ಕಳೆದ 20 ವರ್ಷಗಳಿಂದ ಮೋದಿಗೆ ರಾಖಿ ಕಟ್ಟುತ್ತಿರುವ ಪಾಕ್ ಮುಸ್ಲಿಂ ಸಹೋದರಿ!
ನವದೆಹಲಿ: ದೇಶದಾದ್ಯಂತ ಸಹೋದರ-ಸಹೋದರಿಯರ ಹಬ್ಬ ರಕ್ಷಣಾ ಬಂಧನವನ್ನು ಆಚರಿಸಲಾಗುತ್ತಿದ್ದು, ಭಾರತ ಮೂಲದ ಪಾಕಿಸ್ತಾನಿ ಮುಸ್ಲಿಂ ಮಹಿಳೆಯೊಬ್ಬರು ಕಳೆದ 20 ವರ್ಷಗಳಿಂದರೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ರಾಖಿ ಕಟ್ಟುತ್ತಿರುವುದಾಗಿ ಹೇಳಿದ್ದಾರೆ.
ಖಮರ್ ಮೊಹ್ಸಿನ್ ಶೇಖ್ ಭಾರತ ಮೂಲದವರಾಗಿದ್ದು, ವಿವಾಹದ ಬಳಿಕ ಪಾಕಿಸ್ತಾನದಲ್ಲಿ ನೆಲೆಯೂರಿದ್ದಾರೆ. ಕಳೆದ 22-23 ವರ್ಷಗಳಿಂದಲೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ರಾಖಿಯನ್ನು ಕಟ್ಟುತ್ತಿರುವುದಾಗಿ ಮೊಹ್ಸಿನ್ ಹೇಳಿಕೊಂಡಿದ್ದಾರೆ.
ನರೇಂದ್ರ ಮೋದಿಯವರಿಗೆ ಕಳೆದ 22-23 ವರ್ಷಗಳಿಂದರೂ ರಕ್ಷಾ ಬಂಧನ ದಿನದಂದು ರಾಖಿಯನ್ನು ಕಟ್ಟುತ್ತಿದ್ದೇನೆ. ಈ ಬಾರಿ ಕೂಡ ರಾಖಿ ಕಟ್ಟಲು ಬಹಳ ಉತ್ಸುಕಳಾಗಿದ್ದೇನೆ. ಮೋದಿಯವರು ಪ್ರಧಾನಿಯಾಗಿರುವುದರಿಂದ ಈ ಬಾರಿ ಆವರಿಗೆ ಸಮಯವಿರುವುದಿಲ್ಲ ಎಂದು ಕೊಂಡಿದ್ದೆ. ಆದರೆ, ಎರಡು ದಿನಗಳ ಮುಂಚೆ ದೂರವಾಣಿ ಕರೆ ಮಾಡಿ ನನ್ನೊಂದಿಗೆ ಮಾತನಾಡಿದ್ದರು. ಇದು ನನಗೆ ಬಹಳ ಸಂತೋಷವನ್ನು ತಂದಿದೆ ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿಯವರು ರಾಷ್ಟ್ರೀಯ ಸ್ವಯಂಸೇವಖ ಸಂಘದ ಕಾರ್ಯಕರ್ತರಾಗಿದ್ದಾಗಿನಿಂದಲೂ ನಾನು ಅವರಿಗೆ ರಾಖಿಯನ್ನು ಕಟ್ಟುತ್ತಿದ್ದೇನೆ. ಮೊದಲ ಬಾರಿಗೆ ನಾನು ಮೋದಿಯವರಿಗೆ ರಾಖಿ ಕಟ್ಟಿದ್ದಾಗ ಅವರು ಆರ್'ಎಸ್ಎಸ್ ಕಾರ್ಯಕರ್ತರಾಗಿದ್ದರು. ಆದರೆ, ಕಠಿಣ ಶ್ರಮ ಇಂದು ದೇಶದ ಪ್ರಧಾನಮಂತ್ರಿಯಾಗುವಂತೆ ಮಾಡಿದೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics