹಿತಿ ನೀಡಿದರು. ದಾಳಿಯನ್ನು ಲಷ್ಕರ್‌-ಇ-ತೋಯ್ಬಾ ಉಗ್ರರು ನಡೆಸಿದ್ದು, ಬಂಧಿತರ ಪೈಕಿ ಓರ್ವ  ಉಗ್ರ ಪಾಕಿಸ್ತಾನದವನಾಗಿದ್ದು, ಇನ್ನಿಬ್ಬರು ಕಾಶ್ಮೀರದವರು ಎಂದು ಮಾಹಿತಿ ನೀಡಿದ್ದಾರೆ. ಬಂಧಿತರ ವಿಚಾರಣೆ ವೇಳೆ ದಾಳಿಗೆ ಪಾಕ್‌ ಉಗ್ರ ಸಂಘಟನೆ ಪ್ರೇರಣೆ ನೀಡಿರುವುದು ಕಂಡು ಬಂದಿದೆ. ದಾಳಿಯಲ್ಲಿ ಭಾಗಿಯಾದ ಇನ್ನಿಬ್ಬರು  ಉಗ್ರರನ್ನು ಸೇನಾ ಪಡೆಗಳು ಈಗಾಗಲೇ ಹತ್ಯೆಗೈದಿವೆ ಎಂದು ಮುನೀರ್ ಖಾನ್ ತಿಳಿಸಿದರು.

"ಅಮರನಾಥ್ ಯಾತ್ರಿಕರ ಮೇಲಿನ ದಾಳಿ ಸಂಪೂರ್ಣ ಪೂರ್ವ ನಿಯೋಜಿತ ಕೃತ್ಯವಾದಿತ್ತು.  ಪ್ರಕರಣ ಸಂಬಂಧ ನಾವು ಈಗಾಗಲೇ ಇಬ್ಬರು ಉಗ್ರರನ್ನು ಕೊಂದು ಹಾಕಿದ್ದು, ಮೂವರು ಶಂಕಿತ ಉಗ್ರರನ್ನು ವಶಕ್ಕೆ ಪಡೆದಿದ್ದೇವೆ.  ದಾಳಿಯಲ್ಲಿ ಪಾಕಿಸ್ತಾನದ ಕೈವಾಡವಿರುವುದು ಸ್ಪಷ್ಟವಾಗಿದ್ದು, ಪಾಕ್ ಮೂಲದ ಲಷ್ಕರ್ ಉಗ್ರ ಸಂಘಟನೆಯೇ ದಾಳಿ ನಡೆಸಿದೆ. ಪ್ರಕರಣ ಸಂಬಂಧ ಪಾಕಿಸ್ತಾನ ಮೂಲದ ಮೂವರು ಉಗ್ರರನ್ನು ಬಂಧಿಸಲಾಗಿದ್ದು, ಈ ಪೈಕಿ ಓರ್ವ  ಉಗ್ರನನ್ನು ಇಸ್ಮಾಯಿಲ್ ಎಂದು ಗುರುತಿಸಲಾಗಿದೆ. ಅಂತೆಯೇ ಓರ್ವ ಸ್ಥಳೀಯ ಉಗ್ರವಾದಿಯನ್ನೂ ಕೂಡ ಬಂಧಿಸಲಾಗಿದೆ. ಬಂಧಿತ ಇಸ್ಮಾಯಿಲ್ ಎಲ್ಲ ವಿವರಗಳನ್ನು ನೀಡಿದ್ದು, ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ.

