ಗುಜರಾತ್ ಗೆ ವಾಪಸ್ ಆದ ಕೈ ಶಾಸಕರು 
ದೇಶ

ಬೆಂಗಳೂರಿನಿಂದ ಗುಜರಾತ್ ಗೆ ಹಾರಿದ ಶಾಸಕರು, ಮತ್ತೆ ರೆಸಾರ್ಟ್‌ ನಲ್ಲಿ ವಾಸ್ತವ್ಯ!

ಗುಜರಾತ್ ರಾಜ್ಯಸಭೆ ಚುನಾವಣೆಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ಇಷ್ಟು ದಿನ ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿದ್ದ 43 ಕಾಂಗ್ರೆಸ್ ಶಾಸಕರು ಸೋಮವಾರ ಮುಂಜಾನೆ ಅಹ್ಮದಾಬಾದ್ ಗೆ ವಾಪಸ್ ಆಗಿದ್ದಾರೆ.

ಅಹಮದಾಬಾದ್‌: ಗುಜರಾತ್ ರಾಜ್ಯಸಭೆ ಚುನಾವಣೆಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ಇಷ್ಟು ದಿನ ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿದ್ದ 43 ಕಾಂಗ್ರೆಸ್ ಶಾಸಕರು ಸೋಮವಾರ ಮುಂಜಾನೆ ಅಹ್ಮದಾಬಾದ್ ಗೆ ವಾಪಸ್  ಆಗಿದ್ದಾರೆ.

ಮಂಗಳವಾರ ನಡೆಯಲಿರುವ ರಾಜ್ಯಸಭೆ ಚುನಾವಣೆಯ ತಂತ್ರಗಾರಿಕೆಗಾಗಿ ಚುನಾವಣೆ ಅಭ್ಯರ್ಥಿಯೂ ಆಗಿರುವ ಬಿಜೆಪಿ ಅಧ್ಯಕ್ಷ ಅಹ್ಮದ್‌ ಪಟೇಲ್‌ ಭಾನುವಾರ ಅಹಮದಾಬಾದ್‌ ಗೆ ಆಗಮಿಸಿದ್ದು, 44 ಮಂದಿ ಕಾಂಗ್ರೆಸ್‌ ಶಾಸಕರು  ಬೆಂಗಳೂರು ರೆಸಾರ್ಟ್‌ನಿಂದ ಆಗಮಿಸುತ್ತಿದ್ದಂತೆಯೇ ಅವರನ್ನು ನೇರವಾಗಿ ಆನಂದ್‌ ನಲ್ಲಿರುವ ಖಾಸಗಿ ರೆಸಾರ್ಟ್‌ ಗೆ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್  ಅಭ್ಯರ್ಥಿ ಅಹ್ಮದ್ ಪಟೇಲ್ ಅವರು ನಮ್ಮ ಎಲ್ಲ 44 ಶಾಸಕರೂ ಒಗ್ಗಟ್ಟಾಗಿದ್ದು, ನಮ್ಮ ಗೆಲುವು ಶತಃಸಿದ್ಧ ಎಂದು ವಿಶ್ವಾಸವ್ಯಕ್ತಪಡಿಸಿದ್ದಾರೆ.

ಗುಜರಾತ್ ಕಾಂಗ್ರೆಸ್ ಪ್ರಭಾವಿ ಮುಖಂಡರಾಗಿದ್ದ ಶಂಕರ್ ಸಿಂಗ್ ವಘೇಲಾ ಅವರು ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾಗುತ್ತಿದ್ದಂತೆಯೇ ಪಕ್ಷದ ಇತರೆ ಶಾಸಕರೂ ಕೂಡ ಆಪರೇಷನ್ ಕಮಲಕ್ಕೆ ತುತ್ತಾಗುತ್ತಾರೆ ಎನ್ನುವ  ಭೀತಿಯಿಂದ ಕಳೆದ ಜುಲೈ 29ರಂದು ಕಾಂಗ್ರೆಸ್ ಹೈಕಮಾಂಡ್ ತನ್ನ ಎಲ್ಲ ಗುಜರಾತ್ ಶಾಸಕರನ್ನು ಬೆಂಗಳೂರಿಗೆ ರವಾನಿಸಿತ್ತು. ಬೆಂಗಳೂರಿನ ಈಗಲ್ಟನ್ ರೆಸಾರ್ಟ್ ನಲ್ಲಿ ಶಾಸಕರಿಗೆ ವಾಸ್ತವ್ಯ ಕಲ್ಪಿಸಲಾಗಿತ್ತು. ಇದೀಗ  ಮಂಗಳವಾರ ರಾಜ್ಯಸಭೆ ಚುನಾವಣೆ ನಡೆಯಲಿದ್ದು, ಅಂತಿಮ ಕಸರತ್ತಾಗಿ ಶಾಸಕರನ್ನು ಪುನಃ ಗುಜರಾತ್ ಗೆ ವಾಪಸ್ ಕರೆಸಿಕೊಳ್ಳಲಾಗಿದೆ.

