ಜೈಪುರ: 2022 ರ ವೇಳೆಗೆ ಭಾರತ ಶೇ.100 ರಷ್ಟು ಸಾಕ್ಷರತೆ ಹೊಂದಿರುತ್ತದೆ ಎಂದು ಮಾನವ ಸಂಪನ್ಮೂಲ ಇಲಾಖೆ ಸಚಿವ ಪ್ರಕಾಶ್ ಜಾವ್ಡೇಕರ್ ವಿಶ್ವಾಸ ವ್ಯಕ್ತಪಾಡಿಸಿದ್ದಾರೆ.
ಹೊಸ ಭಾರತದಲ್ಲಿ ಖಾಸಗಿ ಶಾಲೆಗಳಿಗೆ ಸರ್ಕಾರಿ ಶಾಲೆಗಳು ಪೈಪೋಟಿ ನೀಡಲಿವೆ ಎಂದು ರಾಜಸ್ಥಾನದಲ್ಲಿ ನಡೆದ ಫೆಸ್ಟಿವಲ್ ಆಫ್ ಎಜಿಕೇಶನ್ ನಲ್ಲಿ ಮಾತನಾಡಿರುವ ಪ್ರಕಾಶ್ ಜಾವ್ಡೇಕರ್ ಹೇಳಿದ್ದಾರೆ. ಸ್ವಾತಂತ್ರ್ಯ ಬಂದಾಗ ಭಾರತದಲ್ಲಿ ಶೇ.18 ರಷ್ಟು ಮಾತ್ರ ಸಾಕ್ಷರತೆ ಇತ್ತು, ಈಗ ಅದು ಶೇ.80 ರಷ್ಟಾಗಿದೆ ಎಂದು ಹೇಳಿದ್ದಾರೆ.
ಅನಕ್ಷರಸ್ತ ಪೋಷಕರಿಗೆ ಅಕ್ಷರಸ್ತ ಮಕ್ಕಳು ಕಲಿಸುವುದರ ಮೂಲಕ ಶೇ.100 ರಷ್ಟು ಸಾಕ್ಷರತೆ ಗುರಿ ತಲುಪಲು ಸಾಧ್ಯ ಎಂದು ಜಾವ್ಡೇಕರ್ ಹೇಳಿದ್ದಾರೆ.