ಹರ್ಯಾಣ ಬಿಜೆಪಿ ಮುಖ್ಯಸ್ಥ ಸುಭಾಷ್ ಬರಾಲ ಅವರ ಮಗ ವಿಕಾಸ್ ಬರಾಲ ಹಾಗೂ ಆತನ ಸ್ನೇಹಿತ ಆಶೀಶ್ ಕುಮಾರ್ ಯುವತಿಯೊಬ್ಬಳನ್ನು ಹಿಂಬಾಲಿಸುತ್ತಿದ್ದ ಆರೋಪದಡಿ ಬಂಧಿಸಲಾಗಿದೆ.
ಹರ್ಯಾಣ ಬಿಜೆಪಿ ನಾಯಕನ ಮಗನ ವಿರುದ್ಧ ಐಎಎಸ್ ಅಧಿಕಾರಿಯ ಮಗಳನ್ನು ಹಿಂಬಾಲಿಸುತ್ತಿದ್ದ ಆರೋಪ ಕೇಳಿಬಂದಿದ್ದು, ಕುಡಿದ ಮತ್ತಿನಲ್ಲಿ ಯುವತಿಯನ್ನು ಹಿಂಬಾಲಿಸಿದ್ದರಿಂದ ವಿಕಾಸ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಚಂಡೀಗಢ ಪೊಲೀಸರು ಹೇಳಿದ್ದಾರೆ.
ಜಾಮೀನು ಸಹಿತ ಅಪರಾಧ ಪ್ರಕರಣವನ್ನು ಇಬ್ಬರು ಯುವಕರ ಮೇಲೆ ದಾಖಲಿಸಲಾಗಿದ್ದು, ಬಂಧನದ ನಂತರ ಬಿಡುಗಡೆ ಮಾಡಲಾಗಿದೆ. ತನ್ನನ್ನು ಇಬ್ಬರು ಯುವಕರು ಹಿಂಬಾಲಿಸುತ್ತಿದ್ದ ಬಗ್ಗೆ ಫೇಸ್ ಬುಕ್ ನಲ್ಲಿ ಐಎಎಸ್ ಅಧಿಕಾರಿಯ ಪುತ್ರಿ ಅಪ್ ಡೇಟ್ ಮಾಡಿದ್ದರು. ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಐಎಎಸ್ ಅಧಿಕಾರಿ ಆರೋಪಿಗಳು ಪ್ರಭಾವಿ ಕುಟುಂಬದವರಾಗಿರುವುದರಿಂದ ಶಿಕ್ಷೆಯಾಗದೇ ಇರುವ ಸಾಧ್ಯತೆಗಳಿರುವುದರ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.