ಗುಜರಾತ್ ನಲ್ಲಿಯೂ ಕೂಡ ಶಾಸಕರನ್ನು ಖಾಸಗಿ ರೆಸಾರ್ಟ್ ನಲ್ಲಿ ಇಡಲಾಗಿದ್ದು, ಬೇರಾವುದೇ ಪಕ್ಷಗಳ ಮುಖಂಡರು ಅವರನ್ನು ಸಂಪರ್ಕಿಸದಂತೆ ಎಚ್ಚರಿಕೆ ವಹಿಸಲಾಗಿದೆ.

ಸೋನಿಯಾ ಗಾಂಧಿ ಪರಮಾಪ್ತರೂ ಕೂಡ ಆಗಿರುವ ಅಹ್ಮದ್‌ ಪಟೇಲ್‌ ಅವರ ಪಾಲಿಗೆ ನಿರ್ಣಾಯಕವಾಗಿರುವ ಹಾಲಿ ರಾಜ್ಯಸಭೆ ಚುನಾವಣೆಯಲ್ಲಿ ಗೆಲುವಿಗಾಗಿ ಕಾಂಗ್ರೆಸ್‌ ತನ್ನೆಲ್ಲ ಶಕ್ತಿ, ಸಾಮರ್ಥ್ಯ‌ಗಳನ್ನು ಪಣಕ್ಕಿಟ್ಟಿದ್ದರೆ, ಅವರನ್ನು  ಸೋಲಿಸಲು ಬಿಜೆಪಿ ಭಾರಿ ತಂತ್ರಗಳನ್ನು ಹೆಣೆಯುತ್ತಿದೆ. ಮೂರು ಸ್ಥಾನಗಳಿಗಾಗಿ ನಡೆಯುವ ಚುನಾವಣೆಯಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಮತ್ತು ಕೇಂದ್ರ ಸಚಿವೆ ಸ್ಮೃತಿ ಇರಾನಿ ಆಯ್ಕೆ ಖಚಿತವಾಗಿದ್ದು, ಮೂರನೇ ಸ್ಥಾನಕ್ಕೆ ಅಹ್ಮದ್‌  ಪಟೇಲ್‌ ಮತ್ತು ಬಿಜೆಪಿ ಬೆಂಬಲಿತ ಬಲ್ವಂತ್‌ ಸಿನ್ಹಾ ನಡುವೆ ಪ್ರಬಲ ಸ್ಪರ್ಧೆ ಎದುರಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸತತ 3ನೇ ದಿನ SIR ವಿರುದ್ಧ ಪ್ರತಿಭಟನೆ: ರಾಜ್ ಘಾಟ್ ನತ್ತ ಇಂಡಿಯಾ ಬ್ಲಾಕ್ ಸಂಸದರ ಮೆರವಣಿಗೆ!

ಜಿಎಸ್‌ಟಿ ಮಂಡಳಿಯಿಂದ ಪ್ರಕ್ರಿಯೆ ಸುಧಾರಣೆಗಳಿಗೆ ಅನುಮೋದನೆ; ಬಂಧನದ ಅಧಿಕಾರಕ್ಕೆ ಕಡಿವಾಣ!

ಶಿಕಾರಿಪುರದ ಈ ಗ್ರಾಮದಲ್ಲಿ ಬೀಗರೂಟ ಹಾಕಿದ್ರೆ ₹1 ಲಕ್ಷ, ಉಂಡು ಬಂದ್ರೆ ₹50 ಸಾವಿರ ದಂಡ! ಇಲ್ಲಿದೆ ಸ್ಫೋಟಕ ಕಾರಣ...

ಫ್ರೀಡಂ ಪಾರ್ಕ್‌ನಲ್ಲಿ CJP ಪ್ರತಿಭಟನೆ: ಜ್ಞಾನೇಶ್ ಹೋದರೆ ಅಜ್ಞಾನೇಶ್ ಬರುತ್ತಾನೆ; ಮೊದಲು SIR ರದ್ದುಗೊಳಿಸಿ - ಪ್ರಕಾಶ್ ರಾಜ್

ರಮೇಶ್ ಜಾರಕಿಹೊಳಿಗೆ ಸ್ಟಿಂಗ್ ಮಾಡಿದ್ದು ಯಾರು? ಒಬ್ಬ CM ಇಂಥಾ ಕೀಳು ಮಟ್ಟಕ್ಕೆ ಇಳಿಯಬಾರದಿತ್ತು: ಛಲವಾದಿ ನಾರಾಯಣಸ್ವಾಮಿ