Iris Dena ನಾವಿಕರ ಹತ್ಯೆ: ಡೆಡ್ಲಿ ಪ್ರತೀಕಾರಕ್ಕಾಗಿ ಕಾಯುತ್ತಿದ್ದೇವೆ, ಯಾವಾಗ, ಏನು ಎಂಬ ಗುಟ್ಟು ಬಿಟ್ಟುಕೊಡದ ಇರಾನ್!

ಐರಿಸ್ ದೇನಾ ಯುದ್ಧನೌಕೆಯ ನಾವಿಕರ ಹತ್ಯೆ ಕುರಿತು ಪ್ರತಿಕ್ರಿಯಿಸಿದ ರಿಯರ್ ಅಡ್ಮಿರಲ್ ಶಹರಾಮ್ ಇರಾನಿ, ದಾಳಿಗೆ ಪ್ರತಿಕ್ರಿಯಿಸಲು ಇರಾನ್ ಬದ್ಧವಾಗಿದೆ ಎಂದು ಹೇಳಿದ್ದಾರೆ.
Iris Dena
ಐರಿಸ್ ದೇನಾ ಯುದ್ಧ ನೌಕೆ
Updated on

ಟೆಹ್ರಾನ್: ಇರಾನ್ ವಿರುದ್ಧ ಇಸ್ರೇಲ್ ಹಾಗೂ ಅಮೆರಿಕ ನಡೆಯುತ್ತಿರುವ ಯುದ್ಧ 18ಕ್ಕೆ ಕಾಲಿಟ್ಟಿರುವಂತೆಯೇ ಇರಾನ್ ನೌಕಾಪಡೆಯ ಕಮಾಂಡರ್ ಕಠಿಣ ಎಚ್ಚರಿಕೆಯನ್ನು ನೀಡಿದ್ದಾರೆ. ಶ್ರೀಲಂಕಾದ ಕರಾವಳಿಯಲ್ಲಿ Iris Dena ಹಡಗಿನ ನಾವಿಕರ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳದೆ ಬಿಡಲ್ಲ ಎಂದಿದ್ದಾರೆ.

ಐರಿಸ್ ದೇನಾ ಯುದ್ಧನೌಕೆಯ ನಾವಿಕರ ಹತ್ಯೆ ಕುರಿತು ಪ್ರತಿಕ್ರಿಯಿಸಿದ ರಿಯರ್ ಅಡ್ಮಿರಲ್ ಶಹರಾಮ್ ಇರಾನಿ, ದಾಳಿಗೆ ಪ್ರತಿಕ್ರಿಯಿಸಲು ಇರಾನ್ ಬದ್ಧವಾಗಿದೆ. ನಾವು ಶತ್ರುಗಳ ಅಪರಾಧವನ್ನು ಮರೆಯುವುದಿಲ್ಲ. ನಮ್ಮ ಹುತಾತ್ಮರ ರಕ್ತಕ್ಕಾಗಿ ಪ್ರತೀಕಾರ ತೀರಿಸಿಕೊಳ್ಳುತ್ತೇವೆ ಎಂದು ಹೇಳಿರುವುದಾಗಿ ಪ್ರೆಸ್ ಟಿವಿ ವರದಿ ಮಾಡಿದೆ.

ಪ್ರತೀಕಾರದ ಸಮಯ ಮತ್ತು ಸ್ವಭಾವ ತಮ್ಮ ಶತ್ರುರಾಷ್ಟ್ರವನ್ನು ತೀವ್ರವಾಗಿ ಭಾದಿಸಲಿದೆ ಎಂದು ಹೇಳಿದ ಅವರು, ಮಾರಣಾಂತಿಕ ದಾಳಿಯಿಂದ ಶಿಕ್ಷಿಸುತ್ತೇವೆ ಎಂಬುದು ಶತ್ರುಗಳಿಗೆ ಗೊತ್ತಿರಲಿ ಎಂದು ಆಡ್ಮಿರಲ್ ಹೇಳಿದ್ದಾರೆ.

ನೌಕಾ ಪಡೆಗಳಿಗೆ ಪ್ರಸ್ತುತ ದುಃಖದ ಅವಧಿ ಎಂದು ಒಪ್ಪಿಕೊಂಡ ಅಡ್ಮಿರಲ್ ಇರಾನಿ, ಇರಾನ್ ಬಲವಾದ ಶಕ್ತಿ ಹೊಂದಿದೆ ಎಂದು ಸಮರ್ಥಿಸಿಕೊಂಡಿದ್ದಾರೆ. ಇಂದು ನಾವು ನಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡು ಶೋಕಿಸುತ್ತಿದ್ದರೂ, ದೇವರ ದಯೆಯಿಂದ ಶತ್ರುಗಳು ಮಂಡಿಯೂರುವಂತೆ ಮಾಡಿದ್ದೇವೆ ಎಂದು ಅವರು ಹೇಳಿರುವುದಾಗಿ ಪ್ರೆಸ್ ಟಿವಿ ವರದಿ ಮಾಡಿದೆ.

ಇರಾನ್‌ನ ಸೇನಾ ಮುಖ್ಯಸ್ಥ ಮೇಜರ್ ಜನರಲ್ ಅಮೀರ್ ಹಟಮಿ ಹೇಳಿಕೆ ನಂತರ ಈ ಹೇಳಿಕೆ ಬಂದಿದೆ. ಅವರು ಮಾರ್ಚ್ 14 ರಂದು Iris Dena ಯುದ್ಧನೌಕೆ ಸಿಬ್ಬಂದಿಗಳ ಸಾವುಗಳಿಗೆ ಉತ್ತರಿಸದೆ ಹೋಗುವುದಿಲ್ಲ ಎಂದು ಹೇಳಿದ್ದರು.

Iris Dena
ಭಾರತೀಯ ನೌಕಾಪಡೆ ಅತಿಥಿ 'ಐರಿಸ್ ದೇನಾ' ಯುದ್ಧನೌಕೆಯನ್ನು ಅಮೆರಿಕ ಹೊಡೆದುರುಳಿಸಿದೆ: ಇರಾನ್

ಹಡಗಿನಲ್ಲಿದ್ದ ಅಂದಾಜು 180 ಸಿಬ್ಬಂದಿಗಳಲ್ಲಿ, ಸರಿ ಸುಮಾರು 87 ನಾವಿಕರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಬದುಕುಳಿದಿದ್ದ ಸುಮಾರು 32 ಮಂದಿಯನ್ನು ಶ್ರೀಲಂಕಾ ನೌಕಾಪಡೆ ರಕ್ಷಿಸಿದ್ದು,ನಂತರ ಗಾಲೆಯ ಆಸ್ಪತ್ರೆಗಳಿಗೆ ದಾಖಲಿಸಿತು ಎನ್ನಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com