ದೇಶ

ಆಂಧ್ರ ಸಿಎಂ ನಾಯ್ಡು ಹತ್ಯೆ ಹೇಳಿಕೆ: ಜಗನ್ ಮೋಹನ್ ರೆಡ್ಡಿ ವಿರುದ್ಧ ತನಿಖೆಗೆ ಆದೇಶ

Manjula VN
ಗುಂಟೂರು: ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರನ್ನು ನಡುರಸ್ತೆಯಲ್ಲಿ ಗುಂಡಿಟ್ಟು ಹತ್ಯೆ ಮಾಡಿದರೂ ತಪ್ಪಲ್ಲ ಎಂದು ಹೇಳಿಕೆ ನೀಡಿದ್ದ ವೈಎಸ್ಆರ್ ಕಾಂಗ್ರೆಸ್ ಅಧ್ಯಕ್ಷ ಜಗನ್ ಮೋಹನ್ ರೆಡ್ಡಿ ವಿರುದ್ಧ ರಾಜ್ಯ ಚುನಾವಣಾ ಆಯೋಗ ಭಾನುವಾರ ತನಿಖೆಗೆ ಆದೇಶಿಸಿದೆ. 
ಈ ನಡುವೆ ಜಗನ್ ಮೋಹನ್ ರೆಡ್ಡಿ ವಿರುದ್ಧ ಕ್ರಿಮಿನಲ್ ಚಟುವಟಿಕೆ ಆರೋಪದಡಿ ಕಾನೂನು ಕ್ರಮ ಕೈಗೊಳ್ಳಲು ಆಂಧ್ರಪ್ರದೇಶ ಸರ್ಕಾರ ಮುಂದಾಗಿದೆ. 
ನಂದ್ಯಾಲ ವಿಧಾನಸಭಾ ಉಪಚುನಾವಣೆ ರ್ಯಾಲಿಯೊಂದರಲ್ಲಿ ಪಕ್ಷದ ಕಾರ್ಯಕರ್ತನ್ನುದ್ದೇಶಿಸಿ ಮಾತನಾಡಿದ್ದ ಜಗನ್ ಅವರು, ಡಬಲ್ ಡಿಲೀಂಗ್ ಹಾಗೂ ವಿಶ್ವಾಸಘಾತುಕತನ ಹೊಂದಿರುವ ಚಂದ್ರಬಾಬು ನಾಯ್ಡು ಅವರಂತ ವ್ಯಕ್ತಿಯನ್ನು ಸಾರ್ವಜನಿಕವಾಗಿ ಗುಂಡಿಟ್ಟು ಹತ್ಯೆ ಮಾಡಿದರೂ ತಪ್ಪಲ್ಲ. ನಾಯ್ಡು ನನ್ನ ಮಾವ ಎನ್ ಟಿಆರ್ ಸಾವಿಗೆ ಕಾರಣರಾಗಿದ್ದಾರೆ. ಆದರೆ ಎನ್ ಟಿ ಆರ್ ಅವರ ಭಾವಚಿತ್ರವನ್ನು ಚುನಾವಣಾ ಪ್ರಚಾರಕ್ಕೆ ಬಳಸುವಾಗ ಅದರ ಬಗ್ಗೆ ಯೋಚನೆ ಮಾಡುವುದಿಲ್ಲ ಚುನಾವಣೆ ವೇಳೆ ಮಾತ್ರ ಅವರಿಗೆ ಹಿಂದುಳಿದ ಸಮುದಾಯ ನೆನಪಿಗೆ ಬರುತ್ತದೆ. ರೈತರನ್ನು ಮಹಿಳೆಯರನ್ನು ಹಾಗೂ ನಿರುದ್ಯೋಗಿಗಳನ್ನು ಸರ್ಕಾರ ನಿರ್ಲಕ್ಷ್ಯಿಸುತ್ತಿದೆ ಎಂದು ಆರೋಪಿಸಿದ್ದರು. 
SCROLL FOR NEXT