ಭಾರತೀಯ ಸೇನೆಗೆ ಶೀಘ್ರವೇ ಸಿಗಲಿದೆ 1.58 ಲಕ್ಷ ಬ್ಯಾಲಿಸ್ಟಿಕ್ ಹೆಲ್ಮೆಟ್!
ಭಾರತೀಯ ಸೇನೆಗಾಗಿ 1.58 ಲಕ್ಷ ಬ್ಯಾಲಿಸ್ಟಿಕ್ ಹೆಲ್ಮೆಟ್ ಗಳನ್ನು ತರಿಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ನವದೆಹಲಿ: ಭಾರತೀಯ ಸೇನೆಗಾಗಿ 1.58 ಲಕ್ಷ ಬ್ಯಾಲಿಸ್ಟಿಕ್ ಹೆಲ್ಮೆಟ್ ಗಳನ್ನು ತರಿಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ರಾಜ್ಯಸಭೆಗೆ ಈ ಬಗ್ಗೆ ರಕ್ಷಣಾ ಇಲಾಖೆಯ ರಾಜ್ಯ ಸಚಿವ ಸುಭಾಷ್ ಭಾಮ್ರೆ ಮಾಹಿತಿ ನೀಡಿದ್ದು, ಭಾರತೀಯ ಸೇನೆಗೆ 1,58,279 ಬ್ಯಾಲಿಸ್ಟಿಕ್ ಹೆಲ್ಮೆಟ್ ಗಳನ್ನು ನೀಡುವುದಕ್ಕೆ ನಡೆದಿದ್ದ ಗುತ್ತಿಗೆ ಪ್ರಕ್ರಿಯೆ 2016 ರ ಡಿಸೆಂಬರ್ ನಲ್ಲಿ ಪೂರ್ಣಗೊಂಡಿದ್ದು, ಶೀಘ್ರವೇ ಭಾರತೀಯ ಸೇನೆಗೆ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಕಾನ್ಪುರ ಮೂಲದ ಕೈಗಾರಿಕಾ ಸಂಸ್ಥೆ ಎಂಕೆಯು ಲಿಮಿಟೆಡ್ ಬ್ಯಾಲಿಸ್ಟಿಕ್ ಹೆಲ್ಮೆಟ್ ಗಳನ್ನು ತಯಾರಿಸುತ್ತಿದ್ದು, ಹಗುರವಾದ ತೂಕ ಹೊಂದಿದ್ದು, ಬ್ಯಾಟರಿ ಹಾಗೂ ಹೆಚ್ಚಿನ ಸುರಕ್ಷತಾ ಸೌಲಭ್ಯಗಳನ್ನು ಹೊಂದಿದೆ ಎಂದು ಸೇನಾ ಮೂಲಗಳು ತಿಳಿಸಿವೆ.