ಪಾಕಿಸ್ತಾನದಿಂದಲೇ ಉಗ್ರರಿಗೆ ದಾಳಿ ನಡೆಸಲು ಬೇಕಾದ ಶಸ್ತ್ರಾಸ್ತ್ರಗಳು ಪೂರೈಕೆಯಾಗಿವೆ. ಜುಲೈ 9ರಂದೇ ದಾಳಿ ನಡೆಸಲು ಉಗ್ರರು ಸಂಚು ರೂಪಿಸಿದ್ದರು, ಆದರೆ ಅಂದು ಯೋಧರು ಮತ್ತು ಯಾತ್ರಾರ್ಥಿಗಳ ಪ್ರಯಾಣ  ವಿರಳವಾಗಿದ್ದ ಕಾರಣ ದಾಳಿ ನಡೆಸಲಾಗಲಿಲ್ಲ. ತಮ್ಮ ದಾಳಿಗಾಗಿ ಉಗ್ರರು ಒಂದಷ್ಟು ಕೋಡ್ ವರ್ಡ್ ಗಳನ್ನು ಬಳಕೆ ಮಾಡಿಕೊಂಡಿದ್ದರು. ಯಾತ್ರಾರ್ಥಿಗಳ ವಾಹನಕ್ಕೆ ಶೌಕಾತ್ ಎಂದೂ ಯೋಧರ ವಾಹನಗಳಿಗೆ ಬಿಲಾಲ್ ಎಂದು  ಕೋಡ್ ವರ್ಡ್ ಗಳನ್ನು ಇಟ್ಟುಕೊಂಡಿದ್ದರು. ಜುಲೈ 9ರ ದಾಳಿ ಮಿಸ್ ಆದಾಗ ಮತ್ತೆ ಜುಲೈ 11ರ ಸಂಜೆ ಯಾತ್ರಾರ್ಥಿಗಳ ವಾಹನ ಆ ಮಾರ್ಗದಲ್ಲೇ ಸಾಗಿತ್ತು. ಇದನ್ನು ನೋಡಿದ ಉಗ್ರನೋರ್ವ ತಮ್ಮ ತಂಡಕ್ಕೆ ಶೌಕಾತ್ ಎಂದು  ಕೂಗಿ ಹೇಳಿದ್ದ, ಕೂಡಲೇ ಯಾತ್ರಾರ್ಥಿಗಳ ವಾಹನವನ್ನು ಹಿಂಬಾಲಿಸಿದ ಉಗ್ರರು ದಾಳಿ ನಡೆಸಿದರು ಎಂದು ಮುನೀರ್ ಖಾನ್ ಹೇಳಿದರು.

ಇನ್ನು ಪ್ರಕರಣದ ತನಿಖೆ ಅಂತಿಮ ಘಟ್ಟದಲ್ಲಿದ್ದು, ಎಲ್ಲ ಶಂಕಿತ ಉಗ್ರರನ್ನು ಶೀಘ್ರದಲ್ಲೇ ಸದೆಬಡಿಯುತ್ತೇವೆ. ಪ್ರಸ್ತುತ ಬಂಧಿತ ಉಗ್ರರನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸುತ್ತೇವೆ ಎಂದು ಹೇಳಿದ್ದಾರೆ.

ಕಳೆದ ಜುಲೈ11ರಂದು ಉಗ್ರರು ಅಮರನಾಥ ಯಾತ್ರಿಕರ ಬಸ್‌ ಮೇಲೆ ನಡೆಸಿದ ಗುಂಡಿನ ದಾಳಿಯಲ್ಲಿ 8 ಮಂದಿ ಸಾವನ್ನಪ್ಪಿ, 19 ಮಂದಿ ಗಂಭೀರವಾಗಿ ಗಾಯಗೊಂಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

ಪಂದ್ಯ ಮುಗಿಸಿ ಮನೆಗೆ ಮರಳುವಾಗ ಭೀಕರ ಅಪಘಾತ, 4 ಕ್ರಿಕೆಟಿಗರ ದಾರುಣ ಸಾವು!

ಮಗು ಆಡಿಸುತ್ತಿದ್ದ ವ್ಯಕ್ತಿ ಮೇಲೆ ಗೂಳಿ ದಾಳಿ; ರಕ್ಷಣೆಗೆ ಧಾವಿಸಿದ ಮಹಿಳೆ, Video ವೈರಲ್

'ಭಾರತೀಯನ ಮದುವೆಯಾದಾಕ್ಷಣ Indian ಆಗಲ್ಲ, ಬಾಂಗ್ಲಾದೇಶಿ ಪತ್ನಿಗೆ ಭಾರತ ಪ್ರವೇಶ ನಿರಾಕರಣೆ ಸರಿ ಇದೆ': ಹೈಕೋರ್ಟ್